ಕರ್ನಾಟಕ

karnataka

ETV Bharat / state

ಕೋವಿಡ್-19 ಕುರಿತ ಕ್ಷಣ ಕ್ಷಣದ ಮಾಹಿತಿ ನೀಡುವ ಡಿಜಿಟಲ್​ ಡ್ಯಾಶ್ ಬೋರ್ಡ್​ಗೆ ಚಾಲನೆ

ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ವೈರಸ್ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ವಿನೂತನ ಕಾರ್ಯಕ್ಕೆ ಮುಂದಾಗಿದೆ.

ಕೋವಿಡ್-19 ಕ್ಷಣ ಕ್ಷಣದ ಮಾಹಿತಿಗೆ ಡಿಜಿಟಲ್ ಡ್ಯಾಶ್ ಬೋರ್ಡ್

By

Published : Apr 7, 2020, 11:47 PM IST

ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಕುರಿತಾದ ಕ್ಷಣ ಕ್ಷಣದ ಅಧಿಕೃತ ಮತ್ತು ನಿಖರ ಮಾಹಿತಿ ನೀಡುವ ಡಿಜಿಟಲ್ ಡ್ಯಾಶ್ ಬೋರ್ಡ್​ಅನ್ನ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಉದ್ಘಾಟನೆ ಮಾಡಿದರು. ಬಿಬಿ‌ಎಂಪಿ ಕಚೇರಿಯಲ್ಲಿ ಸ್ಥಾಪಿತವಾಗಿರುವ ಕೋವಿಡ್-19 ವಾರ್ ರೂಂನಲ್ಲಿ ಸರ್ಕಾರದ ಅಧಿಕೃತ ಡ್ಯಾಶ್ ಬೋರ್ಡ್​ಗೆ​ ಚಾಲನೆ ನೀಡಲಾಯಿತು.

ತಂತ್ರಜ್ಞಾನದ ಬಳಕೆಯಲ್ಲಿ ಕರ್ನಾಟಕ ಯಾವಾಗಲೂ ಮುಂಚೂಣಿಯಲ್ಲಿದೆ. ಕೆಲವೇ ದಿನಗಳ ಹಿಂದೆ ವೈದ್ಯಕೀಯ ಸಿಬ್ಬಂದಿಗೆ ತರಬೇತಿ ನೀಡಲು ಡಿಜಿಟಲ್ ತಂತ್ರಜ್ಞಾನದ ಬಳಕೆ ಮಾಡಲಾಗಿತ್ತು. ಇಲ್ಲೂ ಕೂಡ ಕೋವಿಡ್-19 ಕುರಿತಂತೆ ಖಚಿತವಾದ ಮತ್ತು ಕ್ಷಣ ಕ್ಷಣದ ಮಾಹಿತಿ ನೀಡಲು ತಂತ್ರಜ್ಞಾನದ ಸಹಾಯದಿಂದ ಈ ಡ್ಯಾಶ್ ಬೋರ್ಡ್ ನಿಮಿಸಲಾಗಿದ್ದು, ಸಾರ್ವಜನಿಕರು ಮನೆಯಲ್ಲೇ ಕುಳಿತು ಸರಳವಾಗಿ ರಿಯಲ್ ಟೈಮ್ ಮಾಹಿತಿ ಪಡೆಯಬಹುದು. ಜನರಿಗೆ ಮಾಹಿತಿ, ಜಾಗೃತಿ ನೀಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಇದೊಂದು ಪ್ರಾಮಾಣಿಕ ಪ್ರಯತ್ನ ಮಾಡಿದೆ ಅಂತ ಸಚಿವರು ಮಾಹಿತಿ ನೀಡಿದರು.

ABOUT THE AUTHOR

...view details