ಆನೇಕಲ್:ಕೊರೊನಾ ಲಾಕ್ಡೌನ್ ಪರಿಣಾಮದಿಂದಾಗಿ ಅಂತರರಾಜ್ಯ ಕೂಲಿ ಕಾರ್ಮಿಕರ ತಾಣಗಳಲ್ಲಿ ಆಹಾರದ ಕೊರತೆಯಷ್ಟೇ ಅಲ್ಲದೆ ಸ್ಯಾನಿಟೈಸರ್ಸ್, ಮಾಸ್ಕ್ ಕೊರತೆಯನ್ನು ಖಾಸಗಿಯವರ ಸಹಭಾಗಿತ್ವದಲ್ಲಿ ಜಿಗಣಿ ವೃತ್ತ ನಿರೀಕ್ಷಕ ಕೆ ವಿಶ್ವನಾಥ್ ಸಮರ್ಥವಾಗಿ ನಿವರ್ಹಿಸಿ ಯಶ ಕಂಡಿದ್ದಾರೆ.
ಕರ್ತವ್ಯದ ಜೊತೆಗೆ ಮಾನವೀಯತೆ ಮೆರೆದ ಆನೇಕಲ್ ಪೊಲೀಸರು
ವೃತ್ತಿಯನ್ನೂ ಮೀರಿ ಕಡುಬಡವರೇ ತುಂಬಿದ್ದ ತಾತ್ಕಾಲಿಕ ಕಾರ್ಮಿಕರ ಸ್ಥಳಗಳಿಗೆ ಮೂರು ಹೊತ್ತು ಊಟದ ಸರಬರಾಜಿನ ಜೊತೆಗೆ ಬಾಟಲ್ಗಳಲ್ಲಿ ಸ್ಯಾನಿಟೈಸರ್ ಹಾಗೂ ಮುಖಕ್ಕೆ ಮಾಸ್ಕ್ಗಳನ್ನು ಆನೇಕಲ್ ಪೊಲೀಸರು ವಿತರಿಸಿದ್ದಾರೆ.
ವೃತ್ತಿಯನ್ನೂ ಮೀರಿ ಕಡುಬಡವರೇ ತುಂಬಿದ್ದ ತಾತ್ಕಾಲಿಕ ಕಾರ್ಮಿಕರ ತಾಣಗಳಿಗೆ ಮೂರು ಹೊತ್ತೂ ಊಟದ ಸರಬರಾಜಿನ ಜೊತೆಗೆ ಬಾಟಲಿಗಳಲ್ಲಿ ಸ್ಯಾನಿಟೈಸರ್ಸ್, ಹಾಗೂ ಮುಖಕ್ಕೆ ಮಾಸ್ಕ್ಗಳನ್ನು ವಿತರಿಸಿದರು. ಹರಪ್ಪನಹಳ್ಳಿ, ಆನೇಕಲ್, ಹೆಬ್ಬಗೋಡಿ, ಜಿಗಣಿಯ ಹಲವಾರು ಕಡೆ ಮೂರು ಸಾವಿರಕ್ಕೂ ಹೆಚ್ಚು ಕಾರ್ಮಿಕ ಕುಟುಂಬಗಳಿಗೆ ಎರಡೊತ್ತು ಊಟವನ್ನು ನಿನ್ನೆಯಿಂದಲೇ ನೀಡುತ್ತಿದ್ದು ಸಾಗಣೆಗೆ ವೆಚ್ಚವನ್ನೂ ಭರಿಸಿದ್ದಾರೆ.
ಬನ್ನೇರುಘಟ್ಟ ಶಿವನಹಳ್ಳಿಯ ರಾಮಕೃಷ್ಣಾಶ್ರಮ, ಮತ್ತಿತರರ ಸಹಕಾರ ಕೋರಿ ಇತರ ಪೊಲೀಸ್ ಠಾಣೆಗಳಿಗೂ ಸ್ಯಾನಿಟೈಸರ್ಸ್ ಹಾಗು ಮಾಸ್ಕ್ ಗಳನ್ನು ವಿತರಿಸಿದ್ದಲ್ಲದೆ ಖುದ್ದು ಊಟೋಪಚಾರ ವಿತರಣೆಯನ್ನು ವಹಿಸಿಕೊಂಡಿದ್ದು ಇಲಾಖಾ ಕೆಲಸಗಳ ನಡುವೆಯೂ ಮಾನವೀಯತೆ ಮೆರೆದಿದ್ದಾರೆ.