ಕರ್ನಾಟಕ

karnataka

ETV Bharat / state

ಈವೆಂಟ್‌ ಮ್ಯಾನೇಜ್ಮೆಂಟ್‌ಗೂ ಕೊರೊನಾ ಪೆಟ್ಟು.. ಬೀದಿಗೆ ಬಿದ್ದ ಹಲವರ ಬದುಕು!!

ಹುಟ್ಟಿದ ಹಬ್ಬದಿಂದ ಅಂತ್ಯಸಂಸ್ಕಾರದ ಸಮಾರಂಭಗಳನ್ನ ನಿಭಾಯಿಸುವುದು ಈವೆಂಟ್ ಮ್ಯಾನೇಜ್ಮೆಂಟ್. ಮನೆಯಲ್ಲಿ ಆಗುವ ನಾಮಕರಣದಿಂದ ಸರ್ಕಾರಿ ಕಾರ್ಯಕ್ರಮದವರೆಗೂ ಈವೆಂಟ್ ಮನೆಜ್ಮೆಂಟ್ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದೆ. ಇಷ್ಟು ದೊಡ್ಡ ಸಮುದಾಯವನ್ನು ಸರ್ಕಾರ ಕಡೆಗಣಿಸಿರುವುದು ಸೋಚನೀಯ.

By

Published : Jun 17, 2020, 4:31 PM IST

covid-19-effect-event-management-companies-facing-problems-in-bengaluru
ಈವೆಂಟ್‌ ಮ್ಯಾನೇಜ್ಮೆಂಟ್‌ಗೂ ಕೊರೊನಾ ಪೆಟ್ಟು; ಬೀದಿಗೆ ಬಿದ್ದ ಹಲವರ ಬದುಕು!

ಬೆಂಗಳೂರು :ಸಿಲಿಕಾನ್ ಸಿಟಿಯಲ್ಲಿ ಈ ಹಿಂದೆ ಮೂಲೆ ಮೂಲೆಯಲ್ಲೂ ವಿವಿಧ ರೀತಿಯ ಕಾರ್ಯಕ್ರಮಗಳು ನಡೆಯುತ್ತಿದ್ದವು. ಆದರೆ, ಮಹಾಮಾರಿ ಕೋವಿಡ್‌ ಇದಕ್ಕೆಲ್ಲಾ ಬ್ರೇಕ್ ನೀಡಿದೆ. ಈವೆಂಟ್ ಮ್ಯಾನೇಜ್ಮೆಂಟ್ ನಂಬಿದವರನ್ನು ಸಂಕಷ್ಟಕ್ಕೆ ದೂಡಿದೆ.

ಈವೆಂಟ್‌ ಮ್ಯಾನೇಜ್ಮೆಂಟ್‌ಗೂ ಕೊರೊನಾ ಪೆಟ್ಟು.. ಬೀದಿಗೆ ಬಿದ್ದ ಹಲವರ ಬದುಕು!

ಕಾರ್ಯಕ್ರಮಗಳಲ್ಲಿ ಜನರನ್ನ ನಿಯಂತ್ರಣಕ್ಕೆ ಬೇಕಿದ್ದ ಬೌನ್ಸರ್ಸ್‌ಗಳಿಂದ ಹಿಡಿದು ಸ್ವಾಗತ ಕೋರುವವರು, ಹೊಸ್ಟೀಸ್, ಸಭಾಂಗಣ ಸಿದ್ಧತೆ ಮಾಡುವ ಕೆಲಸಗಾರರು, ಧ್ವನಿ ಯಂತ್ರಗಳನ್ನ ನಿಭಾಯಿಸುವ ಸೌಂಡ್ ಎಂಜಿನಿಯರ್ ಹೀಗೆ ಹತ್ತಾರು ಮಂದಿ ಈವೆಂಟ್‌ ಕಾರ್ಯಕ್ರಮಗಳನ್ನು ನಂಬಿಕೊಂಡಿದ್ದರು. ಆದರೆ, ಕೊರೊನಾ ಭೀತಿಯಿಂದ ಇದೆಲ್ಲವನ್ನು ಸ್ಥಗಿತ ಮಾಡಿರುವುದರಿಂದ ಇವರಿಗೆ ದೊಡ್ಡ ಹೊಡೆತ ನೀಡಿದಂತಾಗಿದೆ.

ಕೊರೊನಾ ತಂದ ಆರ್ಥಿಕ ಹೊಡೆತದಿಂದ ಇವರೆಲ್ಲಾ ದಿನಸಿಯಿಂದ ಮನೆ ಬಾಡಿಗೆಯವರೆಗೆ ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಈವೆಂಟ್ ಮ್ಯಾನೇಜ್ಮೆಂಟ್ ವಲಯದ ದುಃಸ್ಥಿತಿಯ ಬಗ್ಗೆ ಎಟರ್ನಿಟಿ ಎಂಟರ್ಟೈನ್ಮೆಂಟ್ ಮಾಲೀಕ ರಾಜ್‌ಗೌಡ ತಮ್ಮ ಸಂಕಷ್ಟಗಳನ್ನು ವಿವರಿಸುತ್ತಾರೆ.

ಹುಟ್ಟಿದ ಹಬ್ಬದಿಂದ ಅಂತ್ಯಸಂಸ್ಕಾರದ ಸಮಾರಂಭಗಳನ್ನ ನಿಭಾಯಿಸುವುದು ಈವೆಂಟ್ ಮ್ಯಾನೇಜ್ಮೆಂಟ್. ಮನೆಯಲ್ಲಿ ಆಗುವ ನಾಮಕರಣದಿಂದ ಸರ್ಕಾರಿ ಕಾರ್ಯಕ್ರಮದವರೆಗೂ ಈವೆಂಟ್ ಮನೆಜ್ಮೆಂಟ್ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದೆ. ಇಷ್ಟು ದೊಡ್ಡ ಸಮುದಾಯವನ್ನು ಸರ್ಕಾರ ಕಡೆಗಣಿಸಿರುವುದು ಸೋಚನೀಯ. ಕೂಡಲೇ ಸರ್ಕಾರ ಬೇರೆ ಕ್ಷೇತ್ರಗಳಿಗೆ ಪರಿಹಾರ ಘೋಷಣೆ ಮಾಡಿದೆ ರೀತಿ ಈ ವಲಯಕ್ಕೂ ಪರಿಹಾರ ಘೋಷಣೆ ಮಾಡಬೇಕು ಎಂದು ಈವೆಂಟ್‌ ಮ್ಯಾನೇಜ್ಮೆಂಟ್‌ ಸಂಸ್ಥೆಗಳ ಆಗ್ರಹವಾಗಿದೆ.

ABOUT THE AUTHOR

...view details