ಬೆಂಗಳೂರು:ಇಲ್ಲಿನ ರಿಟ್ಜ್ ಕಾರ್ಲ್ಟನ್ ಹೋಟೆಲ್ನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಕ್ರಿಕೆಟ್ ದಿಗ್ಗಜರಾದ ಕಪಿಲ್ ದೇವ್, ರೋಜರ್ ಬಿನ್ನಿ, ಶ್ರೀಕಾಂತ್ ಮತ್ತು ಸೈಯದ್ ಕಿರ್ಮಾನಿ ಭಾಗವಹಿಸಿ 1983 ವರ್ಲ್ಡ್ ಕಪ್ ಗೆದ್ದ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
2011ರ ವರ್ಲ್ಡ್ ಕಪ್ ಗೆದ್ದು 8 ವರ್ಷವಾದ ಹಿನ್ನೆಲೆಯಲ್ಲಿ ತಮ್ಮ ಕ್ರಿಕೆಟ್ ಅನುಭವಗಳು ಮತ್ತು ಈಗಿನ ಕಾಲದ ಆಧುನಿಕ ಯುಗದಲ್ಲಿ ಕಾರ್ಪೊರೇಟ್ ಪ್ರಾಯೋಜಿತ ಕ್ರಿಕೆಟ್ ಜೊತೆಗೆ ಈಗಿರುವ ಸೌಲಭ್ಯಗಳ ಬಗ್ಗೆ ಕ್ರಿಕೆಟ್ ದಿಗ್ಗಜರು ಮಾತನಾಡಿದರು.
ಖಾಸಗಿ ಕಾರ್ಯಕ್ರಮದಲ್ಲಿ ಕ್ರಿಕೆಟ್ ದಿಗ್ಗಜರಾದ ಕಪಿಲ್ ದೇವ್, ರೋಜರ್ ಬಿನ್ನಿ, ಶ್ರೀಕಾಂತ್ ಮತ್ತು ಸೈಯದ್ ಕಿರ್ಮಾನಿ ಸದ್ಯಕ್ಕೆ ಕ್ರಿಕೆಟ್ ಜಗತ್ತಿನಲ್ಲಿ ಚರ್ಚೆಗೆ ಯಾಗುತ್ತಿರುವ, ಇಂಡಿಯಾ ಮತ್ತು ಪಾಕಿಸ್ತಾನ ವರ್ಲ್ಡ್ ಕಪ್ ಪಂದ್ಯದ ಬಗ್ಗೆ ಪ್ರತಿಕ್ರಿಯೆ ನೀಡಿದ ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್, ಮ್ಯಾಚ್ ಆಡಿಸುವುದು ಬಿಡುವುದು ಸರ್ಕಾರದ ನಿರ್ಧಾರಕ್ಕೆ ಬಿಟ್ಟಿದ್ದು, ಇಲ್ಲಿ ದೇಶದ ಹಿತದೃಷ್ಟಿಯಿಂದ ಮ್ಯಾಚ್ ಬ್ಯಾನ್ ಮಾಡಿದ್ರು ಯಾವುದೇ ಸಮಸ್ಯೆಯಿಲ್ಲ. ಯಾಕೆಂದರೆ ದೇಶದ ವಿಚಾರಕ್ಕೆ ಬಂದರೆ ನಮಗೆ ದೇಶವೇ ಮೊದಲು ಎಂದರು.
ಇದೇ ಪ್ರಶ್ನೆಗೆ ಉತ್ತರ ನೀಡಿದ ಸೈಯದ್ ಕಿರ್ಮಾನಿ ಕ್ರಿಕೆಟ್ ಆಡುವುದರಿಂದ ಯಾವುದೇ ಸಮಸ್ಯೆಯಾಗಲ್ಲ, ಕ್ರೀಡೆ ಮತ್ತು ರಾಜಕೀಯ ಎರಡೂ ಬೇರೆ ಬೇರೆ ಎಂದರು.