ಬೆಂಗಳೂರು: ಕೊರೊನಾ ಸಂಕಷ್ಟದ ಸಮಯದಲ್ಲಿ ಉದ್ಯೋಗಾಂಕ್ಷಿಗಳಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಸೂಲಿ ಮಾಡಿ ವಂಚಿಸುತ್ತಿದ್ದ ಐವರು ಆರೋಪಿಗಳನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಸಾಯಿ ಕಲ್ಯಾಣ್ ರಾಮ್, ಘಾತಲಾ ದಿಲೀಪ್ ಕುಮಾರ್, ವಿಶ್ವನಾಥ್, ಶ್ರೀಧರ್, ಪತ್ತಿ ಶಿವಾ ಬಂಧಿತ ಆರೋಪಿಗಳಾಗಿದ್ದಾರೆ. ಕೊರೊನಾವನ್ನೇ ಬಂಡವಾಳ ಮಾಡಿಕೊಂಡ ವಂಚಕರು ಮೋಸ ಮಾಡುವ ಉದ್ದೇಶದಿಂದಲೇ ನಗರ ಪೊಲೀಸ್ ಕಮೀಷನರ್ ಕಚೇರಿ ರಸ್ತೆಯಲ್ಲಿ ಹೆಚ್.ಆರ್.ಇಂಡಿಯಾ ಸರ್ವೀಸ್ ಹೆಸರಿನಲ್ಲಿ ಆಫೀಸ್ ತೆರೆದಿದ್ದರು. ನೌಕರಿ ಡಾಟ್ ಕಾಮ್ ಹಾಗೂ ಕ್ವಿಕರ್ ಡಾಟ್ ಕಾಮ್ನಲ್ಲಿ ಉದ್ಯೋಗಕ್ಕಾಗಿ ಬಯೋಡೇಟಾ ಸಲ್ಲಿಸಿದ್ದ ನಿರುದ್ಯೋಗಿಗಳನ್ನು ಫೋನ್ ಮೂಲಕ ಸಂಪರ್ಕಿಸಿ ಮಾನ್ಯತಾ ಟೆಕ್ ಪಾರ್ಕ್ ಸೇರಿದಂತೆ ವಿವಿಧ ಕಂಪೆನಿಗಳಲ್ಲಿ ಕೆಲಸ ಖಾಲಿಯಿದೆ ಎಂದು ಒಬ್ಬೊಬ್ಬರಿಂದ 50 ಸಾವಿರದವರೆಗೆ ಹಣ ಪಡೆಯುತ್ತಿದ್ದರು.