ಬೆಂಗಳೂರು:ವಿಜಯದಶಮಿ ಹಬ್ಬದ ಹಿನ್ನೆಲೆಯಲ್ಲಿ ಮೆಜೆಸ್ಟಿಕ್ ಬಸ್ ಹಾಗೂ ನಗರ ರೈಲು ನಿಲ್ದಾಣಗಳಿಗೆ ನಗರ ಪಶ್ಚಿಮ ವಿಭಾಗದ ಡಿಸಿಪಿ ಸೌಮ್ಯಲತಾ ಭೇಟಿ ನೀಡಿ ಹಬ್ಬದ ಸಂದರ್ಭದಲ್ಲಿ ಉಂಟಾಗಬಹುದಾದ ಸಂಚಾರ ದಟ್ಟಣೆ ನಿವಾರಣೆ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿ ಪರಿಶೀಲನೆ ನಡೆಸಿದ್ದಾರೆ.
ವಿಜಯದಶಮಿ ಹಿನ್ನೆಲೆ: ಮೆಜೆಸ್ಟಿಕ್ ಬಸ್, ರೈಲು ನಿಲ್ದಾಣಗಳಿಗೆ ಡಿಸಿಪಿ ಭೇಟಿ, ಪರಿಶೀಲನೆ - ಟ್ರಾಫಿಕ್ ಜಾಮ್
ವಿಜಯದಶಮಿ ಹಬ್ಬದ ಹಿನ್ನೆಲೆಯಲ್ಲಿ ಮೆಜೆಸ್ಟಿಕ್ ಬಸ್ ಹಾಗೂ ನಗರ ರೈಲು ನಿಲ್ದಾಣಗಳಿಗೆ ನಗರ ಪಶ್ಚಿಮ ವಿಭಾಗದ ಡಿಸಿಪಿ ಸೌಮ್ಯಲತಾ ಭೇಟಿ ನೀಡಿ, ಹಬ್ಬದ ಸಂದರ್ಭದಲ್ಲಿ ಉಂಟಾಗಬಹುದಾದ ಸಂಚಾರ ದಟ್ಟಣೆ ನಿವಾರಣೆ ಬಗ್ಗೆ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಹಬ್ಬದ ಹಿನ್ನೆಲೆಯಲ್ಲಿ ರಾಜಧಾನಿಯಿಂದ ಬಸ್ ಹಾಗೂ ರೈಲಿನ ಮೂಲಕ ದೇಶದ ವಿವಿಧೆಡೆಯಿಂದ ಇಲ್ಲಿಗೆ ಪ್ರಯಾಣಿಕರು ಬರಲಿದ್ದು, ಸುಗಮ ಸಂಚಾರಕ್ಕೆ ಬೇಕಾದ ಕ್ರಮಗಳ ಬಗ್ಗೆ ಸ್ಥಳೀಯ ಸಂಚಾರಿ ಪೊಲೀಸ್ ಅಧಿಕಾರಿಗಳಿಗೆ ಸೌಮ್ಯಲತಾ ಸಲಹೆ ಸೂಚನೆಗಳನ್ನು ನೀಡಿದರು.
ನಾಳೆ ವಾರಾಂತ್ಯ ಹಿನ್ನೆಲೆಯಲ್ಲಿ ಐಟಿಬಿಟಿ ಉದ್ಯೋಗಸ್ಥರಿಗೆ ರಜೆ ಇರಲಿದೆ. ಸೋಮವಾರ ಆಯುಧ ಪೂಜೆ ಹಾಗೂ ಮಂಗಳವಾರ ವಿಜಯದಶಮಿ ಹಿನ್ನೆಲೆಯಲ್ಲಿ ನಾಲ್ಕು ದಿನ ರಜೆ ಇರುವುದರಿಂದ ಬಹುತೇಕರು ಇಂದು ರಾತ್ರಿಯಿಂದಲೇ ತಮ್ಮ ಊರುಗಳಿಗೆ ಪಯಣಿಸಲು ಸಿದ್ದತೆ ನಡೆಸುತ್ತಿದ್ದಾರೆ. ಏಕಕಾಲದಲ್ಲೇ ಹೆಚ್ಚು ಮಂದಿ ಪ್ರಯಾಣ ಬೆಳೆಸಲಿದ್ದು ಈ ವೇಳೆ ಉಂಟಾಗುವ ಟ್ರಾಫಿಕ್ ಜಾಮ್ ಹಾಗೂ ಪ್ರಮುಖ ಜಂಕ್ಷನ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಂಚಾರಿ ಪೊಲೀಸರನ್ನು ನಿಯೋಜಿಸಲು ಕ್ರಮ ಕೈಗೊಳ್ಳುವಂತೆ ಅವರು ನಿರ್ದೇಶನ ಕೊಟ್ಟರು.