ಕರ್ನಾಟಕ

karnataka

ETV Bharat / state

ಕೋವಿಡ್ ಎಫೆಕ್ಟ್.. ಬಿಬಿಎಂಪಿಯಲ್ಲಿ ಬಹುಮಹಡಿ ಕಟ್ಟಡ, ಮನೆ ನಿರ್ಮಾಣಕ್ಕೆ ಅರ್ಜಿಗಳೇ ಇಲ್ಲ!!

ಆನ್‌ಲೈನ್ ಪರ್ಮಿಷನ್ ನೀಡಲಾಗುತ್ತದೆ. ಎಲ್ಲಾ ಸಂಸ್ಥೆಗಳ ಎನ್​ಒಸಿ ಸರ್ಟಿಫಿಕೇಟ್‌ಗಳು ಒಂದೇ ಕಡೆ ಸಿಗುತ್ತದೆ. ಮೊದಲಾದ್ರೆ ಪ್ರತಿ ಸ್ಥಳೀಯ ಇಲಾಖೆಗೂ ಓಡಾಡಿ, ಬೆಸ್ಕಾಂ, ಜಲಮಂಡಳಿ, ಹೆಚ್‌ಎಎಲ್, ಫೈರ್, ಮಾಲಿನ್ಯ ನಿಯಂತ್ರಣ ಮಂಡಳಿ ಎಲ್ಲಾ ಇಲಾಖೆಗೂ ಓಡಾಡಬೇಕಿತ್ತು..

BBMP
ಬಿಬಿಎಂಪಿ

By

Published : Sep 18, 2020, 7:35 PM IST

ಬೆಂಗಳೂರು :ಹೇಳಿಕೇಳಿ ರಾಜಧಾನಿ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮ, ಕಟ್ಟಡ ನಿರ್ಮಾಣ, ಮನೆ ನಿರ್ಮಾಣಗಳು ನಗರದ ಪ್ರತೀ ವಾರ್ಡ್‌ಗಳಲ್ಲೂ ನಡೆಯುತ್ತಿರುತ್ತವೆ. ಆದರೆ, ಕೊರೊನಾ ಈ ಎಲ್ಲಾ ಕೆಲಸಗಳಿಗೆ ಫುಲ್‌ ಸ್ಟಾಪ್ ಇಟ್ಟಿದೆ.

ಬಿಬಿಎಂಪಿ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ, ನಿರ್ಮಾಣ ಆರಂಭಕ್ಕೆ ಪರವಾನಿಗೆ, ಸ್ವಾಧೀನಾನುಭವ ಪತ್ರ ನೀಡಲು ಸಂಪೂರ್ಣ ಆನ್‌ಲೈನ್ ವ್ಯವಸ್ಥೆ ಜಾರಿಮಾಡಿದೆ. ಆದರೆ, ಈ ವರ್ಷ ಪಾಲಿಕೆಗೆ ಬಂದ ಅರ್ಜಿಗಳ ಸಂಖ್ಯೆ ನೋಡಿದ್ರೆ ನಿಜಕ್ಕೂ ಅಚ್ಚರಿಯಾಗುತ್ತೆ.

ಬಿಬಿಎಂಪಿ ಮೇಯರ್ ಗೌತಮ್‌ಕುಮಾರ್​

ಆರ್ಥಿಕ ಸಂಕಷ್ಟ ಉಂಟಾಗಿ ವಾಣಿಜ್ಯ ಚಟುವಟಿಕೆಗಳೇ ನಿಂತು ಹೋಗಿದ್ದರಿಂದ ಮನೆ ನಿರ್ಮಾಣ, ಬಹುಮಹಡಿ ಕಟ್ಟಡಗಳ ನಿರ್ಮಾಣವೂ ಬಹುತೇಕ ಕುಂಟುತ್ತಿವೆ. ಪ್ರತೀ ವರ್ಷ ನೂರು ಸಂಖ್ಯೆ ಮೇಲ್ಪಟ್ಟು ಗಗನಚುಂಬಿ ಕಟ್ಟಡಗಳು ಬೆಳೆದು ನಿಂತರೆ ಈ ವರ್ಷ ಮಾತ್ರ ಕೇವಲ 16, 12 ಕಟ್ಟಡಗಳಿಗೆ ನಕ್ಷೆ ಮಂಜೂರಾತಿ ಪಡೆಯಲಾಗಿದೆ.

ಬಿಬಿಎಂಪಿಯಲ್ಲಿ ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್​ ಮಾದರಿಯಡಿ ಏಕಗವಾಕ್ಷಿ ಯೋಜನೆ ಮಾಡಿ, ಆನ್‌ಲೈನ್ ಪರ್ಮಿಷನ್ ನೀಡಲಾಗುತ್ತದೆ. ಎಲ್ಲಾ ಸಂಸ್ಥೆಗಳ ಎನ್​ಒಸಿ ಸರ್ಟಿಫಿಕೇಟ್‌ಗಳು ಒಂದೇ ಕಡೆ ಸಿಗುತ್ತದೆ. ಮೊದಲಾದ್ರೆ ಪ್ರತಿ ಸ್ಥಳೀಯ ಇಲಾಖೆಗೂ ಓಡಾಡಿ, ಬೆಸ್ಕಾಂ, ಜಲಮಂಡಳಿ, ಹೆಚ್‌ಎಎಲ್, ಫೈರ್, ಮಾಲಿನ್ಯ ನಿಯಂತ್ರಣ ಮಂಡಳಿ ಎಲ್ಲಾ ಇಲಾಖೆಗೂ ಓಡಾಡಬೇಕಿತ್ತು.

ಆದರೆ, ಈಗ ಒಂದು ಅಪ್ಲಿಕೇಶನ್ ಅಡಿಯಲ್ಲೇ ಎಲ್ಲಾ ಅನುಮತಿ ಪಡೆಯಬಹುದಾಗಿದೆ. ಅಲ್ಲೇ ಆನ್‌ಲೈನ್ ಪೇಮೆಂಟ್ ಕೂಡ ಮಾಡಬಹುದಾಗಿದೆ. ಇದರಿಂದ ಸಾರ್ವಜನಿಕರಿಗೆ ಲಂಚಕ್ಕಾಗಿ ಪೀಡಿಸುತ್ತಿದ್ದ ಕಾಲವೂ ಬದಲಾಗಿದೆ. ಕಚೇರಿಗಳ ಮುಂದೆ ದಿನಗಟ್ಟಲೇ ಕ್ಯೂ ನಿಲ್ಲುವುದು ನಿಂತಿದೆ. ಕೋವಿಡ್ ಹಿನ್ನೆಲೆ ಬಿಬಿಎಂಪಿಯ ಎಲ್ಲಾ ವಿಭಾಗದ ಅಧಿಕಾರಿ, ಸಿಬ್ಬಂದಿಯನ್ನ ಕೋವಿಡ್ ನಿರ್ವಹಣೆ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು‌. ಈ ಹಿನ್ನೆಲೆ ಟೌನ್ ಪ್ಲಾನಿಂಗ್ ವಿಭಾಗದ ಅಧಿಕಾರಿಗಳನ್ನೂ ಕೋವಿಡ್​ ಕೆಲಸಕ್ಕೆ ಬಳಸಿಕೊಂಡಿದ್ದರಿಂದ ಅನುಮತಿ ಅನುಮೋದಿಸುವಲ್ಲಿ ಹಾಗೂ ಸೈಟ್ ವಿಸಿಟ್ ಮಾಡುವಲ್ಲಿ ಸ್ವಲ್ಪ ವಿಳಂಬವಾಗಿದೆ. ಆದರೆ, ಅರ್ಜಿಗಳೂ ಕಡಿಮೆ ಬಂದಿದ್ದರಿಂದ ಹೆಚ್ಚಿನ ವಿಳಂಬ ಆಗಿಲ್ಲ ಎಂದು ನಗರ ಯೋಜನೆ ಹೆಚ್ಚುವರಿ ನಿರ್ದೇಶಕ ಪ್ರಸಾದ್ ತಿಳಿಸಿದರು.

ಕಟ್ಟಡ ನಿರ್ಮಾಣಕ್ಕೆ ಮೊದಲು ಹಾಗೂ ನಂತರ ಮೂರು ರೀತಿಯ ಅನುಮತಿ ನೀಡಲಾಗುತ್ತದೆ. "ನಕ್ಷೆ ಮಂಜೂರಾತಿ", ಪಾಯ ಅಗೆದ ನಂತರ ನಿರ್ಮಾಣದ ಆರಂಭಕ್ಕೆ ಅನುಮತಿ ಕೊಡುವ "ಕಮೆನ್ಸ್‌ಮೆಂಟ್ ಸರ್ಟಿಫಿಕೇಟ್" (ಸಿ.ಸಿ), ಕಟ್ಟಡ ನಿರ್ಮಾಣದ ಬಳಿಕ ವಾಸಯೋಗ್ಯ ಎಂದು ಕೊಡುವ "ಸ್ವಾಧೀನಾನುಭವ ಪತ್ರ" (ಆಕ್ಯುಪೆನ್ಸಿ ಸರ್ಟಿಫಿಕೇಟ್-ಒಸಿ) ನೀಡಲಾಗುತ್ತದೆ. ಬಹುಮಹಡಿ ಕಟ್ಟಡಗಳಿಗೆ ಮಾತ್ರ ಉತ್ತರ ಹಾಗೂ ದಕ್ಷಿಣ ವಲಯಗಳಿಂದು ವಿಭಾಗಿಸಿ, ಕೇಂದ್ರ ಕಚೇರಿಯಿಂದ ಜಂಟಿ ಆಯುಕ್ತರು ಪ್ರತ್ಯೇಕವಾಗಿ ಅನುಮತಿ ನೀಡುತ್ತಾರೆ. ಉಳಿದಂತೆ ಮೂರು ಮಹಡಿವರೆಗೆನ ಮನೆ ನಿರ್ಮಾಣಗಳಿಗೆ, ವಲಯವಾರು ಅನುಮತಿ ನೀಡಲಾಗುತ್ತದೆ.

ನಕ್ಷೆ ಮಂಜೂರಾತಿ
ಕಟ್ಟಡ ನಕ್ಷೆ ಮಂಜೂರಾತಿ, ಸಿಸಿ, ಒಸಿ ನೀಡಿಕೆ ವಿವರ :1-04-2020. ರಿಂದ. 7-09-2020

ವಲಯ ನಕ್ಷೆ ಮಂಜೂರಾತಿ ಸಿಸಿ ಒಸಿ

ಉತ್ತರ . 16. 19. 24
ದಕ್ಷಿಣ. 12 9 17
ಪೂರ್ವ. 108. 6. 1
ಪಶ್ಚಿಮ. 128 9. 14
ದಕ್ಷಿಣ. 322. 13. 9
ಮಹದೇವಪುರ. 143. 11. 9
ಯಲಹಂಕ. 191. 6. 7
ಬೊಮ್ಮನಹಳ್ಳಿ 282. 7. 4
ಆರ್ ಆರ್ ನಗರ. 409. 6. 7
ದಾಸರಹಳ್ಳಿ 18. 0. 0
ಒಟ್ಟು 1629. 86. 92

ಕಳೆದೆರಡು ವರ್ಷದ ಬಹುಮಡಿ ಕಟ್ಟಡದ ವಿವರ ವರ್ಷ. ನಕ್ಷೆ ಮಂಜೂರಾತಿ ಸಿಸಿ ಒಸಿ

2018-19. 167. 118. 140
2019-20. 134. 146. 199
2020-21. 19 25. 37

ಒಟ್ಟಿನಲ್ಲಿ ಕೋವಿಡ್ ಲಾಕ್‌ಡೌನ್ ಹಿನ್ನೆಲೆ ಕಟ್ಟಡ ನಿರ್ಮಾಣದ ಪ್ರಮಾಣ ಕುಸಿದಿದೆ.

ABOUT THE AUTHOR

...view details