ಬೆಂಗಳೂರು: ನಗರದ ನಾಗಾವರದ ಪಿಜಿಯೊಂದರಲ್ಲಿ ಮಹಿಳೆಯೊಬ್ಬರಿಗೆ ಕೋವಿಡ್ 19 ವೈರಸ್ ಲಕ್ಷಣಗಳು ಕಾಣಿಸಿಗೊಂಡಿದ್ದು, ಕೂಡಲೇ ಆ್ಯಂಬುಲೆನ್ಸ್ ಮೂಲಕ ಐಸೋಲೇಷನ್ಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಬೆಂಗಳೂರಲ್ಲಿ ಮಹಿಳಾ ಉದ್ಯೋಗಿಗೆ ಕೊರೊನಾ ಶಂಕೆ - ಮಹಿಳಾ ಉದ್ಯೋಗಿಗೆ ಕೊರೊನಾ ಶಂಕೆ
ಬೆಂಗಳೂರಿನ ನಾಗಾವರದ ಪಿಜಿಯೊಂದರಲ್ಲಿ ಮಹಿಳೆಯೊಬ್ಬರಿಗೆ ಕೋವಿಡ್ 19 ವೈರಸ್ ಲಕ್ಷಣಗಳು ಕಾಣಿಸಿಗೊಂಡಿದೆ. ಹಾಗಾಗಿ ಅವರನ್ನು ತಪಾಸಣೆಗೆ ಕಳಿಸಲಾಗಿದೆ ಎಂದು ತಿಳಿದು ಬಂದಿದೆ.
ಮಾನ್ಯತಾ ಟೆಕ್ ಪಾರ್ಕ್ ಮಹಿಳಾ ಉದ್ಯೋಗಿಗೆ ಕೊರೊನಾ ಶಂಕೆ
ಮಹಿಳೆ ಮಾನ್ಯತಾ ಟೆಕ್ ಪಾರ್ಕ್ನ ಖಾಸಗಿ ಸಂಸ್ಥೆಯಾದ ಕಾಗ್ನಿಸೆಂಟ್ನಲ್ಲಿ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ. ಸಂಸ್ಥೆಯು ಪಿಜಿ ಸುತ್ತಮುತ್ತಲ ಮನೆಗಳು ಹಾಗೂ ಪಿಜಿಯವರಿಗೆ ಹೊರ ಬಾರದಂತೆ ಸಂಸ್ಥೆಯ ಇ-ಮೇಲ್ನಲ್ಲಿ ತಿಳಿಸಿದ್ದು, ಗಾಬರಿ ಪಡುವ ಅಗತ್ಯವಿಲ್ಲ ಎಂದು ತಿಳಿಸಿದೆ.
ಅಲ್ಲದೇ ಶಂಕಿತ ಕೊರೊನಾ ಮಹಿಳೆಯ ತಪಾಸಣೆ ನಡೆಸಲಾಗುತ್ತಿದ್ದು, ಫಲಿತಾಂಶ ಬರಲು 2 -3 ದಿನ ಆಗಲಿದೆ ಎಂದು ತಿಳಿಸಿದೆ.
Last Updated : Mar 19, 2020, 5:04 PM IST