ಬೆಂಗಳೂರು:ಕರೋನಾ ದಿನೇ ದಿನೇ ಬಾಧಿಸುತ್ತಿದ್ದು, ಪಾಸಿಟೀವ್ ಕೇಸ್ ಗಳು ಹೆಚ್ಚಾಗುತ್ತಲೇ ಇವೆ. ಕೋರೋನಾ ಸೋಂಕಿತರ ಸಂಖ್ಯೆ 144ಕ್ಕೆ ಏರಿದ್ದು, ಅದರಲ್ಲಿ ಮೂವರು ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈಗಾಗಲೇ ದೆಹಲಿಯ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಂದವರ ಸಂಖ್ಯೆ ಹೆಚ್ಚಿದ್ದು, ದಿನಕಳೆದಂತೆ ಪಾಸಿಟಿವ್ ಕೇಸ್ ದಾಖಲಾಗುತ್ತಿದೆ.
ಪರಿಸ್ಥಿತಿ ಹೀಗಿರುವಾಗ, ಮುಂದಿನ ದಿನಗಳಲ್ಲಿ ವೆಂಟಿಲೇಟರ್ ಸಮಸ್ಯೆ ಉದ್ಭವಿಸಬಹುದು. ಅಂದಹಾಗೇ, ಮುಂದೊಂದು ದಿನ ಕೋರೊನಾದಿಂದ ವೆಂಟಿಲೇಟರ್ ಬೇಕಾದಲ್ಲಿ ಅದರ ಶಾರ್ಟೆಜ್ ಆಗದೇ ಇರೋಲ್ಲ.
ಯಾಕೆ ಅಂತೀರಾ, ನಮ್ಮ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿರೋ ವೆಂಟಿಲೇಟರ್ಗಳ ಸಂಖ್ಯೆ ಕೇಳಿದ್ರೆ ನೀವು ನಿಜಕ್ಕೂ ಶಾಕ್ ಆಗುತ್ತಿರಾ. ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿರೋದು ಕೇವಲ 178 ವೆಂಟಿಲೇಟರ್ಗಳು ಮಾತ್ರ. ಸರ್ಕಾರಿ ಆಸ್ಪತ್ರೆಗಳ ದುಸ್ಥಿತಿ ಈ ವೆಂಟಿಲೇಟರ್ಗಳ ಸಂಖ್ಯೆ ಬಿಚ್ಚಿಡ್ತಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೇ ವೆಂಟಿಲೇಟರ್ಗಳ ಸಂಖ್ಯೆಯನ್ನ ಬಹಿರಂಗ ಪಡಿಸಿದೆ. ರಾಜ್ಯದ 7 ಕೋಟಿ ಜನಸಂಖ್ಯೆಗೆ ಸರ್ಕಾರಿ ಆಸ್ಪತ್ರೆಗಳು ಹೊಂದಿರೋದು ಕೇವಲ 178 ವೆಂಟಿಲೇಟರ್ಗಳು ಮಾತ್ರ.
ಕೇಂದ್ರ ಸರ್ಕಾರದ ನಿರ್ದೇಶನದಂತೆ ರಾಜ್ಯದಲ್ಲಿ ಕೋವಿಡ್ ಚಿಕಿತ್ಸೆಗಾಗಿ 9 ಆಸ್ಪತ್ರೆಗಳನ್ನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗುರುತಿಸಿದ್ದು, ಈ 9 ಸರ್ಕಾರಿ ಆಸ್ಪತ್ರೆಗಳಲ್ಲಿ 178 ವೆಂಟಿಲೇಟರ್ಗಳು ಇವೆ. ಇನ್ನು ಸರ್ಕಾರಿ ಆಸ್ಪತ್ರೆಗಳ ಐಸಿಯು ಬೆಡ್ ಗಳ ಸಂಖ್ಯೆ 244 ಮಾತ್ರ ಇದೆ.
1)ವಿಕ್ಟೋರಿಯಾ ಆಸ್ಪತ್ರೆಯಲ್ಲಿ 50 ವೆಂಟಿಲೇಟರ್ಗಳು
2)ಬೌರಿಂಗ್ & ಲೇಡಿ ಕರ್ಜನ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಕೇವಲ 4 ವೆಂಟಿಲೇಟರ್ಸ್