ಕರ್ನಾಟಕ

karnataka

ETV Bharat / state

ಬೆಂಗಳೂರು ಮೆಟ್ರೋ ಪಿಲ್ಲರ್​ ಬಿರುಕು... ಪ್ರಯಾಣಿಕರಲ್ಲಿ ಆತಂಕ - ಮೆಟ್ರೋ ನೇರಳೆ ಮಾರ್ಗ

ಬೆಂಗಳೂರಿನ ಇಂದಿರಾನಗರದ ಮೆಟ್ರೋ ನೇರಳೆ ಮಾರ್ಗದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ.  ಮೆಟ್ರೋವು ಕಳಪೆ ಕಾಮಗಾರಿಯಿಂದ ಒಂದೊಂದೇ ಅವಾಂತರ ಸೃಷ್ಟಿ ಮಾಡುತ್ತಿದೆ.

ಮೆಟ್ರೋ ಪಿಲ್ಲರ್​

By

Published : Aug 3, 2019, 12:05 PM IST

Updated : Aug 3, 2019, 12:44 PM IST

ಬೆಂಗಳೂರು: ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಮತ್ತೊಮ್ಮೆ ಡವಡವ ಶುರುವಾಗಿದೆ. ಟ್ರಿನಿಟಿ ಮೆಟ್ರೋ ನಿಲ್ದಾಣದಲ್ಲಿ ಪಿಲ್ಲರ್ ಬಿರುಕು ಮಾಸುವ ಮುನ್ನವೇ, ಇಂದಿರಾನಗರ ಮೆಟ್ರೋ ನಿಲ್ದಾಣದಲ್ಲಿ ಮತ್ತೆ ಬಿರುಕು ಕಾಣಿಸಿಕೊಂಡಿದೆ.

ಬೆಂಗಳೂರಿನ ಇಂದಿರಾನಗರದ ಮೆಟ್ರೋ ನೇರಳೆ ಮಾರ್ಗದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ. ಮೆಟ್ರೋವು ಕಳಪೆ ಕಾಮಗಾರಿಯಿಂದ ಒಂದೊಂದೇ ಅವಾಂತರ ಸೃಷ್ಟಿ ಮಾಡುತ್ತಿದೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಟ್ರಿನಿಟಿ ಹಾಗೂ ಜಯನಗರ ಎರಡೂ ಮೆಟ್ರೋ ಸ್ಟೇಷನ್‌ಗಳಲ್ಲಿಯೂ ಪಿಲ್ಲರ್‌ನ ಬೇರಿಂಗ್ ಬಿರುಕು ಬಿಟ್ಟಿತ್ತು. ಆತಂಕದಲ್ಲೇ ಪ್ರಯಾಣಿಸಿದ ಸಾರ್ವಜನಿಕರು ಮೆಟ್ರೋ ಕಾಮಗಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಬೆಂಗಳೂರು ಮೆಟ್ರೋ ಪಿಲ್ಲರ್​ ಬಿರುಕು

ಈ ಬಗ್ಗೆ ಬಿಎಂಆರ್​​ಸಿಎಲ್‌ನ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ್ ಚೌಹಾನ್ ಪ್ರತಿಕ್ರಿಯಿಸಿ, ಪಿಲ್ಲರ್‌ನ ಬೇರಿಂಗ್ 15 ರಿಂದ 20 ವರ್ಷಗಳ ಕಾಲ ಬಾಳಿಕೆ ಬರುತ್ತೆ. ಭಾರ ಜಾಸ್ತಿ ಆದಾಗ ಅದು ಕಂಪ್ರಸ್ ಆಗುತ್ತೆ. ಇದರಿಂದ ಏನೂ ತೊಂದರೆ ಆಗಲ್ಲ. ಈಗಾಗಲೇ ದುರಸ್ತಿ ಕಾರ್ಯ ನಡೆಯುತ್ತಿದ್ದು, ಆದಷ್ಟು ಬೇಗ ಸರಿಪಡಿಸಲಾಗುತ್ತದೆ. ಜನರು ಗಾಬರಿಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.

ಬೆಂಗಳೂರು ಮೆಟ್ರೋ ಪಿಲ್ಲರ್​ ಬಿರುಕು

ಇನ್ನು ಕಳೆದ ಬಾರಿಯ ಘಟನೆ ನಡೆದ ಬಳಿಕ ತಜ್ಞರನ್ನ ಕರೆಸಿ ಬಿಎಂಆರ್‌ಸಿಎಲ್ ಅಭಿಪ್ರಾಯ ಪಡೆದಿತ್ತು. ಆರು ತಿಂಗಳಿಗೆ ಒಮ್ಮೆಯಾದರೂ ಮೆಟ್ರೋ ಪಿಲ್ಲರ್‌ಗಳನ್ನ ಪರಿಶೀಲಿಸಿ, ತೊಂದರೆ ಇದ್ದರೆ ಸರಿಪಡಿಸಬೇಕು. ಇಲ್ಲವಾದರೆ, ಮೆಟ್ರೋ ಪ್ರಯಾಣಕ್ಕೆ ಜನರು ಭಯಪಡುವ ಸ್ಥಿತಿ ನಿರ್ಮಾಣವಾಗಲಿದೆ.

Last Updated : Aug 3, 2019, 12:44 PM IST

ABOUT THE AUTHOR

...view details