ಕರ್ನಾಟಕ

karnataka

ETV Bharat / state

ನೋಟ್ ಬ್ಯಾನ್ ಬಳಿಕ ಎಲ್ಲೆಲ್ಲಿ ಎಷ್ಟೆಷ್ಟು ಹಣ ಸೀಜ್ ಆಯಿತು ಗೊತ್ತಾ? - noteban

ಖೋಟಾ ನೋಟು ಜಪ್ತಿ ಪ್ರಕರಣಗಳ ಬಗ್ಗೆ ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕ (ಎನ್​ಸಿಆರ್​ಬಿ) ತನ್ನ ಅಂಕಿ-ಅಂಶ ಬಿಡುಗಡೆ ಮಾಡಿದೆ. ಯಾವ ರಾಜ್ಯ ಫಸ್ಟ್​ ಯಾವ ರಾಜ್ಯ ಲಾಸ್ಟ್​ ಅನ್ನೋದನ್ನು ಇಲ್ಲಿ ಕೊಡಲಾಗಿದೆ.

ನೋಟ್ ಬ್ಯಾನ್

By

Published : Jun 28, 2019, 5:10 PM IST

ಬೆಂಗಳೂರು:ದೇಶದಲ್ಲಿ ನೋಟ್ ಬ್ಯಾನ್ ಬಳಿಕವೂ ಖೋಟಾ ನೋಟು ಚಲಾವಣೆ ಅವ್ಯಾಹತವಾಗಿ ಮುಂದುವರೆದಿದೆ.‌ ಇದಕ್ಕೆ ಪೂರಕವಾಗಿ ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕ (ಎನ್​ಸಿಆರ್​ಬಿ) ಅಕ್ರಮವಾಗಿ ನೋಟು ಚಲಾವಣೆಯಾದ ಮೊತ್ತ ಹಾಗೂ ಎಷ್ಟು ಮಂದಿ ಆರೋಪಿಗಳನ್ನು ಬಂಧಿಸಿರುವ ಕುರಿತಂತೆ ಸಂಪೂರ್ಣ ಮಾಹಿತಿ ನೀಡಿದೆ.

ಪ್ರಸಕ್ತ ವರ್ಷ ಸೇರಿದಂತೆ ಹಿಂದಿನ ಮೂರೂ ವರ್ಷಗಳ ಖೋಟಾ ನೋಟು ಜಪ್ತಿ ಪ್ರಕರಣಗಳ ದಾಖಲೆ ಕುರಿತು NCRB ಎಲ್ಲ ರಾಜ್ಯಗಳಲ್ಲಿ ದಾಖಲಾದ ಖೋಟಾ ನೋಟು ಪ್ರಕರಣಗಳ ಬಗ್ಗೆ ಅಂಕಿ - ಅಂಶ ಮಾಹಿತಿ ನೀಡಿದೆ. ಹಾಗಾದರೆ, ಈ ವರ್ಷ ದಾಖಲಾದ ಖೋಟಾ ನೋಟು ಪ್ರಕರಣಗಳು ಎಷ್ಟು‍?‌ ಯಾವ ರಾಜ್ಯದಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂಬುದರ ಮಾಹಿತಿ ಇಲ್ಲಿದೆ.

ಜನವರಿಯಿಂದ ಜೂನ್ 18 ರವರೆಗಿನ ಅಂಕಿ ಅಂಶಗಳ ಪ್ರಕಾರ 2019 ರಲ್ಲಿ ದೇಶದಲ್ಲಿ ಒಟ್ಟು 254 ಖೋಟಾ ನೋಟು ಪ್ರಕರಣ ದಾಖಲಾಗಿದೆ. ಇದರಲ್ಲಿ ಒಟ್ಟು ಖೋಟಾ ನೋಟು 5.05 ಕೋಟಿ ಜಪ್ತಿ ಮಾಡಿಕೊಂಡು 357 ಆರೋಪಿಗಳನ್ನು ಬಂಧಿಸಲಾಗಿದೆ.

ಅತಿ ಹೆಚ್ಚು ಖೋಟಾ ನೋಟು ಜಪ್ತಿ ಮಾಡಿಕೊಂಡ ರಾಜ್ಯಗಳಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದು, 1,66,56,000 ಕೋಟಿ ರೂ. ಜಪ್ತಿಯಾಗಿದೆ.‌ ಕರ್ನಾಟಕ - 20,9000 ರೂ. ಹಣ ಜಪ್ತಿಯಾದರೆ, 8 ಪ್ರಕರಣ ದಾಖಲಿಸಿಕೊಂಡು 22 ಜನರನ್ನು ಬಂಧಿಸಲಾಗಿದೆ.

ಅತಿ ಕಡಿಮೆ ಖೋಟಾ ನೋಟು ಜಪ್ತಿ ಪ್ರಕರಣಗಳ ಪೈಕಿ ಅಂಡಮಾನ್ ನಿಕೋಬಾರ್, ಅರುಣಾಚಲ ಪ್ರದೇಶ, ಚಂಡೀಗಢ, ದಾದ್ರಾ ಹಾಗೂ ನಗರ ಹವೇಲಿ, ದಮನ್ ಹಾಗೂ ಡಿಯು, ಹರಿಯಾಣ, ಹಿಮಾಚಲ ಪ್ರದೇಶ, ಜಾರ್ಖಂಡ್, ಮಣಿಪುರ, ಮೇಘಾಲಯ, ನಾಗಲ್ಯಾಂಡ್, ಓಡಿಶಾ, ಸಿಕ್ಕಿಂ, ತ್ರಿಪುರ, ಉತ್ತರಾಖಂಡ ರಾಜ್ಯಗಳಲ್ಲಿ ಕಡಿಮೆ ಪ್ರಕರಣಗಳು ದಾಖಲಾಗಿವೆ.

ಇನ್ನು 2018 ರ ಅಂಕಿ ಅಂಶ ಪ್ರಕಾರ ದಾಖಲಾದ ಒಟ್ಟು 884 ಪ್ರಕರಣಗಳಿಂದ 17.75 ಕೋಟಿ ರೂ.ವಶಕ್ಕೆ ಪಡೆದುಕೊಂಡು 969 ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ಈ ಪೈಕಿ ಅತಿ ಹೆಚ್ಚು ಖೋಟಾ ನೋಟು ಪ್ರಕರಣ ದೆಹಲಿಯಲ್ಲಿ ದಾಖಲಾಗಿದ್ದು 3,63,22,950 ಕೋಟಿ ರೂ. ಜಪ್ತಿ ಮಾಡಿಕೊಳ್ಳಲಾಗಿದೆ‌. ಕರ್ನಾಟಕದಲ್ಲಿ 1,71,08,300 ರೂ.ಮೌಲ್ಯದ ಹಣ ಜಪ್ತಿ ಮಾಡಿ 28 ಪ್ರಕರಣ ದಾಖಲಿಸಿ 60 ಆರೋಪಿಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

ABOUT THE AUTHOR

...view details