ಕರ್ನಾಟಕ

karnataka

ETV Bharat / state

ಕರ್ನಾಟಕದಲ್ಲಿ ಕೊರೊನಾ ಮ'ರಣ'ಕೇಕೆ: ಇಡೀ ರಾಜ್ಯದ ಸಂಕ್ಷಿಪ್ತ ವರದಿ.. - ಕೊರೊನಾ ಸೋಂಕಿತರ ಸಂಖ್ಯೆ

ಕರ್ನಾಟಕದಲ್ಲಿ ಕೊರೊನಾ ರಣಕೇಕೆ ಹಾಕಿದ್ದು, ಸೋಂಕಿತರ ಸಂಖ್ಯೆಯಿಂದ ಹಿಡಿದು ಸಾವಿನ ಸಂಖ್ಯೆಯು ರಾಜ್ಯದಲ್ಲಿ ಏರುತ್ತಲೇ ಇದೆ.‌ ರಾಜ್ಯದ ಇಂದಿನ ಸಂಪೂರ್ಣ ವರದಿ ಇಲ್ಲಿದೆ.

corona updates of karnataka
ಕೊರೊನಾ ಮ'ರಣ'ಕೇಕೆ

By

Published : Jul 14, 2020, 10:28 PM IST

ಬೆಂಗಳೂರು: ಕೊರೊನಾ ಸೋಂಕಿತರ ಸಂಖ್ಯೆಯಿಂದ ಹಿಡಿದು ಸಾವಿನ ಸಂಖ್ಯೆಯು ರಾಜ್ಯದಲ್ಲಿ ಏರುತ್ತಲೇ ಇದೆ.‌ ಇಂದು ಒಂದೇ ದಿನ 87 ಜನರು ಕೊರೊನಾಗೆ ಬಲಿಯಾಗಿದ್ದು, 842ಕ್ಕೆ ಕೊರೊನಾಗೆ, 4 ಮಂದಿ ಅನ್ಯ ಅನ್ಯಕಾರಣಕ್ಕೆ ಸಾವಿಗೀಡಾಗಿದ್ದಾರೆ. 2,496 ಹೊಸ ಪಾಸಿಟಿವ್ ಕೇಸ್ ಬಂದಿದ್ದು, 44,077ಕ್ಕೆ ಸೋಂಕಿತರ ಸಂಖ್ಯೆ ಏರಿದೆ‌‌. ಸದ್ಯ 17,390 ಮಂದಿ ಗುಣಮುಖರಾಗಿದ್ದು ಡಿಸ್ಜಾರ್ಜ್ ಆಗಿದ್ದರೆ, 25,839 ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿದೆ. 540 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಳ್ಳಾರಿ:

ಬಳ್ಳಾರಿಯಲ್ಲಿಂದು ಹೊಸದಾಗಿ 103 ಕೊರೊನಾ ಪಾಸಿಟಿವ್ ಕೇಸ್​ಗಳು ಪತ್ತೆಯಾಗಿದ್ದು, ಇದರಿಂದ ಸೋಂಕಿತರ ಸಂಖ್ಯೆ 1,890ಕ್ಕೇರಿಕೆಯಾಗಿದೆ. ಜಿಲ್ಲೆಯಲ್ಲಿ ಈ ದಿನ 103 ಮಂದಿಗೆ ಕೊರೊನಾ ಸೋಂಕಿರೋದು ದೃಢಪಟ್ಟಿದೆ. ಹೀಗಾಗಿ, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1890 ಕ್ಕೇರಿಕೆಯಾಗಿದೆ. ಇನ್ನು 1055 ಮಂದಿ ಗುಣಮುಖರಾಗಿದ್ದು, 50 ಮಂದಿ ಸಾವನ್ನಪ್ಪಿದ್ದಾರೆ. 788 ಸಕ್ರಿಯ ಪ್ರಕರಣಗಳಿವೆ. ಈ‌ ದಿನ ನಾಲ್ವರು ಮೃತಪಟ್ಟಿದ್ದು ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಾಗಿದೆ.

ಬಳ್ಳಾರಿ (ಪ್ರಾತಿನಿಧಿಕ ಚಿತ್ರ)

ರಾಯಚೂರು:

ರಾಯಚೂರು ಜಿಲ್ಲೆಯಲ್ಲಿ ಇಂದು 25 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಈ ಮೂಲಕ ಜಿಲ್ಲೆಯ ಸೋಂಕಿತರ ಸಂಖ್ಯೆ 788ಕ್ಕೆ ಏರಿಕೆಯಾಗಿದೆ. ಇಂದು ಬಂದಿರುವ ಸೋಂಕಿತರಲ್ಲಿ ರಾಯಚೂರು ತಾಲೂಕಿನ 22, ಮಾನವಿ ತಾಲೂಕಿನ 2, ಲಿಂಗಸೂಗೂರು ಒಬ್ಬರಿಗೆ ಸೋಂಕು ಹರಡಿದೆ. ಪಿ-37170, ಪಿ-35513 ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ಕೊರೊನಾ ಸೋಂಕಿತರ ಸಾವಿನ ಸಂಖ್ಯೆಕ್ಕೆ 10ಕ್ಕೆ ಏರಿಕೆಯಾಗಿದೆ. ಈವರೆಗೆ ಪತ್ತೆಯಾಗಿರುವ 788 ಸೋಂಕಿತರ ಪೈಕಿ 476 ಸೋಂಕಿತರು ಗುಣಮುಖ ಹೊಂದಿ, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇನ್ನುಳಿದ 302 ಪ್ರಕರಣಗಳು ಸಕ್ರಿಯವಾಗಿವೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

ಚಿಕ್ಕಮಗಳೂರು:

ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ದಿನ 03 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ 155 ಕ್ಕೆ ಕೊರೊನ ವೈರಸ್ ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದು, ಈವರೆಗೂ ಜಿಲ್ಲೆಯಲ್ಲಿ ಒಟ್ಟು 93 ಜನ ಸೋಂಕಿತರು ಜಿಲ್ಲಾ ಕೋವೀಡ್ -19 ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದು ಗುಣ ಮುಖರಾಗಿ ಬಿಡುಗಡೆಯಾದಂತೆ ಆಗಿದೆ. ಬೆಳಗ್ಗೆ ಗೌರಿ ಕಾಲುವೆಯಲ್ಲಿ 52 ವರ್ಷದ ಪುರುಷ ಕೊರೊನಾ ಸೋಂಕಿಗೆ ಬಲಿಯಾಗಿದ್ದು, ಜಿಲ್ಲೆಯಲ್ಲಿ ಸೋಂಕಿನಿಂದ ಸತ್ತವರ ಸಂಖ್ಯೆ 6 ಕ್ಕೆ ಏರಿಕೆಯಾಗಿದೆ.

ತುಮಕೂರು:

ಕಲ್ಪತರು ನಾಡು ತುಮಕೂರು ಜಿಲ್ಲೆಯ ಪೊಲೀಸ್ ಸಿಬ್ಬಂದಿಯನ್ನು ಬಿಡದೆ ಕಾಡುತ್ತಿದೆ. ಇಂದು ಒಂದೇ ದಿನ 10 ಮಂದಿ ಪೊಲೀಸ್ ಸಿಬ್ಬಂದಿಗೆ ಮಹಾಮಾರಿ ತಗುಲಿದೆ. ಕೆಎಸ್​ಆರ್​ಟಿಸಿ ನೌಕರನಿಗೂ ಸೋಂಕು ಧೃಢವಾಗಿದೆ. ಇಂದು 52 ಮಂದಿಯಲ್ಲಿ ಸೋಂಕು ಕಂಡುಬಂದಿದ್ದು ಸೋಂಕಿತರ ಸಂಖ್ಯೆ 565 ಏರಿಕೆಯಾಗಿದೆ. ತುಮಕೂರು ತಾಲೂಕಿನಲ್ಲಿ 31 ಮಂದಿಗೆ, ತುರುವೇಕೆರೆ ಮತ್ತು ತಿಪಟೂರಿನಲ್ಲಿ ತಲಾ ಐವರಿಗೆ, ಪಾವಗಡ ತಾಲೂಕಿನಲ್ಲಿ ನಾಲ್ವರಿಗೆ, ಕುಣಿಗಲ್ ಮತ್ತು ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ತಲಾ ಇಬ್ಬರಿಗೆ, ಮಧುಗಿರಿ ಕೊರಟಗೆರೆ ಮತ್ತು ಶಿರಾ ತಾಲೂಕಿನಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ. ಜಿಲ್ಲಾ ಕೋವಿಡ್-19 ಆಸ್ಪತ್ರೆಯಿಂದ 17 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಸಹ ಮತ್ತೊಬ್ಬರು ಮೃತಪಟ್ಟಿದ್ದು ಮೃತರ ಸಂಖ್ಯೆ 16ಕ್ಕೆ ಏರಿಕೆ ಆದಂತಾಗಿದೆ.

ತುಮಕೂರು (ಪ್ರಾತಿನಿಧಿಕ ಚಿತ್ರ)

ಚಿಕ್ಕಬಳ್ಳಾಪುರ:

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ದಿನೇ ದಿನೇ ಸೊಂಕಿತರ ಸಂಖ್ಯೆ ಏರಿಕೆ ಕಾಣುತ್ತಿದ್ದು, ಇಂದು 13 ಸೊಂಕಿತರು ಪತ್ತೆಯಾಗಿದ್ದು ಸೊಂಕಿತರ ಸಂಖ್ಯೆ 468 ಕ್ಕೆ ಏರಿಕೆಯಾಗಿದೆ. ಚಿಕ್ಕಬಳ್ಳಾಪುರ ವ್ಯಾಪ್ತಿಯಲ್ಲಿ 8 ಸೊಂಕಿತರು, ಗುಡಿಬಂಡೆ 4 ಹಾಗೂ ಚಿಂತಾಮಣಿ ವ್ಯಾಪ್ತಿಯಲ್ಲಿ 1 ಸೊಂಕಿತರು ಪತ್ತೆಯಾಗಿದ್ದಾರೆ. 10 ಸೊಂಕಿತರು ಸಂಪೂರ್ಣ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೂ 468 ಸೊಂಕಿತರು ಪತ್ತೆಯಾಗಿದ್ದು, ಇದುವರೆಗೂ 244 ಸೊಂಕಿತರು ಗುಣಮುಖರಾಗಿ ಬಿಡುಗಡೆಗೊಂಡಿದ್ದು, ಒಟ್ಟು 208 ಸಕ್ರಿಯ ಪ್ರಕರಣಗಳಿಗೆ ಜಿಲ್ಲೆಯ ಐಸೊಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮುದ್ದೇಬಿಹಾಳ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ವೈರಸ್ ಹರಡುತ್ತಿದ್ದು ಮುದ್ದೇಬಿಹಾಳ ಪಟ್ಟಣದ ಬಸವ ನಗರದಲ್ಲಿ ಒಬ್ಬರಿಗೆ ಹಾಗೂ ತಾಲೂಕಿನ ಕವಡಿಮಟ್ಟಿ ಗ್ರಾಮದಲ್ಲಿ ಒಬ್ಬರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ.

ಉತ್ತರಕನ್ನಡ:

ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು ಒಂದೇ ದಿನ 65 ಮಂದಿಗೆ ಸೋಂಕು ದೃಢಪಟ್ಟಿದೆ. ಭಟ್ಕಳದಲ್ಲಿಯೇ ಅತಿ ಹೆಚ್ಚು 26 ಮಂದಿಗೆ ಸೋಂಕು ಪತ್ತೆಯಾಗಿದ್ದು, ಕುಮಟಾದಲ್ಲಿ 23, ಹಳಿಯಾಳದಲ್ಲಿ 5, ಹೊನ್ನಾವರದಲ್ಲಿ 6, ಅಂಕೋಲಾದಲ್ಲಿ 1, ಮುಂಡಗೋಡದಲ್ಲಿ 2, ಕಾರವಾರ ಮತ್ತು ಯಲ್ಲಾಪುರದಲ್ಲಿ ತಲಾ ಒಂದು ಪ್ರಕರಣ ಪತ್ತೆಯಾಗಿದೆ. ಈ ಪೈಕಿ 28 ಮಂದಿಗೆ ಸೋಂಕಿತರ ಸಂಪರ್ಕದಿಂದ ಕೊರೊನಾ ಹರಡಿದ್ದರೆ, ಹೊರ ರಾಜ್ಯದಿಂದ ಬಂದಿದ್ದ 10 ಮಂದಿಗೆ, ವಿದೇಶದಿಂದ ವಾಪಸ್​ಆಗಿದ್ದ ಓರ್ವನಿಗೆ ಸೋಂಕು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 698ಕ್ಕೆ ಏರಿದ್ದು, 261 ಮಂದಿ ಗುಣಮುಖರಾಗಿದ್ದಾರೆ. ಉಳಿದಂತೆ 432 ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದ್ದು, ಐವರು ಮೃತಪಟ್ಟಿದ್ದಾರೆ.

ಮಂಗಳೂರು:

ಮಂಗಳೂರಲ್ಲಿ ಇಂದು ಕೊರೊನಾಗೆ ಮೂವರು ಬಲಿಯಾಗಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರದ 65 ವರ್ಷದ ಮಹಿಳೆ , ಉಡುಪಿ ಜಿಲ್ಲೆಯ ಕುಂದಾಪುರದ 55 ವರ್ಷದ ಪುರುಷ ಮತ್ತು ಮಂಗಳೂರಿನ 70 ವರ್ಷದ ಪುರುಷ ಸಾವನ್ನಪ್ಪಿದವರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 53 ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಇಂದು 91 ಮಂದಿಗೆ ಕೊರೊನಾ ದೃಢಪಟ್ಟಿದೆ. ಇದರಲ್ಲಿ 20 ಮಂದಿ ಪ್ರಾಥಮಿಕ ಸಂಪರ್ಕದಿಂದ, ಐಎಲ್ಐ ನಿಂದ 29 , ಸಾರಿಯಿಂದ 5, ಅಂತರಾಷ್ಟ್ರೀಯ ಪ್ರವಾಸದಿಂದ 1, ಸರ್ಜರಿ ಪೂರ್ವದಿಂದ 1 ಪತ್ತೆಯಾಗಿದೆ. 35 ಮಂದಿಯ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಇಂದು 47 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಕೊಪ್ಪಳ:

ಕೊಪ್ಪಳ ಜಿಲ್ಲೆಯಲ್ಲಿ ಇಂದು ಮತ್ತೆ 24 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 356 ಕ್ಕೆ ಏರಿಕೆಯಾಗಿದೆ. ಐಎಲ್ಐ ಪ್ರಕರಣದಲ್ಲಿ 12, ಪ್ರಾಥಮಿಕ ಸಂಪರ್ಕಿತರ ಪೈಕಿ 6 ಜನರಲ್ಲಿ ಹಾಗೂ ಡೊಮೆಸ್ಟಿಕ್‌ ಟ್ರಾವೆಲ್ಲರ್ಸ್ ಪೈಕಿ 6 ಜನರು ಸೇರಿ ಇಂದು ಒಟ್ಟು 24 ಜನರಲ್ಲಿ ಸೋಂಕು ದೃಢಪಟ್ಟಿದೆ. ಇಂದು ಒಬ್ಬರು ಸೋಂಕಿಗೆ ಬಲಿಯಾಗಿದ್ದು, ಸೋಂಕಿತರ ಸಾವಿನ ಸಂಖ್ಯೆ 9 ಆಗಿದೆ.

ಬೀದರ್:

ಬೀದರ್​ನಲ್ಲಿ ಕೊರೊನಾ ವೈರಸ್ ಸೋಂಕು ಅಟ್ಟಹಾಸ ಮುಂದುವರೆದಿದ್ದು, 42 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 1103 ಕ್ಕೆ ಏರಿಕೆಯಾಗಿದೆ. ಜಿಲ್ಲೆಯ ಹುಮನಾಬಾದ್, ಭಾಲ್ಕಿ, ಕಮಲನಗರ, ಚಿಟಗುಪ್ಪ, ಔರಾದ್, ಬಸವಕಲ್ಯಾಣ ಹಾಗೂ ಬೀದರ್ ತಾಲೂಕಿನ ಒಟ್ಟು 43 ಜನರಲ್ಲಿ ಸೋಂಕು ಧೃಡವಾಗಿದೆ.

ಮೈಸೂರು:

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಿನೇ ದಿನೇ ಕೊರೊನಾ‌ ಸೋಂಕಿತರ ಸಂಖ್ಯೆ ಶತಕ ಮೀರುತ್ತಿರುವುದರಿಂದ ಜನರಿಗೆ ನಡುಕ ಶುರುವಾಗಿದೆ. ನಿನ್ನೆ(ಸೋಮವಾರ)‌151 ಮಂದಿಗೆ ಕೊರೊನಾ ಸೋಂಕು‌ ದೃಢಪಟ್ಟಿತ್ತು. ಇಂದು ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್​ಲ್ಲಿ 125 ಮಂದಿಗೆ ಸೋಂಕು ತಗುಲಿರಿರುವುದು ಜನರಿಗೆ ಆತಂಕವನ್ನುಂಟು ಮಾಡಿದೆ. ಕೊರೊನಾದಿಂದ ಗುಣಮುಖರಾದ ಜನ 16 ಡಿಸ್ಚಾಜ್೯ ಆದರೆ, ತೀವ್ರ ಉಸಿರಾಟದ ತೊಂದರೆಯಿಂದ ನಾಲ್ವರು ಮೃತಪಟ್ಟಿದ್ದಾರೆ. ಮೈಸೂರಿನಲ್ಲಿ ಒಟ್ಟಾರೆ ಈವರೆಗೆ 1091 ಕೊರೊನಾ ಸೋಂಕು ತಗುಲಿದ್ದು, ಅದರಲ್ಲಿ 498 ಮಂದಿ ಬಿಡುಗಡೆಯಾಗಿದ್ದಾರೆ.

ಮೈಸೂರು (ಪ್ರಾತಿನಿಧಿಕ ಚಿತ್ರ)

ವಿಜಯಪುರ:

ವಿಜಯಪುರ ಜಿಲ್ಲೆಯಲ್ಲಿ ಇಂದು ಕೊರೊನಾ ಸ್ಫೋಟ ಸಂಭವಿಸಿದ್ದು, ಒಂದೇ ದಿನ 52 ಜನರಲ್ಲಿ ಪಾಸಿಟಿವ್ ದೃಢಪಟ್ಟಿದೆ. ಇಲ್ಲಿಯವರೆಗೆ ಒಟ್ಟು 896 ಸೊಂಕಿತರಾಗಿದ್ದು, ಒಂದೇ ದಿನ 80 ಸೋಂಕಿತರು ಗುಣಮುಖರಾಗಿದ್ದಾರೆ. 52 ಸೋಂಕಿತರಲ್ಲಿ 34 ಪುರುಷರು, 13 ಮಹಿಳೆಯರು, ಇಬ್ಬರು ಯುವಕರು, ಓರ್ವ ಯುವತಿ ಮತ್ತು ಇಬ್ಬರು ಬಾಲಕಿಯರು ಇದ್ದಾರೆ. ನಾನಾ ಕಾಯಿಲೆ, ಕೊರೊನಾ ಸೋಂಕಿನಿಂದ ಮತ್ತೆ 3 ಜನ ಸಾವನ್ನಪ್ಪಿದ್ದಾರೆ. ಒಟ್ಟು ಜಿಲ್ಲೆಯಲ್ಲಿ ಇಲ್ಲಿಯವರೆಗೆ 36,070 ಜನರ ಗಂಟಲು ದ್ರವ ಪರೀಕ್ಷೆ ಪಡೆದುಕೊಳ್ಳಲಾಗಿದೆ. ಇದರಲ್ಲಿ 31,790 ಜನರ ವರದಿ ನೆಗಟಿವ್, 896 ಜನರ ವರದಿ ಪಾಸಿಟಿವ್ ಬಂದಿದೆ. ಇನ್ನೂ ಕೂಡ 3,384 ಜನರ ವರದಿ ಬರಬೇಕಿದೆ.

ವಿಜಯಪುರ (ಪ್ರಾತಿನಿಧಿಕ ಚಿತ್ರ)

ಶಿವಮೊಗ್ಗ:

ಶಿವಮೊಗ್ಗ ಜಿಲ್ಲೆಯಲ್ಲಿ ಇಂದು 10 ಕೊರೊನಾ‌ ಪಾಸಿಟಿವ್ ಪ್ರಕರಣಗಳು ಕಂಡು ಬಂದಿವೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 530 ಕ್ಕೆ ಏರಿಕೆಯಾಗಿದೆ. ಇಂದು 32 ಜನ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇದುವರೆಗೂ ಒಟ್ಟು 229 ಜನ ಗುಣಮುಖರಾಗಿದ್ದಾರೆ. ಆಸ್ಪತ್ರೆಯಲ್ಲಿ 291 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೊ 10 ಜನ ಸಾವಿಗೀಡಾಗಿದ್ದಾರೆ ಎಂದು ರಾಜ್ಯದ ಹೆಲ್ತ್ ಬುಲಿಟಿನ್ ನಲ್ಲಿ ತಿಳಿಸಲಾಗಿದೆ. ಇನ್ನು ಜಿಲ್ಲೆಯ ಹೆಲ್ತ್ ಬುಲಿಟಿನ್​ನಲ್ಲಿ ಇಂದು 30 ಪಾಸಿಟಿವ್ ಪ್ರಕರಣ ದಾಖಲು ಎಂದು ಬಂದಿದೆ. ಸೊಂಕಿತರ ಸಂಖ್ಯೆ 598 ಎಂದು ನಮೂದಾಗಿದೆ. ಇಂದು ಒಂದು ಸಾವು ಸಂಭವಿಸಿದ್ದು ಸೊಂಕಿನಿಂದ ಸತ್ತವರ ಸಂಖ್ಯೆ 11 ಎಂದು ತೋರಿಸಿದೆ.

ಶಿವಮೊಗ್ಗ (ಪ್ರಾತಿನಿಧಿಕ ಚಿತ್ರ)

ಧಾರವಾಡ:

ಧಾರವಾಡ ಜಿಲ್ಲೆಯಲ್ಲಿ ಇಂದು ಕೂಡ 100 ಜನರಿಗೆ ಸೋಂಕು ದೃಢಪಟ್ಟಿದೆ. ಇದರಿಂದ ಸೋಂಕಿತರ ಸಂಖ್ಯೆ 1259ಕ್ಕೇರಿದೆ. ಜಿಲ್ಲೆಯಲ್ಲಿ ಇಂದು ಓರ್ವ ಮಹಿಳೆ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಮೃತರ ಸಂಖ್ಯೆ 39ಕ್ಕೇರಿದೆ.

ದಾವಣಗೆರೆ:

ದಾವಣಗೆರೆಯಲ್ಲಿ ಕೊರೊನಾಕ್ಕೆ 85 ವರ್ಷದ ವೃದ್ಧೆ ಮೃತಪಟ್ಟಿದ್ದು, ಸಾವಿನ ಸಂಖ್ಯೆ 22ಕ್ಕೇರಿದೆ. 17 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿದ್ದು, ಸೋಂಕಿತರ ಸಂಖ್ಯೆ 598 ಕ್ಕೇರಿದೆ. ದಾವಣಗೆರೆಯಲ್ಲಿ 12, ಹರಿಹರ 4 ಹಾಗೂ ಬಳ್ಳಾರಿಯಿಂದ ದಾವಣಗೆರೆಗೆ ಬಂದಿದ್ದ ಒಬ್ಬರಲ್ಲಿ ಸೋಂಕಿರುವುದು ದೃಢಪಟ್ಟಿದೆ. 37 ಮಂದಿ ಕೊರೊನಾ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದು, ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 468 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.

ದಾವಣಗೆರೆ (ಪ್ರಾತಿನಿಧಿಕ ಚಿತ್ರ)

ಚಿತ್ರದುರ್ಗ:

ಚಿತ್ರದುರ್ಗ ಜಿಲ್ಲೆಯಲ್ಲಿಂದು 10 ಜನರಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ. ಚಿತ್ರದುರ್ಗದ 52 ಹಾಗೂ 40 ವರ್ಷದ ಪುರುಷ, ಚಿತ್ರದುರ್ಗ ತಾಲೂಕಿನ 25 ಹಾಗು 34 ವರ್ಷದ ಯುವಕರು, ಹಿರಿಯೂರಿನ 25 ಹಾಗು 34 ವರ್ಷದ ಮಹಿಳೆ, ಹಿರಿಯೂರು ತಾಲೂಕಿನ 21 ವರ್ಷದ ಯುವಕ, ಹೊಸದುರ್ಗ 50 ವರ್ಷದ ಪುರುಷ, ಹೊಸದುರ್ಗ ತಾಲೂಕಿನ 29 ವರ್ಷದ ಯುವಕ, ಮೊಳಕಾಲ್ಮೂರಿನ 28 ವರ್ಷದ ಯುವಕ ಸೇರಿ ಒಟ್ಟು ಹತ್ತು ಜನರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 130 ಕ್ಕೆ ಏರಿಕೆಯಾಗಿದೆ.

ಬೆಳಗಾವಿ:

ಗಡಿ ಜಿಲ್ಲೆ ಬೆಳಗಾವಿಯಲ್ಲಿಂದು ಕೊರೊನಾ ಸ್ಪೋಟಗೊಂಡಿದ್ದು, ಒಂದೇ ದಿನಕ್ಕೆ 64 ಜನರಿಗೆ ಸೋಂಕು ತಗುಲಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 561ಕ್ಕೆ ಏರಿಕೆಯಾಗಿದೆ. ಎಲ್ಲ ಸೋಂಕಿತರನ್ನು ಬೆಳಗಾವಿಯ ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡ್​ಗೆ ಶಿಫ್ಟ್ ಮಾಡಲಾಗಿದೆ. ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಕೊರೊನಾ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ವಾರಿಯರ್ಸ್‌ಗೆ ಸೋಂಕು ತಗುಲಿದೆ‌. ಅಥಣಿ ತಾಲೂಕಿನಲ್ಲಿ ಇಂದು ಏಳಕ್ಕೂ ಅಧಿಕ ಜನರಿಗೆ ಕೊರೊನಾ ಸೋಂಕು ವಕ್ಕರಿಸಿದೆ. ರಾಯಭಾಗದಲ್ಲಿ 20 ಜನರಿಗೆ, ಬೆಳಗಾವಿ ನಗರ 28, ಬೈಲಹೊಂಗಲ 6, ಹುಕ್ಕೇರಿ, ಚಿಕ್ಕೋಡಿ ಹಾಗೂ ರಾಮದುರ್ಗದಲ್ಲಿ ತಲಾ ಓರ್ವನಿಗೆ ಸೋಂಕು ದೃಢಪಟ್ಟಿದೆ.

ABOUT THE AUTHOR

...view details