ಕರ್ನಾಟಕ

karnataka

ETV Bharat / state

ಸಾರ್ವಜನಿಕರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರೋದು ತಪ್ಪೇ?: ಡಿ.ಕೆ.ಸುರೇಶ್ - ಸಂಸದ ಡಿ.ಕೆ. ಸುರೇಶ್

ಕಾಂಗ್ರೆಸ್‌ನವರ ಮೇಲೆ ಮಾತ್ರ ಕೇಸ್ ಹಾಕ್ತಾರೆ. ಬಿಜೆಪಿ ನಾಯಕರ ಮೇಲಿಲ್ಲ. ಜನಪರ ಹೋರಾಟಕ್ಕೆ ಕೇಸ್ ಹಾಕುವುದನ್ನು ನಾನು ಸ್ವಾಗತಿಸುತ್ತೇನೆ ಎಂದು ಸಂಸದ ಡಿ.ಕೆ.ಸುರೇಶ್‌ ಅಸಮಾಧಾನ ವ್ಯಕ್ತಪಡಿಸಿದರು.

D K Suresh
ಡಿ.ಕೆ.ಸುರೇಶ್

By

Published : Jun 30, 2020, 5:54 PM IST

ಬೆಂಗಳೂರು: ಸಾರ್ವಜನಿಕರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರೋದು ತಪ್ಪೇ?. ಇದಕ್ಕೆ ಕೇಸ್ ಹಾಕ್ತಾರೆ ಅಂದ್ರೆ ಇನ್ನೇನು ಹೇಳಲಿ? ಎಂದು ಸಂಸದ ಡಿ.ಕೆ.ಸುರೇಶ್ ಅಸಮಾಧಾನ ವ್ಯಕ್ತಪಡಿಸಿದರು.

ಸಾರ್ವಜನಿಕರ ಸಮಸ್ಯೆಗಳ ಕುರಿತು ಸರ್ಕಾರದ ಗಮನಕ್ಕೆ ತರೋದು ತಪ್ಪೇ?: ಡಿ.ಕೆ.ಸುರೇಶ್

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ಮಾಡಿದ್ದೇವೆ. ನಿನ್ನೆ ನಾವು ಜನರ ಪರವಾಗಿ ಪ್ರತಿಭಟನೆ ಮಾಡಿದ್ದೇವೆ. ಕಾಂಗ್ರೆಸ್‌ನವರ ಮೇಲೆ ಮಾತ್ರ ಕೇಸ್ ಹಾಕ್ತಾರೆ. ಬಿಜೆಪಿ ನಾಯಕರ ಮೇಲಿಲ್ಲ. ಅದೂ ಜನಪರ ಹೋರಾಟಕ್ಕೆ ಕೇಸ್ ಹಾಕುವುದನ್ನು ನಾನು ಸ್ವಾಗತಿಸುತ್ತೇನೆ ಎಂದರು.

ABOUT THE AUTHOR

...view details