ಕರ್ನಾಟಕ

karnataka

ETV Bharat / state

ಶಾಸಕರ ಭೇಟಿಗೆ ದಿಗ್ವಿಜಯ್​ ಸಿಂಗ್ ಕಸರತ್ತು​: ಬಂಡಾಯ ಶಾಸಕರಿಂದ ಪತ್ರದ ಮೂಲಕ ಪ್ರತಿರೋಧ - ಕಮೀಷನರ್ ಭಾಸ್ಕರ್ ರಾವ್

ರಾಜ್ಯ ರಾಜಧಾನಿಯಲ್ಲಿ ಬೀಡು ಬಿಟ್ಟಿರುವ ಮಧ್ಯಪ್ರದೇಶ ಕಾಂಗ್ರೆಸ್​ ಬಂಡಾಯ ಶಾಸಕರನ್ನು ಭೇಟಿ ಮಾಡಲು ಅವಕಾಶ ನೀಡುವಂತೆ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು ನಗರ ಪೊಲೀಸರ ಮೊರೆ ಹೋಗಿದ್ದಾರೆ. ಇದ್ರ ಜೊತೆಗೆ, ನಾವು ಯಾವುದೇ ನಾಯಕರನ್ನು ಭೇಟಿಯಾಗಲು ಬಯಸುವುದಿಲ್ಲ. ನಮಗೆ ಇಲ್ಲಿ ಯಾವುದೇ ರೀತಿಯ ಬೆದರಿಕೆಯಾಗಲಿ ಭದ್ರತಾ ಸಮಸ್ಯೆಯಾಗಲೀ ಇಲ್ಲ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.

wdwqdqw
ಕೈ ಶಾಸಕರ ಭೇಟಿಗೆ ಅವಕಾಶ ಕೋರಿದ ದಿಗ್ವಿಜಯ್​ ಸಿಂಗ್​ : ನನ್ನ ವ್ಯಾಪ್ತಿಗೆ ಬರಲ್ಲ ಎಂದ ಕಮೀಷನರ್!

By

Published : Mar 18, 2020, 1:04 PM IST

Updated : Mar 18, 2020, 2:10 PM IST

ಬೆಂಗಳೂರು: ನಗರದ ರಮಡಾ ರೆಸಾರ್ಟ್‌ನಲ್ಲಿ ತಂಗಿರುವ ಬಂಡಾಯ ಶಾಸಕರನ್ನು ಭೇಟಿ ಮಾಡಲು ಅವಕಾಶ ಕಲ್ಪಿಸುವಂತೆ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ನಗರ ಪೊಲೀಸ್ ಆಯುಕ್ತ ಎನ್. ಭಾಸ್ಕರ ರಾವ್ ಅವರಿಗೆ ಮನವಿ ಮಾಡಿದ್ದಾರೆ.

ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿದ ದಿಗ್ವಿಜಯ್ ಸಿಂಗ್ ಮತ್ತು ಇತರೆ ಕಾಂಗ್ರೆಸ್ ನಾಯಕರು.

ನಮ್ಮ ಶಾಸಕರನ್ನು ಭೇಟಿಯಾಗಲು ನೀವು ಅವಕಾಶ ಮಾಡಿಕೊಡಿ ಎಂದು ದಿಗ್ವಿಜಯ್​ ಸಿಂಗ್ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿ ಮನವಿ ಸಲ್ಲಿಸಿದ್ದರು. ಆದರೆ ಈ ವಿಷಯದಲ್ಲಿ ಡಿಜಿಪಿ ಅವರಿಗೆ ಹಕ್ಕುಗಳಿವೆ. ನನ್ನ ವ್ಯಾಪ್ತಿಗೆ ಇದು ಬರಲ್ಲ. ನೀವು ಡಿಜಿಪಿಯವರನ್ನೇ ನೇರವಾಗಿ ಭೇಟಿಯಾಗಿ ಎಂದು ಆಯುಕ್ತರು ದಿಗ್ವಿಜಯ್​ ಸಿಂಗ್​ ಅವರಿಗೆ ಸೂಚಿಸಿದರು.

ಈ ಹಿನ್ನೆಲೆಯಲ್ಲಿ ದಿಗ್ವಿಜಯ್ ಸಿಂಗ್ ಮತ್ತು ಇತರೆ ರಾಜ್ಯ ಕಾಂಗ್ರೆಸ್ ನಾಯಕರು ಡಿಜಿಪಿ ಪ್ರವೀಣ್ ಸೂದ್ ಅವರನ್ನು ಭೇಟಿಯಾಗಿದ್ದಾರೆ.

ಈ ಮಧ್ಯೆ ಮಧ್ಯಪ್ರದೇಶದ 22 ಕಾಂಗ್ರೆಸ್ ಶಾಸಕರು ಡಿಜಿಪಿಗೆ ಪತ್ರ ಬರೆದಿದ್ದು, ನಮ್ಮ ಜೀವಕ್ಕೆ ಇಲ್ಲಿ ಯಾವುದೇ ರೀತಿಯ ಬೆದರಿಕೆಗಳಿಲ್ಲ. ಜೊತೆಗೆ ನಮ್ಮನ್ನು ಯಾವುದೇ ಕಾಂಗ್ರೆಸ್ ನಾಯಕರಾಗಲೀ, ಮುಖಂಡರಾಗಲೀ ಭೇಟಿಯಾಗುವುದಕ್ಕೆ ಅವಕಾಶ ನೀಡಬಾರದು ಎಂದು ಕೋರಿದ್ದಾರೆ.

Last Updated : Mar 18, 2020, 2:10 PM IST

ABOUT THE AUTHOR

...view details