ಬೆಂಗಳೂರು: ಜಿಕೆವಿಕೆಯ ಕೋವಿಡ್ ಕೇಂದ್ರದ ಕಸವನ್ನು ಕ್ಯಾಂಪಸ್ಸಿನ ಆವರಣದಲ್ಲಿ ಎಸೆದಿದ್ದಾರೆ ಅಂತ ಅಲ್ಲಿನ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೃಷಿ ವಿವಿ ಕ್ಯಾಂಪಸ್ನಲ್ಲಿ ಕೋವಿಡ್ ಸೆಂಟರ್ ಕಸ: ರೋಗ ಹರಡುವಿಕೆ ಆತಂಕ - ಜಿಕೆವಿಕೆ ಬೆಂಗಳೂರು
ಕೃಷಿ ವಿವಿ ಆವರಣದಲ್ಲಿ ಕೋವಿಡ್ ಕೇಂದ್ರದ ಕಸವನ್ನು ಕ್ಯಾಂಪಸ್ಸಿನ ಆವರಣದಲ್ಲಿ ಎಸೆದಿದ್ದಾರೆ ಅಂತ ಅಲ್ಲಿನ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೃಷಿ ವಿವಿ
ನಾಯಿಗಳು ಕಸಗಳನ್ನು ಎಳೆದು ಚೆಲ್ಲಾಪಿಲ್ಲಿ ಮಾಡಿರುವುದರಿಂದ ಇದು ರೋಗ ಹರಡುವಿಕೆಗೆ ದಾರಿ ಮಾಡುತ್ತಿದೆ. ಕೋವಿಡ್ ಕೇಂದ್ರದಲ್ಲಿರುವ ಪ್ರಭಾವಿ ವ್ಯಕ್ತಿಗಳು ಕ್ಯಾಂಪಸ್ಸಿನಲ್ಲಿ ವಾಯುವಿಹಾರಕ್ಕೆ ತೆರಳುತ್ತಾರೆ. ವಿಜ್ಞಾನಿಗಳು/ಬೋಧಕೇತರರು ಕಾರ್ಯನಿರ್ವಸುತ್ತಿರುವ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಬಿಬಿಎಂಪಿ ನಿರ್ಲಕ್ಷ್ಯದಿಂದ ಮುಂದೆ ಎಲ್ಲರೂ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಆತಂಕ ಹೊರಹಾಕಿದ್ದಾರೆ.