ಕರ್ನಾಟಕ

karnataka

ETV Bharat / state

ಇಂದ್ರಜಿತ್ ಲಂಕೇಶ್​​ಗೂ ಶುರುವಾಯ್ತಾ ಟೆನ್ಷನ್?... ವಕೀಲರ ಜೊತೆ ಮಾತುಕತೆ! - ಸ್ಯಾಂಡಲ್​ವುಡ್ ಡ್ರಗ್ಸ್ ಮಾಫಿಯಾ

ಸ್ಯಾಂಡಲ್​ವುಡ್​ನಲ್ಲಿ ಡ್ರಗ್ಸ್​ ಮಾಫಿಯಾ ಕುರಿತು ಹೇಳಿಕೆ ನೀಡಿರುವ ನಿರ್ದೇಶಕ ಇಂದ್ರಜಿತ್ ಲಂಕೇಶ್ ಸಿಸಿಬಿ ಕಚೇರಿಗೆ ತೆರಳುವ ಮುನ್ನ ವಕೀಲರ ಜೊತೆ ಮಾತುಕತೆ ನಡೆಸಿದ್ದಾರೆ.

director indrajit lankesh
ಇಂದ್ರಜಿತ್ ಲಂಕೇಶ್​​ಗೆ ಶುರುವಾಯ್ತಾ ಟೆನ್ಷನ್

By

Published : Aug 31, 2020, 12:24 PM IST

ಬೆಂಗಳೂರು: ಡ್ರಗ್ಸ್ ಮಾಫಿಯಾ ಕುರಿತು ಇಂದ್ರಜಿತ್ ಲಂಕೇಶ್ ಹೇಳಿಕೆ ವಿಚಾರ ಸಂಬಂಧಪಟ್ಟಂತೆ ಸಿಸಿಬಿ ಕಚೇರಿಗೆ ತನಿಖಾಧಿಕಾರಿ ಮಾಲ್ತೆಶ್ ಬೋಲೆತ್ತಿನ್ ಆಗಮಿಸಿದ್ದಾರೆ.

ಇಂದ್ರಜಿತ್ ಲಂಕೇಶ್ ಸಿಸಿಬಿ ಎದುರು ವಿಚಾರಣೆಗೆ ಹಾಜರಾಗುವ ಮುನ್ನ ವಕೀಲರ ಜೊತೆ ಮಾತುಕತೆ ನಡೆಸಿದ್ದು, ವಕೀಲರ ಜೊತೆ ತನಿಖೆಗೆ ಹಾಜರಾಗಲಿದ್ದಾರೆ.

ಮತ್ತೊಂದೆಡೆ ಇಂದ್ರಜಿತ್ ಲಂಕೇಶ್​ಗೆ ಫುಲ್ ಟೆನ್ಷನ್ ಶುರುವಾಗಿದೆ. ಯಾಕಂದ್ರೆ ಮಾತಿನ ಭರದಲ್ಲಿ ಪೊಲೀಸರು ಭದ್ರತೆ ಕೊಟ್ಟರೆ ಸ್ಯಾಂಡಲ್​ವುಡ್ ಡ್ರಗ್ಸ್ ಮಾಫಿಯಾ ಬಗ್ಗೆ ಮಾಹಿತಿ ನೀಡುತ್ತೇನೆ ಎಂದು ಹೇಳಿಕೆ ಕೊಟ್ಟಿದ್ರು. ಸದ್ಯ ಭದ್ರತೆ ನೀಡಿದ್ರೆ ಹೆಸರುಗಳನ್ನು ಪ್ರಸ್ತಾಪಿಸುತ್ತೇನೆ ಎಂದಿದ್ದ ಇಂದ್ರಜಿತ್​ಗೆ ಭದ್ರತೆ ಒದಗಿಸುವುದಾಗಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ.

ಇಂದ್ರಜಿತ್ ಅವರಿಂದ ಮಾಹಿತಿ ಪಡೆದ ನಂತರ ಸಿಸಿಬಿ ಡಿಸಿಪಿ ರವಿಕುಮಾರ್ ಮುಂದೆ ಹೇಳಿಕೆ ದಾಖಲು ಮಾಡಿಲಾಗುತ್ತದೆ. ಹೇಳಿಕೆ ಆಧರಿಸಿ ಇಂದ್ರಜಿತ್ ಪ್ರಸ್ತಾಪಿಸಿದ ಹೆಸರಿನ ಪುರಾವೇ ಕಲೆಹಾಕಿ ನಟ, ನಟಿಯರು ಡ್ರಗ್ಸ್ ದಾಸರಾಗಿದ್ದರೆ, ಸುಮೋಟೋ ಕೇಸ್ ದಾಖಲು ಮಾಡಿ ನಂತರ ಅವರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡುವ ಸಾಧ್ಯತೆ ಇದೆ. ಪೊಲಿಸರು ಆಳಕ್ಕಿಳಿದಷ್ಟೂ ಹೆಸರುಗಳು ಹೊರ ಬರುವುದಂತೂ ಗ್ಯಾರಂಟಿ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ABOUT THE AUTHOR

...view details