ಕರ್ನಾಟಕ

karnataka

By

Published : Sep 14, 2022, 8:51 PM IST

ETV Bharat / state

2435 ಕೋಟಿ ರೂ ಬೆಳೆ ಪರಿಹಾರ ರೈತರ ಖಾತೆಗೆ ವರ್ಗಾವಣೆ: ಕಂದಾಯ ಸಚಿವ ಆರ್ ಅಶೋಕ್

ಹಿಂದೆಲ್ಲ 6 ತಿಂಗಳು, 1 ವರ್ಷ ಆದರೂ ಬೆಳೆ ಪರಿಹಾರ ಬರುತ್ತಿರಲಿಲ್ಲ. ಈಗ ತ್ವರಿತವಾಗಿ ನಾವು ನೀಡುತ್ತಿದ್ದೇವೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದರು.

crop-compensation-transfer-to-farmers-bank-account-say-minister-r-ashok
2435 ಕೋಟಿ ರೂ. ಬೆಳೆ ಪರಿಹಾರ ರೈತರ ಖಾತೆಗೆ ವರ್ಗಾವಣೆ: ಕಂದಾಯ ಸಚಿವ ಆರ್ ಅಶೋಕ್

ಬೆಂಗಳೂರು: ರಾಜ್ಯದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದ್ದು, ಜುಲೈನಿಂದ ಈವರೆಗೆ ಸುರಿದ ಮಳೆಯಿಂದ ಉಂಟಾದ ಬೆಳೆ ಹಾನಿಗೆ 2435.57 ಕೋಟಿ ರೂ. ಹಣವನ್ನು ರೈತರಿಗೆ ನೀಡಿದ್ದೇವೆ ಎಂದು ಕಂದಾಯ ಸಚಿವ ಆರ್​ ಅಶೋಕ್ ತಿಳಿಸಿದರು.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಮಂಜುನಾಥ ಭಂಡಾರಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪರಿಹಾರ ಮಧ್ಯವರ್ತಿಗಳ ಪಾಲಾಗಬಾರದು. ಹಾಗಾಗಿ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಹಣವನ್ನು ಪರಿಷ್ಕೃತ ಮಾರ್ಗಸೂಚಿಯಂತೆ ವರ್ಗಾಯಿಸಲಾಗಿದೆ ಎಂದರು.

ಜುಲೈನಿಂದ ಈವರೆಗೆ ಸುರಿದ ಮಳೆಯಿಂದ ಆದ ಬೆಳೆಹಾನಿಗೆ 2435.57 ಕೋಟಿ ಹಣವನ್ನು ರೈತರಿಗೆ ನೀಡಿದ್ದೇವೆ. ಮಳೆಯಾಶ್ರಿತ ಪ್ರದೇಶದಲ್ಲಿ ಬೆಳೆ ನಷ್ಟಕ್ಕೆ ಇದ್ದ 6,800 ರೂಪಾಯಿಯನ್ನು ಪ್ರತಿ ಹೆಕ್ಟೇರ್‌ಗೆ 13,600 ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ. ನೀರಾವರಿ ಜಮೀನಿಗೆ 13,500 ರೂ.ಗಳಿಂದ 25 ರೂ. ಸಾವಿರ ರೂ.ಗಳಿಗೆ ಹಾಗೂ ಬಹು ವಾರ್ಷಿಕ ಬೆಳೆಗಳಿಗೆ ಪ್ರತಿ ಹೆಕ್ಟೇರ್‌ಗೆ ನೀಡುವ 18 ಸಾವಿರ ರೂ. ಪರಿಹಾರವನ್ನು 28 ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದರು.

ರಾಜ್ಯ ವಿಪತ್ತು ನಿರ್ವಹಣಾ ನಿಧಿ ಮತ್ತು ರಾಷ್ಟ್ರೀಯ ವಿಪತ್ತು ನಿಧಿ ಮಾರ್ಗಸೂಚಿಯ ಎರಡರಷ್ಟು ಪರಿಹಾರ ನೀಡಲಾಗಿದೆ. ಕೃಷಿ, ತೋಟಗಾರಿಕೆ, ಕಾಫಿ ಬೆಳೆಗಳಿಗೆ ಸಂಬಂಧಿಸಿದಂತೆ ಪರಿಹಾರ ನೀಡಲಾಗಿದೆ. ಹಾನಿಯಾದ ಮನೆಗಳ ಪೈಕಿ ಪರಿಹಾರಕ್ಕೆ ಅರ್ಹ ಇರುವ ಪ್ರಕರಣಗಳನ್ನು ರಾಜೀವ್‌ ಗಾಂಧಿ ವಸತಿ ನಿಗಮದ ತಂತ್ರಾಂಶದಲ್ಲಿ ದಾಖಲಿಸಿ ಪರಿಹಾರ ನೀಡುವ ಕೆಲಸ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ರಾಜ್ಯದ ರೈತರ ಪರವಾಗಿ ಬೊಮ್ಮಾಯಿ ಸರ್ಕಾರ ಕೆಲಸ ಮಾಡಲಿದೆ. ರೈತರ ಸಮಸ್ಯೆಗೆ ಶೀಘ್ರವಾಗಿ ಸ್ಪಂದಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಹಿಂದೆಲ್ಲ 6 ತಿಂಗಳು, 1 ವರ್ಷ ಆದರೂ ಪರಿಹಾರ ಬರುತ್ತಿರಲಿಲ್ಲ. ಈಗ ತ್ವರಿತವಾಗಿ ನಾವು ನೀಡುತ್ತಿದ್ದೇವೆ ಎಂದು ಅಶೋಕ್ ಹೇಳಿದರು.

ಇದನ್ನೂ ಓದಿ:ತಾಂಡಾಗಳಿಗೆ ಕಂದಾಯ ಗ್ರಾಮ ಮಾನ್ಯತೆ, ಕೋರ್ಟ್​ ನಡೆಸಲು ಎಡಿಸಿ, ಶಿರಸ್ತೇದಾರರಿಗೂ ಅವಕಾಶ: ಸಚಿವ ಅಶೋಕ್

ABOUT THE AUTHOR

...view details