ಕರ್ನಾಟಕ

karnataka

ETV Bharat / state

ಈ ಬಾರಿಯ ಬಜೆಟ್​ನಲ್ಲಿ ಯಾವ ಇಲಾಖೆಗೆ ಅನುದಾನ ಕಡಿತ? - ಕರ್ನಾಟಕ ಬಿಜೆಪಿ ಸರ್ಕಾರದ ಬಜೆಟ್

ಯಾವುದೇ ಹೊಸ ತೆರಿಗೆ ಹೊರೆ ಹಾಕದೇ ಸೀಮಿತ ಆದಾಯ ಮೂಲಗಳೊಂದಿಗೆ ಸಿಎಂ ಯಡಿಯೂರಪ್ಪ ಬಜೆಟ್ ಮಂಡಿಸಿದ್ದಾರೆ. ಬಜೆಟ್ ವೆಚ್ಚವನ್ನು ಸರಿದೂಗಿಸಲು ಸಾಲವನ್ನು ಬಹುವಾಗಿ ನೆಚ್ಚಿಕೊಂಡಿರುವ ಸಿಎಂ ಇತಿಮಿತಿಯೊಳಗೆ ಬಜೆಟ್ ಮಂಡಿಸಿದ್ದಾರೆ.

Department grant cut in the budget
ಯಾವ ಇಲಾಖೆಗೆ ಅನುದಾನ ಕಡಿತ?

By

Published : Mar 8, 2021, 5:00 PM IST

ಬೆಂಗಳೂರು: ಸಿಎಂ ಯಡಿಯೂರಪ್ಪ 2.46 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಅನ್ನು ಮಂಡಿಸಿದ್ದಾರೆ. ಆರ್ಥಿಕ ಸಂಕಷ್ಟದ ಮಧ್ಯೆ, ಆದಾಯ ಕೊರತೆಯೊಂದಿಗೆ ಸಾಲವನ್ನೇ ನೆಚ್ಚಿಕೊಂಡು ಇತಿಮಿತಿಯಲ್ಲಿ ಬಜೆಟ್ ಮಂಡಿಸಿದ್ದಾರೆ. ಆದರೆ, ಈ ಬಾರಿಯ ಬಜೆಟ್​ನಲ್ಲಿ ಹಲವು ಇಲಾಖೆಗಳ ಅನುದಾನಕ್ಕೂ ಕತ್ತರಿ ಹಾಕಲಾಗಿದೆ.

ಯಾವುದೇ ಹೊಸ ತೆರಿಗೆ ಹೊರೆ ಹಾಕದೇ ಸೀಮಿತ ಆದಾಯ ಮೂಲಗಳೊಂದಿಗೆ ಸಿಎಂ ಯಡಿಯೂರಪ್ಪ ಬಜೆಟ್ ಮಂಡಿಸಿದ್ದಾರೆ. ಬಜೆಟ್ ವೆಚ್ಚವನ್ನು ಸರಿದೂಗಿಸಲು ಸಾಲವನ್ನು ಬಹುವಾಗಿ ನೆಚ್ಚಿಕೊಂಡಿರುವ ಸಿಎಂ ಇತಿಮಿತಿಯೊಳಗೆ ಬಜೆಟ್ ಮಂಡಿಸಿದ್ದಾರೆ. ಹೀಗಾಗಿ ಈ ಬಾರಿ ಆದಾಯ ಕೊರತೆಯ ಸವಾಲಿನೊಂದಿಗೆ ಹಲವು ಇಲಾಖೆಗಳಿಗೆ ಕಳೆದ ವರ್ಷಕ್ಕೆ ಹೊಲಿಸಿದರೆ ಈ ಬಾರಿ ಅನುದಾನ ಕಡಿತಗೊಳಿಸಿದ್ದಾರೆ.

ಇಲಾಖಾವಾರು ಅನುದಾನ ಹಂಚಿಕೆ, ಕಡಿತ ಎಷ್ಟು?

ಶಿಕ್ಷಣ ಇಲಾಖೆ:

  • ಈ ಬಾರಿ 29,688 ಕೋಟಿ ರೂ. ಅನುದಾನ
  • ಕಳೆದ ಬಾರಿ 29,768 ಕೋಟಿ ರೂ. ಅನುದಾನ

ನಗರಾಭಿವೃದ್ಧಿ ಇಲಾಖೆ:

  • ಈ ಬಾರಿ 27,386 ಕೋಟಿ ರೂ. ಅನುದಾನ
  • ಕಳೆದ ಬಾರಿ 27,952 ಕೋಟಿ ರೂ. ಅನುದಾನ

ಜಲಸಂಪನ್ಮೂಲ ಇಲಾಖೆ:

  • ಈ ಬಾರಿ 21,181 ಕೋಟಿ ರೂ.
  • ಕಳೆದ ಬಾರಿ 21,308 ಕೋಟಿ ರೂ.

ಇಂಧನ ಇಲಾಖೆ:

  • ಈ ಬಾರಿ 16,515 ಕೋಟಿ ರೂ.
  • ಕಳೆದ ಬಾರಿ 17,290 ಕೋಟಿ ರೂ.

ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆ:

  • ಈ ಬಾರಿ 16,036 ಕೋಟಿ ರೂ.
  • ಕಳೆದ ಬಾರಿ 15,595 ಕೋಟಿ ರೂ.

ಕಂದಾಯ ಇಲಾಖೆ:

  • ಈ ಬಾರಿ 12,384 ಕೋಟಿ ರೂ.
  • ಕಳೆದ ಬಾರಿ 11,860 ಕೋಟಿ ರೂ.

ಲೋಕೋಪಯೋಗಿ ಇಲಾಖೆ:

  • ಈ ಬಾರಿ 10,256 ಕೋಟಿ ರೂ.
  • ಕಳೆದ ಬಾರಿ 11,463 ಕೋಟಿ ರೂ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ:

  • ಈ ಬಾರಿ 11,908 ಕೋಟಿ ರೂ.
  • ಕಳೆದ ಬಾರಿ 10,122 ಕೋಟಿ ರೂ.

ಒಳನಾಡು ಬಂದರು ಮತ್ತು ಸಾರಿಗೆ ಇಲಾಖೆ:

  • ಈ ಬಾರಿ 10,330 ಕೋಟಿ ರೂ.
  • ಕಳೆದ ಬಾರಿ 10,108 ಕೋಟಿ ರೂ.

ಸಮಾಜ ಕಲ್ಯಾಣ ಇಲಾಖೆ:

  • ಈ ಬಾರಿ 8,864 ಕೋಟಿ ರೂ.
  • ಕಳೆದ ಬಾರಿ 9,444 ಕೋಟಿ ರೂ.

ಕೃಷಿ ಮತ್ತು ತೋಟಗಾರಿಕೆ ಇಲಾಖೆ:

  • ಈ ಬಾರಿ 7,297 ಕೋಟಿ ರೂ.
  • ಕಳೆದ ಬಾರಿ 7,889 ಕೋಟಿ ರೂ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ:

  • ಈ ಬಾರಿ 4,531 ಕೋಟಿ ರೂ.
  • ಕಳೆದ ಬಾರಿ 4,650 ಕೋಟಿ ರೂ.

ವಸತಿ ಇಲಾಖೆ:

  • ಈ ಬಾರಿ 2,990 ಕೋಟಿ ರೂ.
  • ಕಳೆದ ಬಾರಿ 2,971 ಕೋಟಿ ರೂ.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ:

  • ಈ ವರ್ಷ 2,374 ಕೋಟಿ ರೂ.
  • ಕಳೆದ ಬಾರಿ 2,680 ಕೋಟಿ ರೂ.

ಇತರೆ:

  • ಈ ವರ್ಷ 94,416 ಕೋಟಿ ರೂ.
  • ಕಳೆದ ವರ್ಷ 84,023 ಕೋಟಿ ರೂ.

ABOUT THE AUTHOR

...view details