ಕರ್ನಾಟಕ

karnataka

ETV Bharat / state

ಕೊರೊನಾ ರಣಕೇಕೆ: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಶೇ.50ರಷ್ಟು ಪ್ರಯಾಣಿಕರ ಸಂಖ್ಯೆ ಕುಸಿತ - ಕರ್ನಾಟಕದಲ್ಲಿ ಕೊರೊನಾ ವೈರಸ್​

ಕೊರೊನಾ ವೈರಸ್​ ಸೃಷ್ಟಿಸಿದ ಆತಂಕದಿಂದಾಗಿ ದೇಶದ ಆರ್ಥಿಕತೆಗೆ ಭಾರಿ ಹೊಡೆತ ಬಿದ್ದಿದೆ. ಇದೀಗ ವಿಮಾನ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ.50 ರಷ್ಟು ಕುಸಿತ ಕಂಡಿದೆ. ಇದರಿಂದ ಕ್ಯಾಬ್​ ಚಾಲಕರ ಜೀವನ ನಿರ್ವಹಣೆಯು ದುಸ್ತರವಾಗಿದೆ,

decreased-in-airport-passenger-numbers-due-to-corona-effect
ವಿಮಾನ ಪ್ರಯಾಣಕ್ಕೂ ತಟ್ಟಿದ ರಾಜ್ಯದಲ್ಲಿ ಕೊರೊನಾ ಕಂಟಕ

By

Published : Mar 15, 2020, 6:53 PM IST

ದೇವನಹಳ್ಳಿ: ಸದಾ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎಎಲ್​) ಮೇಲೆ ಕೊರೊನಾ ವೈರಸ್ ಪರಿಣಾಮ ಬೀರಿದ್ದು, ಶೇ.50ರಷ್ಟು ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆ ಕಂಡಿದೆ.ಇದರಿಂದ ಕ್ಯಾಬ್​ಗಳ ಸಂಚಾರ ಇಳಿಮುಖವಾಗಿದೆ.

ರಾಜ್ಯದಲ್ಲಿ ಕೊರೊನಾ ಕಂಟಕ

ದೇಶದ ಅತಿ ಹೆಚ್ಚು ಪ್ರಯಾಣಿಕರು ಸಂಚರಿಸುವ 3ನೇ ಅತಿ ದೊಡ್ಡ ವಿಮಾನ ನಿಲ್ದಾಣ ಇದಾಗಿದ್ದು, ಇಲ್ಲಿನ ಪ್ರಯಾಣಿಕರ ಮೇಲೆಯೆ ಅವಲಂಬಿತರಾದ ಕ್ಯಾಬ್​ ಚಾಲಕರ ಆದಯವು ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದೆ.

ಅಂತಾರಾಷ್ಟ್ರೀಯ ವಿಮಾನಗಳ ಏರ್ ಟ್ರಾಫಿಕ್ ಪ್ರಮಾಣದಲ್ಲಿಯೂ ಶೇ.20ರಷ್ಟು ಕಡಿತವಾಗಿದೆ. ನಿತ್ಯ 14 ರಿಂದ 15 ಸಾವಿರ ಪ್ರಯಾಣಿಕರು ಕೆಐಎಎಲ್​ನಲ್ಲಿ ಪ್ರಯಾಣಿಸುತ್ತಿದ್ದರು. ಒಮ್ಮೆಲೆ 6 ರಿಂದ 7 ಸಾವಿರಕ್ಕೆ ಕುಸಿದಿದೆ ಎಂದು ಕೆಐಎಎಲ್​ ವಿಮಾನ ನಿಲ್ದಾಣದ ನಿರ್ವಹಣಾ ವಿಭಾಗದ ವಕ್ತಾರರು ಮಾಹಿತಿ ನೀಡಿದ್ದಾರೆ.

ಕ್ಯಾಬ್ ಚಾಲಕರ ಜೊತೆ ಬಿಎಂಟಿಸಿ ಮತ್ತು ಕೆಎಸ್​ಆರ್​ಟಿಸಿ ಬಸ್​ಗಳ ಮೇಲು ಕರಿನೆರಳು ಆವರಿಸಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ತಪಾಸಣೆ ಘಟಕವಿಲ್ಲ: ಎಲ್ಲ ಜನನಿಬಿಡ ಪ್ರದೇಶಗಳಲ್ಲಿ ಕೊರೊನಾ ತಪಾಸಣೆ ಹಾಗೂ ಜಾಗೃತಿ ಘಟಕಗಳನ್ನು ಸ್ಥಾಪನೆ ಮಾಡಲಾಗಿದೆ. ಆದರೆ, ಹುಬ್ಬಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತ್ರ ಯಾವುದೇ ತಪಾಸಣಾ ಘಟಕಗಳನ್ನು ತೆರೆದಿಲ್ಲ. ವಾಣಿಜ್ಯನಗರಿ ಅಂತಾರಾಷ್ಟ್ರೀಯ ದರ್ಜೆಗೆ ಏರಿದ್ದರು‌ ಯಾವುದೇ ತಪಾಸಣೆಯ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ.

ಕೊರೊನಾ ವೈರಸ್​ ಭಯದಿಂದಾಗಿ ಸ್ವಯಂ ಪ್ರೇರಿತರಾಗಿ ಮಾಸ್ಕ್ ಧರಿಸಿಕೊಂಡು ಜನರು ಪ್ರಯಾಣಿಸುತ್ತಿದ್ದಾರೆ. ಜಿಲ್ಲಾಡಳಿತವು ಕಿಮ್ಸ್, ರೈಲ್ವೆ ನಿಲ್ದಾಣದಲ್ಲಿ ತಪಾಸಣಾ ಹಾಗೂ ಜಾಗೃತಿ ಘಟಕಗಳನ್ನು ಸ್ಥಾಪಿಸಿದೆ.

ABOUT THE AUTHOR

...view details