ಬೆಂಗಳೂರು:ಸಿಓಪಿ ಕಚೇರಿ ಕರ್ತವ್ಯ ನಿರ್ವಹಣೆ ಮಾಡುವ ಎಲ್ಲ ಲಿಪಿಕ ಸಿಬ್ಬಂದಿ ಆಗಸ್ಟ್ನಿಂದ ಸೆಪ್ಟೆಂಬರ್ವರೆಗೆ ವೈಯಕ್ತಿಕ ಕಾರಣ ಹೇಳಿ ರಜೆ ತೆಗೆದುಕೊಂಡಿದ್ರು. ಸದ್ಯ ಈ ಸಿಬ್ಬಂದಿಗೆ ಡಿಸಿಪಿ ಅಡ್ಮಿನ್ ಸ್ಟ್ರಿಕ್ಟ್ ಆರ್ಡರ್ ಪಾಸ್ ಮಾಡಿದ್ದಾರೆ.
ಕಮಿಷನರ್ ಕಚೇರಿಯ 29 ಸಿಬ್ಬಂದಿ ಇಎಲ್, ಸಿಎಲ್ ಗಳಿಗೆ ಕತ್ತರಿ ಬಿದ್ದಿದೆ. ಸಾಂದರ್ಭಿಕ ಹಾಗೂ ಗಳಿಕೆ ರಜೆಗಳ ಕಟಾಯಿಸಿ ಡಿಸಿಪಿ ನಿಶಾ ಜೇಮ್ಸ್ ಆರ್ಡರ್ ಮಾಡಿದ್ದಾರೆ.
ಡಿಸಿಪಿ ಅಡ್ಮಿನ್ ಸ್ಟ್ರಿಕ್ಟ್ ಆರ್ಡರ್ ಸಿಬ್ಬಂದಿಗಳು ಆಗಸ್ಟ್ ತಿಂಗಳಲ್ಲಿ ಸಮಯಕ್ಕೆ ಸರಿಯಾಗಿ ಹಾಜರಾಗಿಲ್ಲ. ಪದೇ ಪದೆ ಇಲಾಖೆಯಿಂದ ಜ್ಞಾಪನ ಪತ್ರ ಕೊಟ್ಟಿದ್ರೂ ಪ್ರಯೋಜನ ಆಗಿಲ್ಲ ಎಂದು ಖಡಕ್ ಆದೇಶ ಹೊರಡಿಸಿ ತಕ್ಷಣ ಕೆಲಸಕ್ಕೆ ಹಾಜರಾಗಬೇಕೆಂದು ತಿಳಿಸಿದ್ದಾರೆ.
ರಜೆಗೆ ಕತ್ತರಿ ಬಿದ್ದ ಮೇಲಾದ್ರೂ ಸರಿ ಹೋಗಬೇಕು ಇಲ್ಲವಾದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಹಿರಿಯ ಅಧಿಕಾರಿಗಳ ಆದೇಶ ನೋಡಿ ಸಿಬ್ಬಂದಿ ಸೈಲೆಂಟಾಗಿದ್ದಾರೆ.
ಕೊರೊನಾ ಸೊಂಕು ವ್ಯಾಪಕವಾಗಿ ಹಬ್ಬುತ್ತಿದ್ದ ಸಂದರ್ಭದಲ್ಲಿ ಬಹುತೇಕ ಸಿಒಪಿ ಕಚೇರಿ ಕರ್ತವ್ಯ ನಿರ್ವಹಣೆ ಮಾಡುವ ಎಲ್ಲಾ ಲಿಪಿಕ ಸಿಬ್ಬಂದಿ ರಜೆಯಲ್ಲಿ ತೆರಳಿದ್ರು. ಇದೀಗ ಹೊಸ ಆದೇಶ ಪಾಲನೆ ಮಾಡೋದು ಅನಿವಾರ್ಯವಾಗಿದೆ.