ಬೆಂಗಳೂರು: ಕೊಲೆ, ಕೊಲೆಯತ್ನ, ದರೋಡೆ ಹಾಗೂ ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಗರದ ದಕ್ಷಿಣ ವಿಭಾಗದ ರೌಡಿಶೀಟರ್ ಪರೇಡ್ ಮಾಡಿಸಿ ಡಿಸಿಪಿ ರೋಹಿಣಿ ಸಫೆಟ್ ಬಿಸಿ ಮುಟ್ಟಿಸಿದರು.
ರೌಡಿಶೀಟರ್ಗಳ ಚಳಿ ಬಿಡಿಸಿದ ಬೆಂಗಳೂರು ಸೌತ್ ಡಿಸಿಪಿ...! - kannadanews
ಬೆಂಗಳೂರು ನಗರದ ದಕ್ಷಿಣ ವಿಭಾಗದ ರೌಡಿಶೀಟರ್ಗಳ ಪರೇಡ್ ಮಾಡಿಸಿ ಡಿಸಿಪಿ ರೋಹಿಣಿ ಸಫೆಟ್ ರೌಡಿಶೀಟರ್ಗಳಿಗೆ ಫುಲ್ ಕ್ಲಾಸ್ ತಗೊಂಡಿದ್ದಾರೆ.
ಜಯನಗರ ಉಪ ವಿಭಾಗದ ಪೊಲೀಸ್ ಠಾಣಾ ವ್ಯಾಪ್ತಿಯ ಐದು ಠಾಣೆಗಳ 142 ರೌಡಿಶೀಟರ್ ಪರೇಡ್ ನಡೆಸಲಾಯಿತು. ಇಷ್ಟು ದಿನಗಳು ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದು ಸಾಕು ನಿಲ್ಲಿಸಿಬಿಡಿ , ಮತ್ತೆ ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾದರೆ ಸರಿ ಇರುವುದಿಲ್ಲ. ಏನಾದರೂ ಸಮಸ್ಯೆಗಳಾದರೆ ಅಥವಾ ಯಾರಾದರೂ ತೊಂದರೆ ಕೊಡುತ್ತಿದ್ದರೆ ನಮ್ಮ ಗಮನಕ್ಕೆ ತನ್ನಿ. ನೀವಾಗಿಯೇ ಕಾನೂನು ಕೈ ತೆಗೆದುಕೊಳ್ಳಬೇಡಿ ಎಂದು ಖಡಕ್ ಎಚ್ಚರಿಕೆ ನೀಡಿದರು. ಎಚ್ಚರಿಕೆ ನಡುವೆಯೂ ಅರೋಪಿಗಳು ಮತ್ತೆ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡರೆ ಅವರ ವಿರುದ್ಧ ಗೂಂಡಾ ಕಾಯ್ದೆ ಜಾರಿ ಮಾಡಲಾಗುವುದು ಎಂದು ವಾರ್ನ್ ಮಾಡಿದರು.