ಬೆಂಗಳೂರು :ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ವಿಶ್ವದಾದ್ಯಂತ ಸುಮಾರು ನಾಲ್ಕು ಸಾವಿರ ಸ್ಕ್ರೀನ್ಗಳಲ್ಲಿ ಅದ್ದೂರಿಯಾಗಿ ರಿಲೀಸ್ ಆಗುತ್ತಿದೆ.
ಶುರುವಾಯ್ತು ಪೈಲ್ವಾನ್ ಫೀವರ್ :ಥಿಯೇಟರ್ ಮುಂದೆ ಕಿಚ್ಚ ಫ್ಯಾನ್ಸ್ ಸಂಭ್ರಮ ಜೋರು - Sudeep Fans
ಮೊದಲ ಬಾರಿಗೆ ಜಟ್ಟಿ ಮಣ್ಣಿನಲ್ಲಿ " ಗೂಳಿ" ಗುಟುರು ಹಾಕಿದ್ದು, ಮೀಸೆ ಮೇಲೆ ಕೈ ಇಟ್ಟು ತೊಡೆ ತಟ್ಟಿದ್ದಾರೆ. ಇನ್ನು" ಪೈಲ್ವಾನ್" ಲುಕ್ ಅಭಿಮಾನಿಗಳಲ್ಲಿ ಕಿಕ್ ಬರಿಸಿದ್ದು, ಪೈಲ್ವಾನನ ಅರಬ್ಬರವನ್ನು ಕಣ್ತುಂಬಿಕೊಳ್ಳಲು ಅಭಿನಯ ಚಕ್ರವರ್ತಿ ಭಕ್ತಗಣ ಕಾತರದಿಂದ ಕಾಯ್ತಿದ್ದಾರೆ. ಅಲ್ಲದೆ ಪೈಲ್ವಾನ್ನನ್ನು ಭರ್ಜರಿಯಾಗಿ ವೆಲ್ಕಮ್ ಮಾಡಲು ಗೂಳಿ ಭಕ್ತಗಣ ರೆಡಿಯಾಗಿದೆ.

ಗುರುವಾರ ಬೆಳ್ಳಗೆ 7 ಗಂಟೆಗೆ ನಗರದ ಸಂತೋಷ್ ಚಿತ್ರ ಮಂದಿರದಲ್ಲಿ ಪೈಲ್ವಾನ್ ಪ್ರದರ್ಶನ ಆರಂಭವಾಗಲಿದ್ದು, ಸುದೀಪ್ ಫ್ಯಾನ್ಸ್ ಗಳು ಸಂತೋಷ್ ಚಿತ್ರಮಂದಿರದ ಬಳಿ ಹಾಕಿರುವ ಕಿಚ್ಚನ 66 ಅಡಿ ಕಟೌಟ್ ಮುಂದೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಅಲ್ಲದೆ ಬೆಳಿಗ್ಗೆ ಐದು ಗಂಟೆಗೆ ಕಾವೇರಿ ಚಿತ್ರಮಂದಿರದಲ್ಲಿ ಫ್ಯಾನ್ಸ್ ಶೋ ಆರಂಭವಾಗಿದೆ. ಈಗಾಗಲೇ ಟಿಕೆಟ್ ಸೊಲ್ಡ್ ಔಟ್ ಆಗಿದೆ. ಗುರುವಾರ ಬೆಳಿಗ್ಗೆ ಕಿಚ್ಚ ಸುದೀಪ್ ಅಭಿಮಾನಿಗಳ ಜೊತೆ ಸಂತೋಷ್ ಥಿಯೇಟರ್ ನಲ್ಲಿ ಸಿನಿಮಾ ನೋಡಲಿದ್ದಾರೆ.