ಕರ್ನಾಟಕ

karnataka

ETV Bharat / state

ಬೆಂಗಳೂರಿನ ಅಪಾರ್ಟ್‌ಮೆಂಟ್​​ಗಳಲ್ಲಿ ಹೆಚ್ಚುತ್ತಿದೆ ಕೋವಿಡ್: ಕೇಸ್​ ಪತ್ತೆಯಾದ ಮನೆ ಸೀಲ್​ಡೌನ್

ಬೆಂಗಳೂರು ದಕ್ಷಿಣ ವಲಯದಲ್ಲಿ ಈವರೆಗೂ 13 ಕ್ಲಸ್ಟರ್​​ಗಳು ಪತ್ತೆಯಾಗಿದೆ. ಕೋರಮಂಗಲದಲ್ಲಿ 3 ಪಾಸಿಟಿವ್ ಪ್ರಕರಣ, ಚಂದ್ರಾರೆಡ್ಡಿ ಲೇಔಟ್​​ನಲ್ಲಿಯೂ ಹೆಚ್ಚು ಕೋವಿಡ್ ದೃಢಪಟ್ಟಿದೆ. 40 ಜನರ ಪ್ರಾಥಮಿಕ ಸಂರ್ಪಕಿತರ ಟೆಸ್ಟ್ ಮಾಡಲಾಗಿದೆ.

covid-cases-is-rising-in-apartments-in-bangalore
ಬೆಂಗಳೂರಿನ ಅಪಾರ್ಟ್‌ಮೆಂಟ್​​ಗಳಲ್ಲೇ ಹೆಚ್ಚುತ್ತಿದೆ ಕೋವಿಡ್

By

Published : Aug 4, 2021, 4:34 AM IST

ಬೆಂಗಳೂರು:ನಗರದ ಅಪಾರ್ಟ್​ಮೆಂಟ್​ಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ಮೂರಕ್ಕಿಂತ ಹೆಚ್ಚು ಕೋವಿಡ್ ಪ್ರಕರಣ ಇರುವ ಒಟ್ಟು 136 ಪ್ರದೇಶಗಳನ್ನು ಕಂಟೈನ್​ಮೆಂಟ್ ಜೋನ್​ಗಳೆಂದು ಘೋಷಿಸಲಾಗಿದ್ದು, ಇದರಲ್ಲಿ ಶೇ. 25ಕ್ಕೂ ಅಧಿಕವು ಅಪಾರ್ಟ್‌ಮೆಂಟ್​​ಗಳಲ್ಲೇ ಇವೆ.

ಎರಡು ದಿನಗಳ ಹಿಂದಷ್ಟೇ ಪೂರ್ವ ವಲಯದ ಅಪಾರ್ಟ್​ಮೆಂಟ್​ಗಳಲ್ಲಿ ಕಂಟೈನ್​ಮೆಂಟ್ ಮಾಡಲಾಗಿದೆ. ರಾಂಕಾ ಅಪಾರ್ಟ್​​ಮೆಂಟ್‌ನ 60 ಜನರ ಕೋವಿಡ್ ಟೆಸ್ಟ್ ಮಾಡಲಾಗಿದ್ದು, 4 ಫ್ಲಾಟ್​​ಗಳನ್ನು ಸೀಲ್​ಡೌನ್ ಮಾಡಲಾಗಿದೆ. ಮೂವರಿಗೆ ಕೋವಿಡ್ ದೃಢಪಟ್ಟಿದೆ. ಅಹುಜಾ ಅಪಾರ್ಟ್​​ಮೆಂಟ್​​ನಲ್ಲಿಯೂ 80 ಜನರ ಕೋವಿಡ್ ಟೆಸ್ಟ್ ಮಾಡಲಾಗಿದ್ದು, 5 ಫ್ಲಾಟ್​​​ಗಳಿರುವ ಬ್ಲಾಕ್ ಒಂದನ್ನು ಸೀಲ್​ಡೌನ್ ಮಾಡಲಾಗಿದೆ. ಎರಡೂ ಪ್ರಕರಣಗಳಲ್ಲಿಯೂ ಟ್ರಾವೆಲ್ ಹಿಸ್ಟರಿ ಕಂಡುಬಂದಿಲ್ಲ.

ನಗರದ ದಕ್ಷಿಣ ವಲಯದಲ್ಲಿ ಈವರೆಗೂ 13 ಕ್ಲಸ್ಟರ್​​ಗಳು ಪತ್ತೆಯಾಗಿದೆ. ಕೋರಮಂಗಲದಲ್ಲಿ 3 ಪಾಸಿಟಿವ್ ಪ್ರಕರಣ, ಚಂದ್ರಾರೆಡ್ಡಿ ಲೇಔಟ್​​ನಲ್ಲಿಯೂ ಹೆಚ್ಚು ಕೋವಿಡ್ ದೃಢಪಟ್ಟಿದೆ.
40 ಜನರ ಪ್ರಾಥಮಿಕ ಸಂರ್ಪಕಿತರ ಟೆಸ್ಟ್ ಮಾಡಲಾಗಿದೆ. ಮೊಬೈಲ್ ಟ್ರೇಸ್​​ ಟೀಂನಿಂದ ಪಾಸಿಟಿವ್ ತಿಳಿದ 5 ಗಂಟೆಯೊಳಗೆ ನಿವಾಸಕ್ಕೆ ತೆರಳಿ ಕೋವಿಡ್ ಪಾಸಿಟಿವ್ ರೋಗಿಗಳನ್ನು ಪರೀಕ್ಷೆ‌ ನಡೆಸಿ, ಕ್ವಾರಂಟೈನ್ ಹಾಗೂ ಕಂಟೈನ್​ಮೆಂಟ್ ಮಾಡಲಾಗಿದೆ.

ಒಂದೇ ಕಡೆ ಹೆಚ್ಚಿನ ಜನ ವಾಸಿಸುವ, ವಾತಾವರಣದ ಸಮಸ್ಯೆಯಿಂದಲೂ ಕೋವಿಡ್ ಹರಡಿರುವ ಸಾಧ್ಯತೆ ಇದೆ. ಇಲ್ಲದೆ ಬೊಮ್ಮನಹಳ್ಳಿ, ಯಲಹಂಕ, ಮಹದೇವಪುರ, ಆರ್.ಆರ್​​.ನಗರದ ಅಪಾರ್ಟ್‌ಮೆಂಟ್​​ಗಳಲ್ಲಿ ಹೆಚ್ಚು ಕೋವಿಡ್ ಪ್ರಕರಣಗಳು ದೃಢಪಟ್ಟಿವೆ.

ಇದನ್ನೂ ಓದಿ:ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್‌ 7ರವರೆಗೆ ವ್ಯಾಪಕ ಮಳೆ ಸಾಧ್ಯತೆ

ABOUT THE AUTHOR

...view details