ಕರ್ನಾಟಕ

karnataka

ETV Bharat / state

ಸಾರಿಗೆ ನೌಕರರ ಮನವಿ ಆಲಿಸಲು ಸಿಎಂ, ಸಚಿವರು ನಾಪತ್ತೆ: ಡಿಕೆಶಿ

ಸಾರಿಗೆ ನೌಕರರ ಪ್ರತಿಭಟನೆಗೆ ಸದಾ ನಮ್ಮ ಬೆಂಬಲ ಇರಲಿದೆ. ಸರ್ಕಾರವು ಸಂಬಂಧಪಟ್ಟವರನ್ನು ಕರೆಸಿ ಅಧಿಕಾರಿಗಳ ಜೊತೆ ಸಭೆ ನಡೆಸಲಿ. ನಾವು ಬಂದರೆ ಭಯಪಡುತ್ತೀರಾ. ಹೀಗಾಗಿ, ನಾವ್ಯಾರೂ ಸಭೆಗೆ ಬರುವುದಿಲ್ಲ ಎಂದು ಡಿಕೆಶಿ ಹೇಳಿದರು.

dk-shivakumar-statement
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

By

Published : Dec 12, 2020, 5:08 PM IST

Updated : Dec 12, 2020, 5:19 PM IST

ಬೆಂಗಳೂರು:ಬನಶಂಕರಿ‌ ಬಸ್ ನಿಲ್ದಾಣದಲ್ಲಿ‌ ಸಾರಿಗೆ ನೌಕರರು‌ ತೀವ್ರ ಪ್ರತಿಭಟನೆ ನಡೆಸುತ್ತಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸ್ಥಳಕ್ಕೆ ಭೇಟಿ ನೌಕರರ ಸಮಸ್ಯೆಗಳನ್ನು ಆಲಿಸಿ ಸರ್ಕಾರದ ವಿರುದ್ಧ ವ್ಯಕ್ತಪಡಿಸಿದರು. ಸ್ಥಳದಲ್ಲಿ ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ‌ ಪೊಲೀಸರನ್ನು ನಿಯೋಜಿಸಲಾಗಿದೆ.

ಬಳಿಕ ಮಾತನಾಡಿದ ಡಿಕೆಶಿ, ಕೊರೊನಾ ವೇಳೆ ನೌಕರರ ತ್ಯಾಗ ಬಲಿದಾನ ಮರೆಯಲು ಸಾಧ್ಯವಿಲ್ಲ. ಎಷ್ಟೋ ಕಾರ್ಮಿಕರು ವೇತನ ಸಿಗದೆ ನರಕಯಾತನೆ ಅನುಭವಿಸಿದರು. ನೌಕರರು ತೀವ್ರ ಪ್ರತಿಭಟನೆ ನಡೆಸುತ್ತಿದ್ದರೂ ಮುಖ್ಯಮಂತ್ರಿ, ಸಾರಿಗೆ ಸಚಿವರು ಕೈಗೆ ಸಿಗುತ್ತಿಲ್ಲ. ಯಾರೂ ಎಲ್ಲಿಗೆ ಹೋಗಿದ್ದಾರೆ ಗೊತ್ತಿಲ್ಲ. ಎಲ್ಲರನ್ನೂ ಹುಡುಕುವ ಕೆಲಸ ಮಾಡಬೇಕಿದೆ ಎಂದರು.

ಇದನ್ನೂ ಓದಿ...ಸಾರಿಗೆ ನೌಕರರ ವಿರುದ್ಧ ಎಸ್ಮಾ ಜಾರಿಗೊಳಿಸುವ ಹಂತ ಬಂದಿಲ್ಲ: ಬೊಮ್ಮಾಯಿ

ಮುಂದೆ ನಮ್ಮ ಕಾಂಗ್ರೆಸ್ ಸರ್ಕಾರ ಬರಲಿ. ಎಲ್ಲಾ ಮ್ಯಾನೇಜ್​ಮೆಂಟ್​ಗಳಲ್ಲಿ ನಿಮ್ಮ ಇಬ್ಬರು ನೌಕರರನ್ನು ನೇಮಿಸುತ್ತೇವೆ. ಸಾರಿಗೆ ನೌಕರರ ವಿಚಾರದ ಕುರಿತು ನಾನಿನ್ನೂ ಸರಿಯಾಗಿ ಅಧ್ಯಯನ ಮಾಡಿಲ್ಲ. ನಿನ್ನೆಯಿಂದಲೂ ಮಾಧ್ಯಮಗಳಲ್ಲಿ ನೋಡುತ್ತಿದ್ದೇನೆ. ಸರ್ಕಾರಿ ನೌಕರರಾಗಿ ಪರಿಗಣಿಸಲು ಆಗ್ರಹ ಮಾಡುತ್ತಿದ್ದೀರಿ. ಕೋವಿಡ್ ವಿಮೆ ಕೇಳುತ್ತಿದ್ದೀರಿ. ಈ ನಿಮ್ಮ ಬೇಡಿಕೆಗಳನ್ನು ಆಲಿಸಲು ಸರ್ಕಾರ ನಾಪತ್ತೆಯಾಗಿದೆ. ಸಾರಿಗೆ ನಿಗಮಗಳ ನಿರ್ದೇಶಕರು ಸರ್ಕಾರದವರೇ ತಾನೇ ಎಂದು ಪ್ರಶ್ನಿಸಿದರು.

ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ನಿಗಮಗಳೂ ಸರ್ಕಾರಕ್ಕೇ ಸೇರಿವೆ ಅಲ್ಲವೇ? ನಿಮ್ಮನ್ನೇ ಸರ್ಕಾರಿ ನೌಕರರಾಗಿ ನೇಮಿಸಬಹುದಲ್ವಾ? ಸಾರಿಗೆ ಸಚಿವರು ಎಲ್ಲಿದ್ದಾರೆ?. ಸರ್ಕಾರ ಇದೆಯೋ ಇಲ್ಲವೋ ಎಂಬ ಅನುಮಾನ ಶುರವಾಗಿದೆ. ಹಳೆಯ ಒಕ್ಕೂಟಗಳನ್ನು ತೆಗೆದು ಹಾಕಿ ಹೊಸದಾಗಿ ರಚಿಸಬೇಕಿದೆ. ಹೊಸ ಯೂನಿಯನ್​ಗಳಲ್ಲಿ ಸಾರಿಗೆ ನೌಕರರ ಪ್ರತಿನಿಧಿಗಳು ಇರಲಿ ಎಂದರು.

ಇದನ್ನೂ ಓದಿ...ಸಾರಿಗೆ ನೌಕರರ ಪ್ರತಿಭಟನೆಗೆ ಸಿದ್ದರಾಮಯ್ಯ ಸಾಥ್​: ಸಮಸ್ಯೆ ಪರಿಹಾರದ ಭರವಸೆ

ಸರ್ಕಾರ ಎಲ್ಲೋ ಎಡವಿದೆ. ಹಾಗಾಗಿಯೇ ಧರಣಿಗಳು ನಡೆಯುತ್ತಿವೆ. ಸರ್ಕಾರ ಹಟಕ್ಕೆ ಬೀಳದೇ ಮೊದಲು ಮಾತುಕತೆಗೆ ಕರೆಯಲಿ. ಇನ್ನೂ ಹಿಂದಿನ ಕಾಲದ ಒಕ್ಕೂಟ ಯೂನಿಯನ್ ನಾಯಕರನ್ನು ಇಟ್ಟುಕೊಂಡು ಸರ್ಕಾರ ಲೆಕ್ಕಾಚಾರ ಮಾಡುತ್ತಿದೆ. ಅದೆಲ್ಲ, ಕಾರ್ಯಕ್ಕೆ ಬರುತ್ತಿಲ್ಲ.‌ ಕೋಡಿಹಳ್ಳಿ ಚಂದ್ರಶೇಖರ್ ಅವರು ಸಾರಿಗೆ ನೌಕರರನ್ನು ಎತ್ತಿ ಕಟ್ಟಿದ್ದಾರೆ ಎಂಬ ಸಿಎಂ ಹೇಳಿದ್ದಾರೆ. ನೀವೇನೂ ಧರಣಿ ಮಾಡಿಯೇ ಇಲ್ಲವಾ? ನೀವೆಲ್ಲ ಏನ್ ಮಾಡಿರುವವರೋ ಅದನ್ನೇ ಎಲ್ಲರೂ ಮಾಡುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

Last Updated : Dec 12, 2020, 5:19 PM IST

ABOUT THE AUTHOR

...view details