ಕರ್ನಾಟಕ

karnataka

ETV Bharat / state

ಪಕ್ಷಾಂತರ ನಿಷೇಧ ಕಾಯ್ದೆ: ತಜ್ಞರು, ಸಾರ್ವಜನಿಕರ ಅಭಿಪ್ರಾಯದ ಮೊರೆ ಹೋದ ವಿಧಾನಸಭೆ - ಪಕ್ಷಾಂತರ ನಿಷೇಧ ಕಾಯ್ದೆ

ರಾಜ್ಯದಲ್ಲಿ ಇತ್ತೀಚೆಗೆ ನಡೆದ ಶಾಸಕರ ಪಕ್ಷಾಂತರ ಪರ್ವ ಮತ್ತು ಶಾಸಕರ ಆಪರೇಷನ್ ಹಿನ್ನೆಲೆಯಲ್ಲಿ ದೇಶವ್ಯಾಪಿ ಚರ್ಚೆಗೆ ಒಳಗಾಗಿದ್ದ ಪಕ್ಷಾಂತರ ನಿಷೇಧ ಕಾಯ್ದೆಯ ಲೋಪದೋಷಗಳನ್ನು ಸರಿಪಡಿಸಿ, ಅದನ್ನು ಮತ್ತಷ್ಟು ಬಲಗೊಳಿಸುವತ್ತ ವಿಧಾನಸಭೆ ತನ್ನ ಗಮನ ಹರಿಸಿದೆ. ಕಾಯ್ದೆಯ ಹತ್ತನೇ ಅನುಸೂಚಿಯಲ್ಲಿ ಪ್ರಸ್ಥಾಪಿಸಿರುವ ನಿಯಮಾವಳಿ ರೂಪಿಸಲು ಸಾರ್ವಜನಿಕರು ಮತ್ತು ತಜ್ಞರ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿದೆ.

vidhana soudha
ವಿಧಾನ ಸೌಧ

By

Published : May 22, 2020, 11:34 AM IST

ಬೆಂಗಳೂರು : ಪಕ್ಷಾಂತರ ನಿಷೇಧ ಕಾಯ್ದೆಯ ಹತ್ತನೇ ಅನುಸೂಚಿಯಲ್ಲಿ ಪ್ರಸ್ಥಾಪಿಸಿರುವ ನಿಯಮಾವಳಿ ರೂಪಿಸಲು ಸಾರ್ವಜನಿಕರು ಮತ್ತು ತಜ್ಞರ ಅಭಿಪ್ರಾಯ ಸಂಗ್ರಹಿಸಲು ವಿಧಾನಸಭೆ ಮುಂದಾಗಿದೆ.

ರಾಜ್ಯದಲ್ಲಿ ಇತ್ತೀಚೆಗೆ ನಡೆದ ಶಾಸಕರ ಪಕ್ಷಾಂತರ ಪರ್ವ ಮತ್ತು ಶಾಸಕರ ರಾಜಕೀಯದ ಆಪರೇಷನ್ ಹಿನ್ನೆಲೆಯಲ್ಲಿ ದೇಶವ್ಯಾಪಿ ಚರ್ಚೆಗೆ ಒಳಗಾಗಿದ್ದ ಪಕ್ಷಾಂತರ ನಿಷೇಧ ಕಾಯ್ದೆಯ ಲೋಪದೋಷಗಳನ್ನು ಸರಿಪಡಿಸಿ, ಅದನ್ನು ಮತ್ತಷ್ಟು ಬಲಗೊಳಿಸುವತ್ತ ವಿಧಾನಸಭೆ ತನ್ನ ಗಮನ ಹರಿಸಿದೆ.

ಪಕ್ಷಾಂತರ ನಿಷೇಧ ಕಾಯ್ದೆಯ ಹತ್ತನೇ ಅನುಸೂಚಿಯಲ್ಲಿನ ನಿಯಮಗಳು ಮತ್ತು ಅವುಗಳಲ್ಲಿನ ಗೊಂದಲಗಳನ್ನು ಪರಿಶೀಲಿಸಲು ಸಿದ್ಧತೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಲೋಕಸಭೆ ಸ್ಪೀಕರ್ ಮತ್ತು ಅಖಿಲ ಭಾರತ ಪೀಠಾಸೀನ ಅಧಿಕಾರಿಗಳ ಸಮ್ಮೇಳನಾಧ್ಯಕ್ಷರಾಗಿರುವ ಓಂ ಬಿರ್ಲಾ ಅವರು ರಾಜಸ್ಥಾನ ವಿಧಾನಸಭೆ ಅಧ್ಯಕ್ಷರಾಗಿರುವ ಡಾ. ಸಿ ಪಿ ಜೋಷಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದಾರೆ.

ರಾಜ್ಯವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಒಡಿಶಾ ವಿಧಾನಸಭೆ ಸ್ಪೀಕರ್ ಡಾ. ಸೂರ್ಯ ನಾರಾಯಣ ಅವರು ಈ ಸಮಿತಿಯ ಸದಸ್ಯರಾಗಿರುತ್ತಾರೆ. ಈ ಹಿನ್ನೆಲೆಯಲ್ಲಿ ಪಕ್ಷಾಂತರ ನಿಷೇಧ ಕಾಯ್ದೆಯ ಹತ್ತನೇ ಶೆಡ್ಯೂಲ್​​​ನಲ್ಲಿನ ನಿಯಮಾವಳಿಗಳ ರಚನೆಗೆ ಸಲಹೆ, ಸೂಚನೆಗಳನ್ನು ನೀಡುವಂತೆ ಕಾನೂನು ತಜ್ಞರು, ಸಾರ್ವಜನಿಕರು ನೀಡುವಂತೆ ವಿಧಾನಸಭೆ ಕಾರ್ಯದರ್ಶಿ ಕೆ.ಎಂ ವಿಶಾಲಾಕ್ಷಿ ಮನವಿ ಮಾಡಿದ್ದಾರೆ.

ಅಭಿಪ್ರಾಯಗಳನ್ನು ಜೂ.10ರೊಳಗೆ ವಿಧಾನಸಭೆ ಕೊಠಡಿ ಸಂಖ್ಯೆ 121 ಮೊದಲ ಮಹಡಿಗೆ ಸಲ್ಲಿಸಬಹುದು. ವಿಧಾನಸಭೆ ಕಾರ್ಯದರ್ಶಿಗಳ ಇ-ಮೇಲ್ ವಿಳಾಸಕ್ಕೂ ಸಹ ಅಭಿಪ್ರಾಯ ಕಳಿಸಬಹುದಾಗಿದೆ.

ABOUT THE AUTHOR

...view details