ಕರ್ನಾಟಕ

karnataka

ETV Bharat / state

2020-21ರ ಶೈಕ್ಷಣಿಕ ಪಠ್ಯ ವಸ್ತು ಕಡಿತ ಮಾಡಲು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ಧಾರ - ಶೈಕ್ಷಣಿಕ ವೇಳಾ ಪಟ್ಟಿ

ವಿದ್ಯಾರ್ಥಿಗಳಿಗೆ ನೀಡುವ ಪಾಠ ಪ್ರವಚನಗಳಲ್ಲಿ ಕುಂದು ಉಂಟಾಗಬಾರದೆಂದು ಪದವಿ ಪೂರ್ವ ಶಿಕ್ಷಣ ಇಲಾಖೆಯು ಈಗಾಗಲೇ ಪ್ರೀ ರೆಕಾರ್ಡೆಡ್ ವಿಡಿಯೋ ತರಗತಿಗಳನ್ನು ಯೂಟ್ಯೂಬ್‌ನಲ್ಲಿ ಪ್ರಾರಂಭಿಸಿದೆ. ಇನ್ನು ಕೇಂದ್ರ ಸರ್ಕಾರವು 1 ರಿಂದ 2ನೇ ತರಗತಿಯವರೆಗೆ ಶೇ. 30 ರಷ್ಟು ಪಠ್ಯ ವಸ್ತುವನ್ನು ಕಡಿತ ಮಾಡಿ ಬಿಡುಗಡೆ ಮಾಡಿದೆ.

department-of-undergraduate-education-decision-cut-academic-curriculum
2020-21ರ ಶೈಕ್ಷಣಿಕ ಪಠ್ಯ ವಸ್ತು ಕಡಿತ ಮಾಡಲು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ಧಾರ

By

Published : Oct 22, 2020, 6:52 PM IST

ಬೆಂಗಳೂರು: ಕೋವಿಡ್-19 ಹಿನ್ನೆಲೆಯಲ್ಲಿ 2020-21ರ ಶೈಕ್ಷಣಿಕ ಸಾಲಿನ ಪಠ್ಯ ವಸ್ತು ಕಡಿತ ಮಾಡಲು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ಧರಿಸಿದೆ.

2020-21ರ ಶೈಕ್ಷಣಿಕ ಪಠ್ಯ ವಸ್ತು ಕಡಿತ ಮಾಡಲು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ಧಾರ

ಕೋವಿಡ್-19 ಸಾಂಕ್ರಾಮಿಕ ಕಾಯಿಲೆ ಹಿನ್ನೆಲೆ ದೇಶ ಹಾಗೂ ರಾಜ್ಯದಲ್ಲಿ ಲಾಕ್‌ಡೌನ್ ಜಾರಿಯಲ್ಲಿದ್ದ ಕಾರಣ, 2020-21ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳಲ್ಲಿ ವ್ಯತ್ಯಯ ಉಂಟಾಗಿತ್ತು. ಸಾಮಾನ್ಯವಾಗಿ ಈ ಸಮಯಕ್ಕೆ 2020-21ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗಬೇಕಿತ್ತು. ಆದರೆ ಬದಲಾದ ಸನ್ನಿವೇಶಗಳಿಂದಾಗಿ ತರಗತಿಗಳು ಹಿಂದಿನ ವರ್ಷಗಳ ಶೈಕ್ಷಣಿಕ ವೇಳಾ ಪಟ್ಟಿಯಂತೆ ಆರಂಭವಾಗಿರುವುದಿಲ್ಲ.

ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಪಾಠ ಪ್ರವಚನಗಳಲ್ಲಿ ಕುಂದು ಉಂಟಾಗಬಾರದೆಂದು ಪದವಿ ಪೂರ್ವ ಶಿಕ್ಷಣ ಇಲಾಖೆಯು ಈಗಾಗಲೇ ಪ್ರೀ ರೆಕಾರ್ಡೆಡ್ ವಿಡಿಯೋ ತರಗತಿಗಳನ್ನು ಯೂಟ್ಯೂಬ್‌ನಲ್ಲಿ ಪ್ರಾರಂಭಿಸಿದೆ. ಇನ್ನು ಕೇಂದ್ರ ಸರ್ಕಾರವು 1 ರಿಂದ 2ನೇ ತರಗತಿಯವರೆಗೆ ಶೇ. 30 ರಷ್ಟು ಪಠ್ಯ ವಸ್ತುವನ್ನು ಕಡಿತ ಮಾಡಿ ಬಿಡುಗಡೆ ಮಾಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಸೂಚನೆಯಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯು ಸಹ ಪಠ್ಯ ವಸ್ತು ಕಡಿತ ಮಾಡಲು ಕ್ರಮ ತೆಗೆದುಕೊಂಡಿದೆ.

ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ ಹಾಗೂ ಜೀವಶಾಸ ವಿಷಯಗಳ ಪಠ್ಯ ಕಡಿತವನ್ನು ಸಿಬಿಎಸ್​​ಇ ಶಿಕ್ಷಣ ಮಂಡಳಿಯು ನಿಗದಿಪಡಿಸಿದಂತೆ ಯಥಾವತ್ತಾಗಿ ಅಳವಡಿಸಿಕೊಂಡಿದೆ. ಆದರೆ ಉಳಿದ ವಿಷಯಗಳಲ್ಲಿ ಇಲಾಖೆಯು ಪಠ್ಯ ಪುಸ್ತಕ ರಚನಾ ಸಮಿತಿ ಹಾಗೂ ಪರಿಷ್ಕರಣಾ ಸಮಿತಿ ಸದಸ್ಯರುಗಳನ್ನು ಸಂಪರ್ಕಿಸಿ ಶೇ. 30 ರಷ್ಟು ಪಠ್ಯವಸ್ತುವನ್ನು ಕಡಿತ ಮಾಡಿ, ಬಿಡಬಹುದಾದ ಅಧ್ಯಾಯಗಳನ್ನು ಹೆಸರಿಸಲು ಕೋರಲಾಗಿತ್ತು.

ಬಹುತೇಕ ಎಲ್ಲಾ ಸಮಿತಿಗಳು ಆಯಾ ವಿಷಯಗಳ ಪಠ್ಯಪುಸ್ತಕ/ವಸ್ತುಗಳಲ್ಲಿ ಕಡಿತಗೊಳಿಸಬಹುದಾದ ಪದ್ಯ/ಗದ್ಯ/ಅಧ್ಯಾಯ/ಉಪ-ಅಧ್ಯಾಯಗಳ ಪಟ್ಟಿಯನ್ನು ತಮ್ಮ ಸಮಿತಿಯ ಸದಸ್ಯರೊಂದಿಗೆ ಚರ್ಚಿಸಿ ವರದಿ ನೀಡಿರುತ್ತಾರೆ. ಒಟ್ಟು 34 ವಿಷಯಗಳ ಪೈಕಿ ಕರ್ನಾಟಕ ಸಂಗೀತ ವಿಷಯವನ್ನು ಹೊರತುಪಡಿಸಿ 33 ವಿಷಯಗಳ ಮಾಹಿತಿಯನ್ನು ಮಾತ್ರ ಸಿದ್ದಪಡಿಸಲಾಗಿದೆ.

ರಾಜ್ಯದಲ್ಲಿ ಯಾವುದೇ ವಿದ್ಯಾರ್ಥಿ ಕರ್ನಾಟಕ ಸಂಗೀತ ವಿಷಯದಲ್ಲಿ ಕಳೆದ ಎರಡು ವರ್ಷಗಳಲ್ಲಿ ದಾಖಲಾಗದ ಕಾರಣ ಸದರಿ ವಿಷಯವನ್ನು ಈ ಪ್ರಕ್ರಿಯೆಯಿಂದ ಕೈ ಬಿಡಲಾಗಿದೆ. ಪಠ್ಯ ಪುಸ್ತಕ ರಚನಾ ಸಮಿತಿ ಹಾಗೂ ಪರಿಷ್ಕರಣಾ ಸಮಿತಿಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ, ಸರ್ಕಾರದ ಆದೇಶ ಪಡೆದು ರಾಜ್ಯದ ಎಲ್ಲಾ ಪದವಿ ಪೂರ್ವ ಕಾಲೇಜುಗಳಲ್ಲಿ ಅನುಷ್ಠಾನಕ್ಕಾಗಿ ಸದರಿ ಮಾಹಿತಿಯನ್ನು ಇಲಾಖೆ ವೆಬ್‌ಸೈಟ್‌ನಲ್ಲಿ ಅಳವಡಿಸಲಾಗಿದೆ.

ಈ ಮಾಹಿತಿಯನ್ನು ರಾಜ್ಯದ ಎಲ್ಲಾ ಜಿಲ್ಲೆಯ ಉಪನಿರ್ದೇಶಕರು ತಮ್ಮ ವ್ಯಾಪ್ತಿಯ ಎಲ್ಲಾ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ಪ್ರಾಂಶುಪಾಲರ ಮೂಲಕ ತಲುಪಿಸಲು ಸೂಚಿಸಲಾಗಿದೆ. ಈ ಪಠ್ಯವಸ್ತು 2020-21 ನೇ ಶೈಕ್ಷಣಿಕ ವರ್ಷಕ್ಕೆ ಮಾತ್ರ ಅನ್ವಯಿಸುತ್ತದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ.

ABOUT THE AUTHOR

...view details