ಕರ್ನಾಟಕ

karnataka

ರಾಷ್ಟ್ರೀಯ ಕಬಡ್ಡಿ ಪಟು ಹೊನ್ನಪ್ಪ ನಿವಾಸಕ್ಕೆ ಡಿಕೆಶಿ.. ಕೈ ಅಭ್ಯರ್ಥಿ ಪರ ಮತಯಾಚನೆ

By

Published : Oct 25, 2020, 2:11 PM IST

ಮತದಾರರು ತೋರಿಸಿದ ವಿಶ್ವಾಸವನ್ನು ಧಿಕ್ಕರಿಸಿ ಹಣದ ಆಸೆಗಾಗಿ ಮುನಿರತ್ನ, ಎರಡು ಸಾರಿ ಆಯ್ಕೆಯಾಗಲು ಕಾರಣವಾಗಿದ್ದ ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿ ತೆರಳಿದ್ದಾರೆ. ಇವರು ಪಕ್ಷಕ್ಕೆ ಮಾತ್ರವಲ್ಲ ಜನರಿಗೂ ಮೋಸ ಮಾಡಿದ್ದಾರೆ. ದಯವಿಟ್ಟು ಇಂತವರಿಗೆ ಮತದಾನ ಮಾಡಬೇಡಿ ಎಂದು ಹೊನ್ನಪ್ಪ ಹಾಗೂ ಅವರ ಕುಟುಂಬ ಸದಸ್ಯರಿಗೆ ಡಿಕೆಶಿ ಮನವಿ ಮಾಡಿಕೊಂಡಿದ್ದಾರೆ..

Dks visits Kabaddi Player Honnappa residence in Bangalore
ರಾಷ್ಟ್ರೀಯ ಕಬಡ್ಡಿ ಪಟು ಹೊನ್ನಪ್ಪ ನಿವಾಸಕ್ಕೆ ಡಿಕೆಶಿ ಭೇಟಿ.

ಬೆಂಗಳೂರು:ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ರಾಷ್ಟ್ರೀಯ ಕಬಡ್ಡಿ ಮಾಜಿ ಆಟಗಾರ ಹೊನ್ನಪ್ಪನವರ ಮತ್ತಿಕೆರೆ ನಿವಾಸಕ್ಕೆ ಭೇಟಿ ನೀಡಿ ತಮ್ಮ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಇಂದು ಬೆಳಗ್ಗೆ ಹೊನ್ನಪ್ಪ ನಿವಾಸಕ್ಕೆ ಭೇಟಿ ಕೊಟ್ಟ ಅವರು, ಅಲ್ಲಿಯೇ ಉಪಹಾರ ಸೇವನೆ ಮಾಡಿದರು. ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಅವರು, ಇದೇ ಸಂದರ್ಭ ಕ್ಷೇತ್ರ ವ್ಯಾಪ್ತಿಯ ವಿವಿಧ ಗಣ್ಯ ಮತದಾರರ ನಿವಾಸಕ್ಕೆ ತೆರಳಿ ಭೇಟಿ ಮಾಡಿ ಬರುತ್ತಿದ್ದಾರೆ. ಈ ಕಾರ್ಯದ ಭಾಗವಾಗಿಯೇ ಇಂದು ಹೊನ್ನಪ್ಪ ನಿವಾಸಕ್ಕೆ ಭೇಟಿ ಕೊಟ್ಟಿದ್ದ ಅವರು, ಸುದೀರ್ಘ ಸಮಾಲೋಚನೆ ನಡೆಸಿ ಪಕ್ಷದ ಅಭ್ಯರ್ಥಿ ಕುಸುಮ ಹನುಮಂತರಾಯಪ್ಪಗೆ ಮತ ನೀಡುವಂತೆ ಮನವಿ ಮಾಡಿದ್ದಾರೆ.

ರಾಷ್ಟ್ರೀಯ ಕಬಡ್ಡಿ ಪಟು ಹೊನ್ನಪ್ಪ ನಿವಾಸಕ್ಕೆ ಡಿಕೆಶಿ ಭೇಟಿ

ಒಬ್ಬ ನೊಂದ ಹಾಗೂ ಬೆಂದ ಹೆಣ್ಣುಮಗಳನ್ನು ಚುನಾವಣೆಗೆ ನಿಲ್ಲಿಸಿದ್ದೇವೆ. ಸಾಮಾಜಿಕ ನ್ಯಾಯದ ರಕ್ಷಣೆ ಆಗಬೇಕಿದೆ. ಅಲ್ಲದೆ ಮುನಿರತ್ನ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಬಗೆದು ತೆರಳಿರುವ ಹಿನ್ನೆಲೆ ಅವರ ಬದಲಿಗೆ ಒಬ್ಬ ವಿದ್ಯಾವಂತ ಹೆಣ್ಣುಮಗಳನ್ನು ಕಣಕ್ಕಿಳಿಸಿದ್ದೇವೆ. ಇವರಿಗೆ ಮತ ನೀಡುವ ಮೂಲಕ ತಮ್ಮ ಮತದ ಮೌಲ್ಯವನ್ನು ಹೆಚ್ಚಿಸಿಕೊಳ್ಳುವಂತೆ ಮನವಿ ಮಾಡಿದರು.

ಮತದಾರರು ತೋರಿಸಿದ ವಿಶ್ವಾಸವನ್ನು ಧಿಕ್ಕರಿಸಿ ಹಣದ ಆಸೆಗೆ ಮುನಿರತ್ನ, ಎರಡು ಸಾರಿ ಆಯ್ಕೆಯಾಗಲು ಕಾರಣವಾಗಿದ್ದ ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿ ತೆರಳಿದ್ದಾರೆ. ಇವರು ಪಕ್ಷಕ್ಕೆ ಮಾತ್ರವಲ್ಲ ಜನರಿಗೂ ಮೋಸ ಮಾಡಿದ್ದಾರೆ. ದಯವಿಟ್ಟು ಇಂತವರಿಗೆ ಮತದಾನ ಮಾಡಬೇಡಿ ಎಂದು ಹೊನ್ನಪ್ಪ ಹಾಗೂ ಅವರ ಕುಟುಂಬ ಸದಸ್ಯರಿಗೆ ಡಿಕೆಶಿ ಮನವಿ ಮಾಡಿಕೊಂಡರು.

ನಂತರ ನೇರವಾಗಿ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಗೆ ಆಗಮಿಸಿದ ಡಿ.ಕೆ. ಶಿವಕುಮಾರ್, ಕಚೇರಿಯಲ್ಲಿ ಆಯುಧಪೂಜೆ, ವಿಜಯದಶಮಿ ನಿಮಿತ್ತ ಪೂಜೆ ನೆರವೇರಿಸಿದ ಅವರು, ವಿದ್ಯಾದೇವತೆ ಶಾರದೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಸದಾಶಿವನಗರ ನಿವಾಸದಲ್ಲಿ ಕೂಡ ಆಯುಧಪೂಜೆ ಹಾಗೂ ವಿಜಯದಶಮಿ ಪ್ರಯುಕ್ತ ಹಮ್ಮಿಕೊಂಡಿದ್ದ ಪೂಜಾ ಕಾರ್ಯಕ್ರಮದಲ್ಲಿ ಡಿಕೆಶಿ ಹಾಗೂ ಸೋದರ ಮತ್ತು ಸಂಸದ ಡಿಕೆ ಸುರೇಶ್ ಪಾಲ್ಗೊಂಡರು. ಪೂಜೆಯ ಬಳಿಕ ಮಧ್ಯಾಹ್ನದ ನಂತರ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ವಿವಿಧ ಭಾಗಗಳಿಗೆ ತೆರಳಿ ಪ್ರಚಾರ ಕಾರ್ಯ ನಡೆಸಲಿದ್ದಾರೆ.

TAGGED:

ABOUT THE AUTHOR

...view details