ಕರ್ನಾಟಕ

karnataka

ETV Bharat / state

ಶಬರಿಮಲೆಗೆ ಭೇಟಿ ನೀಡಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ಡಿಸಿಎಂ ಅಶ್ವತ್ಥ್ ನಾರಾಯಣ - ಕೇರಳ ವಿಧಾನಸಭಾ ಚುನಾವಣೆ

ವಿಧಾನಸಭಾ ಚುನಾವಣೆಯ ಭಾಗವಾಗಿ ಕೇರಳ ಪ್ರವಾಸದಲ್ಲಿರುವ ಡಿಸಿಎಂ ‌ಅಶ್ವತ್ಥ್ ನಾರಾಯಣ, ಶಬರಿಮಲೆ ದೇವಸ್ಥಾನ ಮತ್ತು ಪಂದಳಂ ಅರಮನೆಗೆ ಭೇಟಿ ನೀಡಿದರು.

DCM Ashwat Narayana Visited Shabarimala
ಶಬರಿಮಲೆಗೆ ಭೇಟಿ ನೀಡಿದ ಡಿಸಿಎಂ ಅಶ್ವತ್ಥ್ ನಾರಾಯಣ

By

Published : Mar 16, 2021, 9:31 PM IST

ಶಬರಿಮಲೆ/ಬೆಂಗಳೂರು: ಕೇರಳ ಚುನಾವಣೆಯ ಬಿಜೆಪಿ ಸಹ ಪ್ರಭಾರಿಯಾಗಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥ್ ನಾರಾಯಣ ಪ್ರಚಾರದ ಮಧ್ಯೆ ಮಾಲಧಾರಿಯಾಗಿ ಶಬರಿಮಲೆಗೆ ತೆರಳಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದರು.

ಮಂಗಳವಾರ ಸಂಜೆ 5.50ಕ್ಕೆ ಸರಿಯಾಗಿ ಪಂಪಾ ನದಿಯಿಂದ ಬೆಟ್ಟಕ್ಕೆ ಇರುಮುಡಿ ಹೊತ್ತು ಕಾಲ್ನಡಿಗೆಯಲ್ಲಿ ಹೊರಟ ಡಿಸಿಎಂ, 6.55 ಕ್ಕೆ ದೇವಸ್ಥಾನ ತಲುಪಿ, ದೇವಸ್ಥಾನದಲ್ಲಿ ನಡೆದ ವಿಶೇಷ ಪಡಿಪೂಜೆಯಲ್ಲಿ ಭಾಗವಹಿಸಿದರು. ನಂತರ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದುಕೊಂಡರು.

ಶಬರಿಮಲೆಗೆ ಭೇಟಿ ನೀಡಿದ ಡಿಸಿಎಂ ಅಶ್ವತ್ಥ್ ನಾರಾಯಣ

ಈ ಸಂದರ್ಭದಲ್ಲಿ ದೇಗುಲದ ಮುಖ್ಯ ತಂತ್ರಿ ರಾಜೀವ ಕಂದರಾರು ಹಾಗೂ ಮೇಲ್‌ಶಾಂತಿ ಅವರಾದ ವಿ.ಕೆ.ಜಯರಾಜ್‌ ಪೋಟ್ರಿ ಡಿಸಿಎಂಗೆ ಪೂಜೆ ನೆರವೇರಿಸಿಕೊಟ್ಟು, ಎಲೆ ಪ್ರಸಾದ ನೀಡಿದರು. ಡಿಸಿಎಂ ಸ್ವರ್ಣ ಮೆಟ್ಟಿಲ ಮುಂದೆ ನಿಂತು ಇರುಮುಡಿ ಸಮರ್ಪಿಸಿದರು. ದೇವಳದ ಅರ್ಚಕರು ಹಾಗೂ ಮುಖ್ಯ ತಂತ್ರಿ ರಾಜೀವ ಕಂದರಾರು ಉಪಮುಖ್ಯಮಂತ್ರಿಗಳನ್ನು ಬರಮಾಡಿಕೊಂಡು ಕ್ಷೇತ್ರದ ಮಹಿಮೆಯ ಬಗ್ಗೆ ಮಾಹಿತಿ ನೀಡಿದರು.

ಪಂದಳಮ್ ಅರಮನೆಗೂ ಭೇಟಿ:ಮಂಗಳವಾರ ಬೆಳಗ್ಗೆಯೇ ಕೇರಳದ ಪಟ್ಟಾನಂತಿಟ್ಟ ನಗರಕ್ಕೆ ತೆರಳಿದ ಡಿಸಿಎಂ, ಅಲ್ಲಿಂದ ನೇರವಾಗಿ ಶಬರಿಮಲೆಗೆ ತೆರಳುವ ಮಾರ್ಗಮಧ್ಯೆ ಪಂದಳಮ್ ಅರಮನೆಗೆ ಭೇಟಿ ನೀಡಿದರು. ಅಲ್ಲಿ ಅಯ್ಯಪ್ಪ ಸ್ವಾಮಿಯ ಸಾಕುತಂದೆ ಮಹಾರಾಜ ರಾಜಶೇಖರ ಪೆರುಮಾಳ್‌ ಅವರ ವಂಶಸ್ಥರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ಇದನ್ನೂ ಓದಿ: ಕೇರಳ ಎಲೆಕ್ಷನ್ ಕದನದಲ್ಲಿ ಅಂದರ್​-ಬಾಹರ್.. ಗೆಲುವಿಗಾಗಿ ಕ್ಷೇತ್ರ, ಅಭ್ಯರ್ಥಿಗಳ ಬದಲಾವಣೆ!

ಈ ವೇಳೆ ರಾಜ ಕುಟುಂಬದ 102 ವರ್ಷದ ಹಿರಿಯ ಅಜ್ಜಿ ಮಾಕಮ್ಮನಾಳ್ ತನ್ವಾಂಗಿ ತಂಪುರುಟ್ಟೈ ಅವರಿಂದ ಆಶೀರ್ವಾದ ಪಡೆದರು. ಬಳಿಕ ಅರಮನೆಯಲ್ಲಿರುವ ಮಕರವಿಳಕ್ಕು ಸಮಯದಲ್ಲಿ ಅಯ್ಯಪ್ಪ ಸ್ವಾಮಿಗೆ ಅಲಂಕಾರ ಮಾಡುವ ತಿರುವಾಭರಣಗಳ ಸ್ಟ್ರಾಂಗ್ ರೂಮ್​ಗೆ ಭೇಟಿ ನೀಡಿ‌ ನಮಸ್ಕರಿಸಿದರು. ರಾಜವಂಶಕ್ಕೆ ಸೇರಿದ 400 ಜನರು ಇಲ್ಲಿದ್ದು, ಕುಟುಂಬಸ್ಥರ ಜೊತೆ ಡಿಸಿಎಂ ಅನೌಪಚಾರಿಕ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ ‌ಅಶ್ವತ್ಥ್ ನಾರಾಯಣ, ನನ್ನ ಜೀವನದಲ್ಲಿಯೇ ಇದೊಂದು ಅವಿಸ್ಮರಣೀಯ ದಿನ. ಸ್ವಾಮಿ ಅಯ್ಯಪ್ಪ ಅವರು ಆಡಿಬೆಳೆದ ಜಾಗವನ್ನು ಸಂದರ್ಶಿಸುವ ಭಾಗ್ಯ ನನ್ನದಾಗಿದೆ ಎಂದರು.

ABOUT THE AUTHOR

...view details