ಬೆಂಗಳೂರು :ನಿನ್ನೆ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿ ವಿವಾದಕ್ಕೆ ಗುರಿಯಾಗಿದ್ದ ಅಮೂಲ್ಯ ಕುರಿತು ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಪ್ರತಿಕ್ರಿಯೆ ನೀಡಿದ್ದಾರೆ.
ಅಮೂಲ್ಯರ ಪಾಕಿಸ್ತಾನ್ ಜಿಂದಾಬಾದ್ ಹೇಳಿಕೆಗೆ ಏನ್ ಹೇಳ್ತಾರೆ ಡಿಸಿಎಂ ನೋಡಿ! - politician reaction on Pakistan Zindabad statement of Amulya Leona
ವಿರೋಧ ಪಕ್ಷ ಗೊಂದಲ ನಿರ್ಮಾಣ ಮಾಡಿರುವುದರಿಂದ ಅಮೂಲ್ಯರಂತಹ ಯುವತಿಯಲ್ಲಿ ಪರಿಣಾಮಗಳು ಉಂಟಾಗಿದೆ ಎಂದು ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಪ್ರತಿಕ್ರಿಯೆ ನೀಡಿದ್ದಾರೆ.
ಯಾರೇ ಆಗಲಿ ದೇಶದ ಕಾನೂನು ಎತ್ತಿಹಿಡಿಯುವ ಕೆಲಸ ಮಾಡಬೇಕು. ಗೊಂದಲ, ಅಪನಂಬಿಕೆ ಸೃಷ್ಟಿ ಮಾಡಬಾರದು. ಎನ್‌ಆರ್‌ಸಿ ಕಾಯ್ದೆ ಇಲ್ಲಿನ ನಾಗರಿಕರ ವಿರೋಧದ ಕಾಯ್ದೆ ಅಲ್ಲ ಎಂದು ಸಾವಿರ ಬಾರಿ ಹೇಳಲಾಗಿದೆ. ವಿರೋಧ ಪಕ್ಷ ಗೊಂದಲ ನಿರ್ಮಾಣ ಮಾಡಿರುವುದರಿಂದ ಅಮೂಲ್ಯರಂತಹ ಯುವತಿಯಲ್ಲಿ ಪರಿಣಾಮಗಳು ಉಂಟಾಗಿದೆ.
ಅಮೂಲ್ಯ ಅವರು ಹೇಳುತ್ತಿರುವ ಬಗ್ಗೆ ಅವರಿಗೇ ಅರಿವಿಲ್ಲ. ಉಗ್ರವಾಗಿ ಹೇಳುವ ಮೂಲಕ ಗೊಂದಲಗಳನ್ನು ಮೂಡಿಸುತ್ತಿದ್ದಾರೆ. ಭಾವನಾತ್ಮಕ ಗೊಂದಲಗಳನ್ನು ಮೂಡಿಸುವುದು ಬಿಟ್ಟು, ಒಳ್ಳೆಯ ವಿಚಾರಗಳಾದ ಭ್ರಷ್ಟಾಚಾರ, ಬಡತನದ ವಿರುದ್ಧ ಸಮಾಜದ ಕಲ್ಯಾಣಕ್ಕಾಗಿ ಕೆಲಸ ಮಾಡಲಿ ಎಂದರು.