ಕರ್ನಾಟಕ

karnataka

ETV Bharat / state

ಮೂರು ಬಾರಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಐನಾತಿ ಕಳ್ಳರು ನಾಲ್ಕನೇ ಬಾರಿಗೆ ಅಂದರ್ - ನಾಲ್ವರು ಆರೋಪಿಗಳ ಬಂಧನ

ಮೇ 26 ರಂದು ಮಾರುತಿ 800 ಆಲ್ಟೊ ಕಾರಿನಲ್ಲಿ ಆರೋಪಿಗಳು ರಸ್ತೆಗಿಳಿದಿದ್ದರು. ಈ ವೇಳೆ ಪೊಲೀಸರು ವಾಹನ ತಪಾಸಣೆ ಮಾಡುತ್ತಿರುವುದನ್ನು ಕಂಡು ಸ್ಥಳದಿಂದ ಕಾರು ಬಿಟ್ಟು ಕಾಲ್ಕಿತ್ತಿದ್ದರು..

Detention of four robbers in Bangalore
ಆರೋಪಿಗಳ ಬಂಧನ

By

Published : May 31, 2021, 11:36 AM IST

ಬೆಂಗಳೂರು : ಲಾಕ್‌ಡೌನ್ ವೇಳೆ ಓಡಾಡುವ ವಾಹನ ಸವಾರರನ್ನು ಗುರಿಯಾಗಿಸಿಕೊಂಡು ಕಳ್ಳತನ‌ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ತಪಾಸಣೆ ವೇಳೆ ಹನುಮಂತನಗರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ‌‌.

ಮೊಹಮ್ಮದ್ ಯೂಸುಫ್(19), ಮೊಹಮ್ಮದ್ ತೌಸಿಫ್(19), ಶ್ರೀನಿವಾಸ್(22) ಹಾಗೂ ಸೈಯ್ಯದ್ ಸಾಹೇಬ(22) ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ ಮಾರುತಿ ಆಲ್ಟೊ ಕಾರು ಹಾಗೂ 2 ಬೈಕ್ ವಶಕ್ಕೆ ಪಡೆದುಕೊಳ್ಳಲಾಗಿದೆ.

ಲಾಕ್‌ಡೌನ್‌ನಲ್ಲಿ ಒಬ್ಬಂಟಿಗರಾಗಿ ಓಡಾಡುವ ವಾಹನ ಸವಾರರನ್ನು ಗುರಿಯಾಗಿಸಿಕೊಳ್ಳುತ್ತಿದ್ದ ಖದೀಮರು, ಕಳೆದ ಮೇ 25 ರಂದು ಬೆಳಗಿನ ಜಾವ ಹನುಮಂತನಗರದಲ್ಲಿ ಶಬರೀಶ್ ಎಂಬುವರಿಗೆ ಚಾಕು ತೋರಿಸಿ ಬೈಕ್ ಕಳ್ಳತನ ಮಾಡಿ ಪರಾರಿಯಾಗಿದ್ದರು.

ಮೇ 26 ರಂದು ಮಾರುತಿ 800 ಆಲ್ಟೊ ಕಾರಿನಲ್ಲಿ ಆರೋಪಿಗಳು ರಸ್ತೆಗಿಳಿದಿದ್ದರು. ಈ ವೇಳೆ ಪೊಲೀಸರು ವಾಹನ ತಪಾಸಣೆ ಮಾಡುತ್ತಿರುವುದನ್ನು ಕಂಡು ಸ್ಥಳದಿಂದ ಕಾರು ಬಿಟ್ಟು ಕಾಲ್ಕಿತ್ತಿದ್ದರು.

ಇದರಿಂದ ಅನುಮಾನಗೊಂಡ ಪೊಲೀಸರು ಬೆನ್ನತ್ತಿ ಹಿಡಿದಾಗ ಆರೋಪಿಗಳ ಕೃತ್ಯ ಬಯಲಾಗಿದೆ. ತೀವ್ರ ವಿಚಾರಣೆ ನಡೆಸಿದಾಗ‌ ಬಂಧಿತರಿಂದ ಮೈಸೂರಿನ 1 ಸುಲಿಗೆ ಪ್ರಕರಣ, ಬ್ಯಾಟರಾಯನಪುರ ಹಾಗೂ ಹನುಮಂತನಗರ ಠಾಣೆ ವ್ಯಾಪ್ತಿಯ ಎರಡು ಪ್ರಕರಣ ಪತ್ತೆಯಾಗಿವೆ.

ABOUT THE AUTHOR

...view details