ಬೆಂಗಳೂರು: ಷೇರು ಮಾರುಕಟ್ಟೆಯಲ್ಲಿ ಹೂಡಿದ ಹಣ ನಷ್ಟಗೊಂಡಿದ್ದರಿಂದ ಜೀವನ ನಿರ್ವಹಣೆಗಾಗಿ ಜ್ಯೂವೆಲರಿ ಶಾಪ್ನಲ್ಲಿ ಕಳ್ಳತನ ಮಾಡುತ್ತಿದ್ದ ಖದೀಮ ಮಲ್ಲೇಶ್ವರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಯುಟ್ಯೂಬ್ ನೋಡಿ ಚಿನ್ನ ಎಗರಿಸಿದ: ಕೆಲ ದಿನಗಳಲ್ಲೇ ಪೊಲೀಸರ ಅತಿಥಿಯಾದ! - Detention of thief
ಕಳ್ಳತನ ಮಾಡುವುದು ಹೇಗೆ ಎಂದು ಗೊತ್ತಿಲ್ಲದ ವ್ಯಕ್ತಿಯೊಬ್ಬ ಯೂಟ್ಯೂಬ್ನಲ್ಲಿ ವಿಡಿಯೋ ನೋಡಿ ಕಳ್ಳತನ ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಕೆಂಪಾಪುರ ಅಗ್ರಹಾರದ ನಿವಾಸಿ ಸಂತೋಷ್ (23) ಬಂಧಿತ ಆರೋಪಿ. ಈತ ನಾರ್ದನ್ ಟ್ರಸ್ಟ್ ಫೈನಾನ್ಸ್ ಸರ್ವೀಸ್ ಅಂಡ್ ಇನ್‌ವೆಸ್ಟ್‌ಮೆಂಟ್‌ನಲ್ಲಿ ನೌಕರನಾಗಿದ್ದ. ಷೇರು ಮಾರುಕಟ್ಟೆಯಲ್ಲಿ ಕಳೆದುಕೊಂಡ ಹಣ ಸರಿದೂಗಿಸಲು ಜ್ಯೂವೆಲರಿ ಶಾಪ್ನಲ್ಲಿ ಚಿನ್ನಾಭರಣ ಕಳ್ಳತನ ಮಾಡಲು ಯೋಜನೆ ರೂಪಿಸಿದ್ದ. ಈತನಿಗೆ ಹೇಗೆ ಕಳ್ಳತನ ಮಾಡಬೇಕು ಎಂಬುದರ ಬಗ್ಗೆ ಅರಿವಿಲ್ಲದೆ ಈತ ಯುಟ್ಯೂಬ್ನಲ್ಲಿ ಕಳ್ಳತನ ಮಾಡುವ ವಿಡಿಯೋ ನೋಡಿದ್ದ ಎನ್ನಲಾಗಿದೆ.
ಕಳೆದ ತಿಂಗಳು ಫೆ. 21ರಂದು ಮಲ್ಲೇಶ್ವರದ ಜೋಯ್ ಆಲುಕಾಸ್ ಚಿನ್ನಾಭರಣ ಮಳಿಗೆಗೆ ಗ್ರಾಹಕರ ಸೋಗಿನಲ್ಲಿ ಹೋಗಿ ಸಿಬ್ಬಂದಿ ಗಮನ ಬೇರೆಡೆ ಸೆಳೆದು 42.99 ಗ್ರಾಂನ ಬ್ರಾಸ್‌ಲೇಟ್ ಲಪಟಾಯಿಸಿದ್ದ. ಇತ್ತ ಚಿನ್ನ ಕಳವಾಗಿರುವ ಕುರಿತು ಅಂಗಡಿ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಚಿನ್ನಾಭರಣ ಮಳಿಗೆಯ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.