ಆನೇಕಲ್(ಬೆಂಗಳೂರು): ಕಲ್ಲು ಕ್ವಾರಿಯಲ್ಲಿ ಅಪರಿಚಿತ ಪುರುಷನ ಶವ ಪತ್ತೆಯಾಗಿದೆ. ಬನ್ನೇರುಘಟ್ಟ ಸಮೀಪದ ಗಣೇಶ ದೇವಾಲಯದ ಮುಂಭಾಗ ಇರುವ ಕಲ್ಲುಕ್ವಾರಿಯಲ್ಲಿ ಶವ ಕಂಡು ಸುತ್ತಮುತ್ತಲ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದ್ದಾರೆ .
ಕಲ್ಲು ಕ್ವಾರಿಯಲ್ಲಿ ಶವ ಪತ್ತೆ: ಕೊಲೆ ಶಂಕೆ - ಆನೇಕಲ್
ನೀರಿನಲ್ಲಿ ಶವ ತೇಲುತ್ತಿರುವುದನ್ನು ನೋಡಿದ ಸ್ಥಳೀಯರು ಬನ್ನೇರುಘಟ್ಟ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಬನ್ನೇರುಘಟ್ಟ ಪೊಲೀಸ್ ಠಾಣೆ ಸಿಬ್ಬಂದಿಯಿಂದ ಶವ ಹೊರತೆಗೆಯುವ ಕಾರ್ಯ ನಡೆಸಿದ್ದಾರೆ.
ಶವ ಪತ್ತೆ
ನೀರಿನಲ್ಲಿ ಶವ ತೇಲುತ್ತಿರುವುದನ್ನು ನೋಡಿದ ಸ್ಥಳೀಯರು ಬನ್ನೇರುಘಟ್ಟ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಬನ್ನೇರುಘಟ್ಟ ಪೊಲೀಸ್ ಠಾಣೆ ಸಿಬ್ಬಂದಿಯಿಂದ ಶವ ಹೊರತೆಗೆಯುವ ಕಾರ್ಯ ನಡೆದಿದೆ.
ಎರಡು ದಿನಗಳ ಹಿಂದೆ ಘಟನೆ ನಡೆದಿದ್ದು, ಕೈ ಕಾಲುಬೆರಳುಗಳನ್ನು ಮೀನುಗಳು ತಿಂದಿವೆ. ಆತ್ಮಹತ್ಯೆಯೋ ಅಥವಾ ಕೊಲೆಯೋ ಎನ್ನುವ ಶಂಕೆಯ ಬೆನ್ನೇರಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕೆರೆ ಏರಿ ಬಳಿ ಪತ್ತೆಯಾದ ಮದ್ಯದ ಬಾಟಲಿಗಳು ಹಾಗೂ ರಕ್ತದ ಕಲೆಗಳು ಕೊಲೆ ನಡೆದಿರಬಹುದೆಂಬ ಶಂಕೆಗೂ ಕಾರಣವಾಗಿದೆ.