ಬೆಂಗಳೂರು:ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಇಡಿ ಕಸ್ಟಡಿ ಅವಧಿ ಇಂದು ಅಂತ್ಯಗೊಳ್ಳಲಿದ್ದು, ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯು ವಿಶೇಷ ನ್ಯಾಯಾಲಯದಲ್ಲಿ ನಡೆಯಲಿದೆ. ಇದಕ್ಕೆ ಪ್ರತಿಯಾಗಿ ಇಡಿ ಸೋಮವಾರ ಕೋರ್ಟ್ ಗೆ ಜಾಮೀನು ಮಂಜೂರು ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿ ಲಿಖಿತವಾಗಿ ತನ್ನ ಆಕ್ಷೇಪಣೆ ಸಲ್ಲಿಸಿದೆ.
ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಿದ ಅವಧಿ ಪೂರ್ಣಗೊಂಡಿದ್ದರಿಂದ ಹಾಗೂ ಅವರು ಸಾಕಷ್ಟು ವಿಚಾರಣೆಯನ್ನೂ ನಡೆಸಿದ್ದರಿಂದ ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಶಿವಕುಮಾರ್ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಇಡಿ ಸೋಮವಾರ ಕೋರ್ಟ್ಗೆ ಜಾಮೀನು ಮಂಜೂರು ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿ ಲಿಖಿತ ಆಕ್ಷೇಪಣೆ ಸಲ್ಲಿಸಿರುವುದರಿಂದ ಡಿಕೆಶಿಗೆ ಜೈಲಾ? ಬೇಲಾ? ಅಥವಾ ಇಡಿ ಕಸ್ಟಡಿಯಾ?ಎನ್ನುವುದು ಕೋರ್ಟ್ನಲ್ಲಿ ತೀರ್ಮಾನವಾಗಲಿದೆ.
ಶಿವಕುಮಾರ್ ಅವರು ವಿಚಾರಣೆಗೆ ಸಹಕರಿಸಿಲ್ಲ. ಅನಾರೋಗ್ಯದಿಂದ ಹೆಚ್ಚಿನ ಸಮಯ ಆಸ್ಪತ್ರೆಯಲ್ಲಿಯೇ ಕಳೆದಿದ್ದಾರೆ. ಶನಿವಾರ, ಭಾನುವಾರ, ಸೋಮವಾರ ಸಹ ಹೆಚ್ಚಿನ ವಿಚಾರಣೆ ಸಾದ್ಯವಾಗಲಿಲ್ಲ. ವಿಚಾರಣೆ ಅಪೂರ್ಣವಾಗಿದ್ದರಿಂದ ಆರೋಪಿ ಶಿವಕುಮಾರ್ಗೆ ಜಾಮೀನು ನೀಡದೇ ತಮ್ಮ ವಶಕ್ಕೆ ಒಪ್ಪಿಸುವಂತೆ ಕೋರ್ಟ್ಗೆ ಮನವಿ ಮಾಡಿದೆ.