ಕರ್ನಾಟಕ

karnataka

ETV Bharat / state

ಅವಧಿ ಮುಗಿದ ಆಹಾರ ಉತ್ಪನ್ನಗಳ ಮರು ಪ್ಯಾಕಿಂಗ್.. ಗೋದಾಮಿನ ಮೇಲೆ ಅಧಿಕಾರಿಗಳ ದಾಳಿ

ಕಾಟನ್ ಪೇಟೆಯ ಟ್ರೇಡಿಂಗ್ ಕಂಪನಿಯೊಂದರ ಗೋದಾಮಿನಲ್ಲಿ ಅವಧಿ ಮೀರಿದ ಆಹಾರ ಉತ್ಪನ್ನಗಳನ್ನು ಮರು ಪ್ಯಾಕಿಂಗ್ ಮಾಡುತ್ತಿದ್ದವರ ವಿರುದ್ಧ ಪೊಲೀಸರು ದಾಳಿ ನಡೆಸಿದ್ದಾರೆ.

ಅವಧಿ ಮುಗಿದ ಆಹಾರಗಳು
ಅವಧಿ ಮುಗಿದ ಆಹಾರಗಳು ಮತ್ತು ಗೋದಾಮು

By

Published : Jul 1, 2023, 4:16 PM IST

ಬೆಂಗಳೂರು:ಬಳಕೆಯ ಅವಧಿ ಮುಗಿದ ಆಹಾರ ಉತ್ಪನ್ನಗಳನ್ನು ಮರು ಪ್ಯಾಕಿಂಗ್ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದ ಗೋದಾಮಿನ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಆಹಾರ ಸುರಕ್ಷತಾ ಅಧಿಕಾರಿಗಳು ಹಾಗೂ ಸಿಸಿಬಿ ಪೊಲೀಸರು ಜಂಟಿ ಆಗಿ ನಡೆಸಿದ ಕಾರ್ಯಾಚರಣೆಯಲ್ಲಿ ಕಾಟನ್ ಪೇಟೆಯ ಖಾಸಗಿ ಟ್ರೇಡಿಂಗ್ ಕಂಪನಿಯ ಗೋದಾಮಿನಲ್ಲಿ ಪರಿಶೀಲನೆ ನಡೆಸಿದ್ದಾರೆ.

ಅವಧಿ ಮುಗಿದ ಆಹಾರಗಳು

ಪ್ರತಿಷ್ಠಿತ ಬ್ರ್ಯಾಂಡ್​ಗಳಿಗೆ ಸೇರಿದ, ಬಳಕೆಯ ಅವಧಿ ಮೀರಿದ ಬಿಸ್ಕೆಟ್ಸ್, ಚಾಕೊಲೇಟ್, ಚಾಕೊಲೇಟ್ ಪೌಡರ್, ಅಡುಗೆ ಎಣ್ಣೆ, ಡಾಲ್ಡಾ, ರವೆ ಸೇರಿದಂತೆ ಅನೇಕ ಉತ್ಪನ್ನಗಳನ್ನು ದಾಳಿ ವೇಳೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಅಂಗಡಿಯೊಂದರಲ್ಲಿ ಅವಧಿ ಮೀರಿದ ಬಿಸ್ಕೆಟ್ ಪ್ಯಾಕ್ ಮಾರಾಟ ಮಾಡುತ್ತಿರುವುದರ ಬಗ್ಗೆ ಸಿಕ್ಕ ಮಾಹಿತಿ ಆಧರಿಸಿ, ಅಧಿಕಾರಿಗಳು ಸಿಸಿಬಿ ಪೊಲೀಸರೊಂದಿಗೆ ಕಾರ್ಯಾಚರಣೆ ಕೈಗೊಂಡಿದ್ದಾರೆ. ಸಿಸಿಬಿ ಹಾಗೂ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಕಾಟನ್ ಪೇಟೆಯ ಖಾಸಗಿ ಟ್ರೇಡಿಂಗ್​ ಕಂಪನಿಯೊಂದರ ಗೋದಾಮಿನ ಮೇಲೆ ದಾಳಿ ಮಾಡಿದ್ದರು.

ಗೋದಾಮು

ಚಂದ್ರಪ್ರಕಾಶ್ ಎಂಬುವವರ ಹೆಸರಿನಲ್ಲಿರುವ ಗೋದಾಮಿನಲ್ಲಿ ಮೂಟೆಗಟ್ಟಲೇ ಅವಧಿ ಮೀರಿದ ಉತ್ಪನ್ನಗಳನ್ನು ಮರು ಪ್ಯಾಕಿಂಗ್ ಮಾಡಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ. ತಕ್ಷಣ ಎಲ್ಲ ಉತ್ಪನ್ನಗಳ ಸ್ಯಾಂಪಲ್ಸ್ ಪಡೆದಿರುವ ಆಹಾರ ಸುರಕ್ಷತಾ ಅಧಿಕಾರಿಗಳು ಅವುಗಳನ್ನು ಪರಿಶೀಲನೆಗಾಗಿ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ. ಹಾಗೆ ಗೋದಾಮಿನ ಮಾಲೀಕರಿಗೆ ನೋಟಿಸ್ ನೀಡಿದ್ದಾರೆ‌. ಆರೋಪಿಗಳ ವಿರುದ್ಧ ಆಹಾರ ಸುರಕ್ಷತೆ ಮಾನದಂಡಗಳ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಲಿದ್ದೇವೆ ಎಂದು ಸಿಸಿಬಿಯ ಜಂಟಿ ಆಯುಕ್ತ ಡಾ.ಎಸ್.ಡಿ.ಶರಣಪ್ಪ ತಿಳಿಸಿದ್ದಾರೆ.

ಹಂದಿ ಕೊಬ್ಬಿನ ಎಣ್ಣೆ ಮಾರಾಟ, ವ್ಯಕ್ತಿ ಬಂಧನ: ಹೈದರಾಬಾದ್​ನಲ್ಲಿ ವ್ಯಕ್ತಿಯೊಬ್ಬ ಹಂದಿ ಕೊಬ್ಬಿನಿಂದ ಎಣ್ಣೆ ತಯಾರಿಸಿ ಫಾಸ್ಟ್​ಫುಡ್​ ಕೇಂದ್ರಗಳಿಗೆ ಮಾರಾಟ ಮಾಡುತ್ತಿದ್ದ. ಈತನನ್ನು ಮಲ್ಕಾಜಿಗಿರಿ ಎಸ್​ಒಟಿ ಪೊಲೀಸರು ಜೂನ್​ 28 ರಂದು ಬಂಧಿಸಿದ್ದಾರೆ. ಪೊಲೀಸರು ನೀಡಿದ ಮಾಹಿತಿ ಪ್ರಕಾರ, ನೇರಡ್​ಮೆಟ್​ ವ್ಯಾಪ್ತಿಯ ಆರ್​.ಕೆ ಪುರಂ ನಿವಾಸಿ ರಮೇಶ್​ ಶಿವ ಎಂಬಾತ ಹಲವು ವರ್ಷಗಳಿಂದ ತನ್ನ ನಿವಾಸದಲ್ಲಿ ಹಂದಿ ಕೊಬ್ಬುನ್ನು ಸಂಗ್ರಹಿಸಿ ಅದನ್ನು ಬಿಸಿ ಮಾಡಿ, ಅದಕ್ಕೆ ಕೆಮಿಕಲ್ ಬೆರಸುತ್ತಾನೆ. ಹೀಗೆ ತಯಾರಿಸಿದ ಎಣ್ಣೆಯನ್ನು ರಸ್ತೆ ಬದಿಯ ಫ್ರೈಡ್​ರೈಸ್​ ಸ್ಟಾಲ್​ಗಳಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಆ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.

ಇದನ್ನೂ ಓದಿ:Annabhagya Scheme: ಅಕ್ಕಿ ಬದಲು ಹಣ ಕೊಡುವುದಕ್ಕೆ ಸಾರ್ವಜನಿಕರ ವಿರೋಧವಿಲ್ಲ: ಶಿವಾನಂದ ಪಾಟೀಲ್

ABOUT THE AUTHOR

...view details