ಬೆಂಗಳೂರು:ಕಾರ್ಮಿಕರ ದಿನಾಚರಣೆ ಅಂಗವಾಗಿ ಬಡವರಿಗೆ, ನಿರ್ಗತಿಕರಿಗೆ ಅಖಂಡ ಭಾರತ ತಂಡದವರು ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಸುಮಾರು 501 ದಿನಸಿ ಕಿಟ್ ವಿತರಣೆ ಮಾಡಿ, ಪೌರಕಾರ್ಮಿಕರು ಹಾಗೂ ಬಡವರಿಗೆ ಉಚಿತ ವೈದ್ಯಕೀಯ ತಪಾಸಣೆ ನಡೆಸಲಾಯಿತು.
ಕಾರ್ಮಿಕ ದಿನಾಚರಣೆ ಅಂಗವಾಗಿ 500 ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ
ಬೆಂಗಳೂರಿನ ಸುಬ್ರಹ್ಮಣ್ಯ ಪುರದಲ್ಲಿರುವ ನ್ಯಾಶನಲ್ ಕಾಲೇಜ್ ಗ್ರೌಂಡ್ನಲ್ಲಿ 55 ಕುಟುಂಬಗಳಿಗೆ ತುರ್ತು ವೈದ್ಯಕೀಯ ತಪಾಸಣೆ ನಡೆಸಲಾಯಿತು. ಇದೇ ವೇಳೆ ಪೌರಕಾರ್ಮಿಕರಿಗೆ ಹಾಗೂ ಪೊಲೀಸ್ ಇಲಾಖೆಯವರಿಗೆ 1,200 ಸ್ಯಾನಿಟೈಸರ್ ಹಾಗೂ ಹ್ಯಾಂಡ್ ಗ್ಲೌಸ್ ವಿತರಿಸಲಾಯಿತು.
ದಿನಸಿ ಕಿಟ್ ವಿತರಣೆ
ಸುಬ್ರಹ್ಮಣ್ಯಪುರದಲ್ಲಿರುವ ನ್ಯಾಶನಲ್ ಕಾಲೇಜ್ ಗ್ರೌಂಡ್ನಲ್ಲಿ 55 ಕುಟುಂಬಗಳಿಗೆ ತುರ್ತು ವೈದ್ಯಕೀಯ ತಪಾಸಣೆ ಮಾಡಲಾಯಿತು. ಇದೇ ವೇಳೆ ಪೌರಕಾರ್ಮಿಕರಿಗೆ ಹಾಗೂ ಪೊಲೀಸ್ ಇಲಾಖೆಯವರಿಗೆ 1,200 ಸ್ಯಾನಿಟೈಸರ್ ಹಾಗೂ ಹ್ಯಾಂಡ್ ಗ್ಲೌಸ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಸಂಸದ ತೇಜಸ್ವಿ ಸೂರ್ಯ, ಶಾಸಕ ಕೃಷ್ಣಪ್ಪ, ಡಿಸಿಪಿ ಡಾ. ರೋಹಿಣಿ, ಡಿಸಿಪಿ ಫಾರ್ ಟ್ರಾಫಿಕ್ ಸೌಮ್ಯ ಲತಾ, ಎಸಿಪಿ ಮಂಜುನಾಥ್ ಉಪಸ್ಥಿತರಿದ್ದರು.