ಕರ್ನಾಟಕ

karnataka

ETV Bharat / state

ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ವಿರುದ್ಧ ದಿಲ್ಲಿ ಪೊಲೀಸರ ಕ್ರಮ ಖಂಡನೀಯ: ಡಿಕೆಶಿ

ಕೇಂದ್ರ ಸರ್ಕಾರ ದಿಲ್ಲಿ ಯುವ ಕಾಂಗ್ರೆಸ್ ಕಚೇರಿಗೆ ಹೋಗಿ ಅವರನ್ನು ಕೋವಿಡ್ ಪರಿಹಾರ ಕೆಲಸಗಳ ಸಂಬಂಧ ವಿಚಾರಣೆ ನಡೆಸಿರುವುದು ಖಂಡನೀಯ ಎಂದು ಡಿ.ಕೆ.ಶಿವಕುಮಾರ್ ಕಿಡಿಕಾರಿದರು.

dk shivakumar
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

By

Published : May 15, 2021, 10:27 AM IST

ಬೆಂಗಳೂರು:ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ವಿರುದ್ಧ ದಿಲ್ಲಿ ಪೊಲೀಸರ ಕ್ರಮವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಖಂಡಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಯುವ ಹೋರಾಟವನ್ನು ಅಸ್ಥಿರಗೊಳಿಸುವ ಹುನ್ನಾರ ಇದಾಗಿದೆ. ಬಿ.ವಿ.ಶ್ರೀನಿವಾಸ್ ಓರ್ವ ದೊಡ್ಡ ಯುವ ನಾಯಕನಾಗಿದ್ದು, ಅವರ ಉತ್ತಮ ಕೆಲಸಕ್ಕಾಗಿ ಜನಮನ್ನಣೆ ಗಳಿಸಿದ್ದಾರೆ. ಆದರೆ, ಕೇಂದ್ರ ಸರ್ಕಾರ ದಿಲ್ಲಿ ಯುವ ಕಾಂಗ್ರೆಸ್ ಕಚೇರಿಗೆ ಹೋಗಿ ಅವರನ್ನು ಕೋವಿಡ್ ಪರಿಹಾರ ಕೆಲಸಗಳ ಸಂಬಂಧ ವಿಚಾರಣೆ ನಡೆಸಿರುವುದು ಖಂಡನೀಯ ಎಂದು ಕಿಡಿಕಾರಿದರು.

ಇದನ್ನೂ ಓದಿ:ಕೋವಿಡ್ ಸೋಂಕಿತರಿಗೆ ನೆರವು: ದೆಹಲಿ ಪೊಲೀಸರ ಪ್ರಶ್ನೆಗೆ ಯೂತ್​​ ಕಾಂಗ್ರೆಸ್​ ಅಧ್ಯಕ್ಷ ಶ್ರೀನಿವಾಸ್ ಉತ್ತರ

ಶ್ರೀನಿವಾಸ್ ಅವರ ಹಿಂದೆ ಯುವ ಪಡೆ ಇದೆ. ಕಾಂಗ್ರೆಸ್ ಬೆಂಬಲವಾಗಿ ನಿಲ್ಲುತ್ತದೆ. ರಾಜಕೀಯ ಬೆಂಬಲವಿಲ್ಲದೆ ಶ್ರೀನಿವಾಸ್ ಜನಪರ‌ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರು ಯುವ ಕಾಂಗ್ರೆಸ್​ನ ದೊಡ್ಡ ನಾಯಕರಾಗಿದ್ದಾರೆ. ಜೈಲು, ಬೇಲು ರಾಜಕೀಯ ಜೀವನದ ಅಂಗವಾಗಿದೆ. ಇದ್ಯಾವುದಕ್ಕೂ ನೀವು ಧೈರ್ಯಗೆಡಬೇಡಿ. ನಾವು ನಿಮ್ಮ ಬೆಂಬಲಕ್ಕೆ ಇದ್ದೇವೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details