ಬೆಂಗಳೂರು :ಜಿಂದಾಲ್ ಕಂಪನಿಗೆ 3667 ಎಕರೆ ಸರ್ಕಾರಿ ಜಮೀನನ್ನು ಸೇಲ್ ಡೀಡ್ ಮಾಡಿಕೊಡುವ ನಿರ್ಣಯ ಪ್ರಶ್ನಿಸಿ ಮುಖ್ಯಮಂತ್ರಿ ಹಚ್.ಡಿ.ಕುಮಾರಸ್ವಾಮಿಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಬಹಿರಂಗ ಪತ್ರ ಬರೆದಿದ್ದು, ಭೂಮಿ ಮಾರಾಟ ಸಂಬಂಧ ಸಂಶಯಗಳನ್ನೊಳಗೊಂಡ ಪ್ರಶ್ನೆಗಳನ್ನು ಕೇಳಿದ್ದಾರೆ.
ಸಿ.ಟಿ ರವಿ ಬರೆದ ಪತ್ರದಲ್ಲೇನಿದೆ?
-ಜಿಂದಾಲ್ ಕಂಪನಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಸೇಲ್ ಡೀಡ್ ಮಾಡಿಕೊಡುವುದರಿಂದ ಕರ್ನಾಟಕಕ್ಕೆ ಆಗುವ ಲಾಭ ಏನು?
ರಾಷ್ಟ್ರೀಯ ಹೆದ್ದಾರಿಗೆ ಅದೇ ತಾಲೂಕಿನಲ್ಲಿ ಭೂಮಿ ವಶಪಡಿಸಿಕೊಳ್ಳಲು ಖಾಸಗಿಯವರಿಗೆ ಎಕರೆಗೆ 30 ಲಕ್ಷದಿಂದ ಒಂದು ಕೋಟಿವರೆಗೂ ಮೀರಿ ಪರಿಹಾರ ಕೊಟ್ಟಿರುವಾಗ ಕೇವಲ ಎಕರೆಗೆ 1,22,000 ರೂ.ಗಳಿಗೆ ಸೇಲ್ ಡೀಡ್ ಮಾಡಿಕೊಡುತ್ತಿರುವುದರ ಉದ್ದೇಶವೇನು?.
- ಜಿಂದಾಲ್ ಸ್ಟೀಲ್ ಕಂಪನಿ ಕರ್ನಾಟಕದಲ್ಲಿ ಪ್ರಾರಂಭಿಸುವಾಗ ಕರ್ನಾಟಕ ಸರ್ಕಾರಕ್ಕೂ ಜಿಂದಾಲ್ ಕಂಪನಿಗೂ ನಡೆದಿರುವ ವ್ಯವಹಾರಿಕ ಒಪ್ಪಂದನೇನು?
- ಇದುವರೆಗೂ ಎಷ್ಟು ಭೂಮಿಯನ್ನು ಜಿಂದಾಲ್ ಕಂಪನಿಗೆ ಲೀಸ್ ನೀಡಲಾಗಿದೆ? ಎಷ್ಟು ವರ್ಷಗಳ ಅವಧಿಗೆ ಲೀಸ್ ನೀಡಲಾಗಿದೆ, ಲೀಸ್ ಮೊತ್ತವೆಷ್ಟು?
- ಜಿಂದಾಲ್ ಕಂಪನಿಗೆ ಕರ್ನಾಟಕ ಸರ್ಕಾರ ಒದಗಿಸುತ್ತಿರುವ ನೀರಿನ ಪ್ರಮಾಣವೆಷ್ಟು ಮತ್ತು ಆ ನೀರನ್ನು ಎಲ್ಲಿಂದ ಒದಗಿಸಲಾಗುತ್ತಿದೆ?.
- ಈ ಕಂಪನಿ ಪ್ರಾರಂಭಸಿದ ಮೇಲೆ ಸುತ್ತಮುತ್ತಲಿನ ಜನಜೀವನದ ಮೇಲೆ ಆರೋಗ್ಯದ ಮೇಲೆ, ಪರಿಸರದ ಮೇಲೆ ಆಗಿರುವ ಪರಿಣಾಮವೇನು? ಇದಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಆಡಿಟ್ ಆಗಿದೆಯೇ ಮತ್ತು ಪರಿಸರ ಇಲಾಖೆ ವರದಿ ಏನು?
- ಜಿಂದಾಲ್ ಕಂಪನಿ ಈ ಸ್ಟೀಲ್ ಪ್ಲಾಂಟ್ ನಿಂದ ಎಷ್ಟು ಉದ್ಯೋಗ ಸೃಷ್ಟಿ ಆಗುತ್ತದೆಂದು ತನ್ನ ಪ್ರಸ್ತಾವನೆಯಲ್ಲಿ ತಿಳಿಸಿತ್ತು. ಈಗ ಸೃಷ್ಠಿಯಾಗಿರುವ ಉದ್ಯೋಗ ಎಷ್ಟು? ಆ ಉದ್ಯೋಗದಲ್ಲಿ ಕನ್ನಡಿಗರ ಪಾಲು ಎಷ್ಟು. ಸ್ಥಳೀಯರಿಗೆ ಎಷ್ಟು ಉದ್ಯೋಗ ನೀಡಲಾಗಿದೆ?.