ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಇಂದಿನಿಂದ ಪತ್ರಿಕಾ ಪ್ರಕಟಣೆಯ ಸ್ವರೂಪ ಬದಲಾಗಿದೆ ಎಂದು ಟ್ವೀಟ್ ಮಾಡಿದೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕು ಸಮುದಾಯಕ್ಕೆ ಹರಡಿತಾ ಎನ್ನುವ ಅನುಮಾನಗಳು ಹೆಚ್ಚಾಗತೊಡಗಿವೆ.
ರಾಜ್ಯದಲ್ಲಿಂದು 63 ಹೊಸ ಪಾಸಿಟಿವ್ ಕೇಸ್ ದಾಖಲಾಗಿವೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1458 ಏರಿಕೆಯಾಗಿದೆ. ಇದರಲ್ಲಿ ಈವರೆಗೂ 553 ಜನ ಡಿಸ್ಚಾರ್ಜ್ ಆಗಿದ್ದು, ಉಳಿದ 864 ಮಂದಿ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜ್ಯ ಆರೋಗ್ಯ ಇಲಾಖೆ ಸೋಂಕಿತರ ಪ್ರಯಾಣದ ಹಿಸ್ಟರಿ ಹೊಂದಿರುವುದರ ಬಗ್ಗೆ ಮಾಹಿತಿ ನೀಡಿಲ್ಲ. ಇದು ಸಮುದಾಯಕ್ಕೆ ಹರಡಿತಾ ಎಂಬ ಅನುಮಾನ ಹೆಚ್ಚಾಗುವಂತೆ ಮಾಡಿದೆ. ಸೋಂಕಿತರ ಪ್ರಯಾಣ ಹಿಸ್ಟರಿಯನ್ನು ಆರೋಗ್ಯ ಇಲಾಖೆ ಮಾಧ್ಯಮಗಳಿಗೆ ನೀಡಿಲ್ಲ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಕೊರೊನಾ ಸೋಂಕಿತರು ಆರೋಗ್ಯ ಇಲಾಖೆ ಸಿಬ್ಬಂದಿಗೆ ಹೆಚ್ಚು ಹೊರೆಯಾಗಿ ಪರಿಣಮಿಸಿದ್ದಾರೆ. ರಾತ್ರಿ 9 ಗಂಟೆಯಾದರೂ ಕೆಲಸ ಮುಗಿಯುತ್ತಿಲ್ಲವಂತೆ. ದೊಡ್ಡವರು ಆರಾಮಾಗಿ ಮೀಟಿಂಗ್ ಮಾಡುತ್ತಾರೆ. ಮುಂದಿನ ದಿನಗಳಲ್ಲಿ ಪ್ರಕರಣಗಳು ಹೆಚ್ಚಾಗಲಿದ್ದು, ಪ್ರತಿಯೊಬ್ಬರದೂ ಟ್ರಾವೆಲ್ ಹಿಸ್ಟರಿ ಸಿದ್ಧಪಡಿಸುವುದು ಕಷ್ಟ ಎನ್ನಲಾಗುತ್ತಿದೆ. ಇದಕ್ಕೆಲ್ಲ ಇಲಾಖೆಯ ಆಯುಕ್ತರು, ಪ್ರಧಾನ ಕಾರ್ಯದರ್ಶಿಗಳೇ ಉತ್ತರಿಸಬೇಕಿದೆ.
ಇತ್ತ, ಹೆಲ್ತ್ ಬುಲೆಟಿನ್ ಫಾರ್ಮೆಟ್ ಬದಲಾಗಿದೆ ಎಂದು ಆರೋಗ್ಯ ಇಲಾಖೆ ಟ್ವೀಟ್ ಮಾಡಿದೆ.