ಕರ್ನಾಟಕ

karnataka

ETV Bharat / state

ಅತೃಪ್ತ ಶಾಸಕರನ್ನ ನಾವೇ ನಮ್ಮ ಸರ್ಕಾರದಲ್ಲಿ ಮಂತ್ರಿ ಮಾಡ್ತಿವಿ: ಡಿಕೆಶಿ - etv bharat

ಮೈತ್ರಿ ಸರ್ಕಾರ ಉಳಿಯಲಿದೆ ಎಂದಿರುವ ಸಚಿವ ಡಿಕೆ ಶಿವಕುಮಾರ್​, ಅತೃಪ್ತ ಶಾಸಕರು ಕರೆದು ನಾವೇ ನಮ್ಮ ಸರ್ಕಾರದಲ್ಲಿ ಅವರನ್ನ ಮಂತ್ರಿ ಮಾಡ್ತಿವಿ ಎಂದಿದ್ದಾರೆ.

ಡಿಕೆಶಿ

By

Published : Jul 18, 2019, 11:55 AM IST

Updated : Jul 18, 2019, 2:53 PM IST

ಬೆಂಗಳೂರು: ನಮಗೆ ಎಲ್ಲಾ ಶಾಸಕರು ಬರ್ತಾರೆ ಅನ್ನೋ ವಿಶ್ವಾಸವಿದೆ. ಯಾರೂ ಅವರ ಶಾಸಕ‌ ಸ್ಥಾನ‌ ಕಳೆದುಕೊಳ್ಳೋಕೆ ಇಷ್ಟ ಪಡಲ್ಲ. ಆ್ಯಂಟಿ ಡಿಫೆಕ್ಷನ್​ ಆಕ್ಟ್ 10 ಸೆಡ್ಯೂಲ್​​ನಲ್ಲಿ ತಿರಸ್ಕಾರ ಮಾಡಿ ಅಸೆಂಬ್ಲಿಗೆ ಗೈರಾದ್ರೆ ಅವರ ಸ್ಥಾನ ಕಳೆದುಕೊಳ್ಳುತ್ತಾರೆ ಎಂದು ಸಚಿವ ಡಿಕೆ ಶಿವಕುಮಾರ್ ಹೇಳಿದರು.

ಸದಾಶಿವನಗರ ನಿವಾಸದ ಬಳಿ ಮಾತಾಡಿದ ಅವರು, ಅತೃಪ್ತ ಶಾಸಕರು ಮಂತ್ರಿ ಆಗೋಗೆ ಹೊರಟಿದ್ದಾರೆ. ನಾವೇ ನಮ್ಮ ಸರ್ಕಾರದಲ್ಲಿ ಅವರನ್ನ ಮಂತ್ರಿ ಮಾಡ್ತಿವಿ. ಇದು ಅವರೇ ಬೆಳೆಸಿದ ಪಕ್ಷ. ಅವರಿಗೆ ಮತದಾದರು ಆಶೀರ್ವಾದ ಮಾಡಿದ್ದಾರೆ. ನೀವೆ ಕಟ್ಟಿದ ಮನೆಯಲ್ಲಿ ನೀವೇ ಇರಬೇಕು, ಬೇರೆ ಮನೆಯಲ್ಲಿ ಇರೋಕ್ಕೆ ಆಗುತ್ತಾ ಎಂದು ಪ್ರಶ್ನಿಸಿದ್ದಾರೆ.

ಸಚಿವ ಡಿಕೆ ಶಿವಕುಮಾರ್

ವಿಶ್ವನಾಥ್ ಅವರು ಮಲ್ಲಿಗೆಯ ಮಾತು ಅನ್ನೋ ಪುಸ್ತಕ ಬರೆದಿದ್ದಾರೆ. ಅದನ್ನ ನಿನ್ನೆ ರಾತ್ರಿ ಓದಿದೆ. ವಿಶ್ವಾನಥ್ ಅವರೇ ನಮಗೆ ಗುರುಗಳು. ಪುಸ್ತಕದಲ್ಲಿ ಬರೆದಿರುವುದನ್ನ ಅವರು ಪಾಲಿಸಲಿದ್ದಾರೆ ಎಂದು ಅಂದುಕೊಂಡಿರುವೆ ಎಂದರು.

ಸದನಕ್ಕೆ ಬರೋದು ಶಾಸಕರ ವಿವೇಚನೆಗೆ ಬಿಟ್ಟಿದ್ದು. ಕೆಲವರು ಶಾಸಕರಿಗೆ ಮಿಸ್​​ಗೈಡ್ ಮಾಡಿ ಮಂಗನ‌ ಟೋಪಿ ಹಾಕೋಕೆ ಹೊರಟಿದ್ದಾರೆ. ನಮ್ಮ ಪಕ್ಷದಲ್ಲಿ ಅತೃಪ್ತರು ಯಾರೂ ಇಲ್ಲ, ಎಲ್ಲಾ ನಮ್ಮ ಶಾಸಕರು. ಈಗಲೂ ಅವರು ನಮ್ಮ ಸ್ನೇಹಿತರು ಎಂದರು

Last Updated : Jul 18, 2019, 2:53 PM IST

ABOUT THE AUTHOR

...view details