ಕರ್ನಾಟಕ

karnataka

ETV Bharat / state

ಡಿ.ಜೆ ಹಳ್ಳಿ - ಕೆ.ಜಿ ಹಳ್ಳಿ ಪ್ರಕರಣ : ರಾತ್ರಿ ವೇಳೆ ಆರೋಪಿಗಳ ಹೆಡೆಮುರಿಕಟ್ಟಿದ ಪೊಲೀಸ್​

ಗಲಭೆ ದಿನದ ವಿಡಿಯೋ ಹಾಗೂ ಸಿಸಿಟಿವಿ ದೃಶ್ಯದ ಆಧಾರದ ಮೇರೆಗೆ ಡಿ.ಜಿ ಹಳ್ಳಿ ಇನ್ಸ್​​​​ಪೆಕ್ಟರ್​​ ಕೇಶವ‌ಮೂರ್ತಿ ಅವರ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸ್​ ತಂಡ ಆರೋಪಿಗಳ ಹೆಡೆಮುರಿ ಕಟ್ಟಿದೆ.

ಡಿ.ಜೆ ಹಳ್ಳಿ ಹಾಗೂ ಕೆ.ಜಿ ಹಳ್ಳಿ ಪ್ರಕರಣ
ಡಿ.ಜೆ ಹಳ್ಳಿ ಹಾಗೂ ಕೆ.ಜಿ ಹಳ್ಳಿ ಪ್ರಕರಣ

By

Published : Aug 17, 2020, 7:38 AM IST

ಬೆಂಗಳೂರು: ಡಿ.ಜೆ ಹಳ್ಳಿ ಹಾಗೂ ಕೆ.ಜಿ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಪುಡಾರಿಗಳ ಹೆಡೆಮುರಿಕಟ್ಟಲು ಖಾಕಿ ತಂಡ ರಾತ್ರಿ ಕಾರ್ಯಾ ಚರಣೆಗೆ ಇಳಿದಿದ್ದಾರೆ. ಗಲಭೆ ದಿನದ ವಿಡಿಯೋ ಹಾಗೂ ಸಿಸಿಟಿವಿ ದೃಶ್ಯದ ಆಧಾರದ ಮೇರೆಗೆ ಡಿ.ಜಿ ಹಳ್ಳಿ ಇನ್ಸ್​​​​ಪೆಕ್ಟರ್​​ಕೇಶವ‌ಮೂರ್ತಿ ಅವರ ನೇತೃತ್ವದಲ್ಲಿ ತಂಡ ದಾಳಿ ನಡೆಸಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ‌.

ತಡರಾತ್ರಿ ದಾಳಿ ನಡೆಸಿದ ಕಾರಣ ಗಲ್ಲಿ- ಗಲ್ಲಿ ಮನೆಯಲ್ಲಿ ಅವಿತ ಕೂತಿದ್ದ ಆರೋಪಿಗಳ ಪತ್ತೆ ಮಾಡಿದ್ದಾರೆ‌. ಡಿ. ಜೆ ಹಳ್ಳಿ ಠಾಣಾ ಇನ್ಸ್​​ಪೆಕ್ಟರ್​​ ಆದ ಕಾರಣ ಆರೋಪಿಗಳ ಇಂಚಿಚು ಮಾಹಿತಿ ಪಡೆದು ದಾಳಿ ‌ನಡೆಸಿದ್ದಾರೆ. ದಾಳಿ ವೇಳೆ, ಸುಮಾರು 10 ಆರೋಪಿಗಳು ಸೆರೆ ಸಿಕ್ಕಿದ್ದು, ಬಂಧಿತರ ಸಂಖ್ಯೆ 350ಕ್ಕೂ ಹೆಚ್ಚು ಏರಿಕೆಯಾಗಿದೆ.

ಸದ್ಯ ಘಟನೆಯಲ್ಲಿ ಸಾವಿರಕ್ಕೂ ಹೆಚ್ವು ಮಂದಿ ಭಾಗಿಯಾಗಿದ್ದಾರೆ. ಹೀಗಾಗಿ ಪೊಲೀಸರು ಸದ್ಯ ರಾತ್ರಿ ಹೊತ್ತು ಕಾರ್ಯಾಚರಣೆ ನಡೆಸಿ ಬಂಧಿಸಲು ಪ್ಲಾನ್​​ ಮಾಡಿದ್ದಾರೆ. ಇನ್ನು ಕೆಲವರು ಮನೆಯಲ್ಲಿದ್ದರೆ, ಇನ್ನು ಕೆಲವರು ಮನೆಯ ಮಹಡಿ ಮೇಲೆ ತಲೆಮರೆಸಿಕೊಂಡಿದ್ದರು.

ಇನ್ನು ಪೊಲೀಸರು ಪ್ರತಿ ದಿನ ಕಾರ್ಯಾಚರಣೆ ಮಾಡುವ ಕಾರಣ ಕುಟುಂಬಸ್ಥರು ಠಾಣೆ ಎದುರು ಹೈಡ್ರಾಮಾ ಮಾಡುವ ಸಾಧ್ಯತೆ ಇದೆ. ಹೀಗಾಗಿ ಮುಂಜಾಗೃತ ಕ್ರಮವಾಗಿ ಆರೋಪಿಗಳನ್ನ ಡಿ.ಜೆ ಹಳ್ಳಿ ಠಾಣೆಯಿಂದ ಬೇರೆ ಕಡೆ ಸ್ಥಳಾಂತರ ಮಾಡಲಾಗಿದೆ.

ABOUT THE AUTHOR

...view details