ಬೆಂಗಳೂರು: ಕೊರೊನಾ ಪರಿಹಾರ ನಿಧಿಗೆ ಧನ ಸಂಗ್ರಹ ಕಾರ್ಯವನ್ನು ಕಾಂಗ್ರೆಸ್ ಮುಂದುವರಿಸಿದ್ದು ಇಂದು ಇಬ್ಬರು ನಾಯಕರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ಗೆ ತಮ್ಮ ಪಾಲಿನ ಹಣ ಸಂದಾಯ ಮಾಡಿದ್ದಾರೆ.
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಸೂಚನೆ ಮೇರೆಗೆ ಪ್ರತಿಯೊಬ್ಬ ಕಾಂಗ್ರೆಸ್ ಶಾಸಕರು ಮುಖಂಡರು ತಮ್ಮ ಕೈಲಾದ ಸಹಾಯವನ್ನು ಕೊರೊನಾ ಪರಿಹಾರ ನಿಧಿಗೆ ನೀಡಬೇಕು ಎಂದು ಸೂಚಿಸಿದ್ದರು. ಪ್ರತಿ ಶಾಸಕರು ಕನಿಷ್ಠ ಒಂದು ಲಕ್ಷ ರೂ. ಮೊತ್ತವನ್ನು ಆದರೂ ನೀಡಬೇಕು ಎಂದು ಸೂಚಿಸಿದ ಹಿನ್ನೆಲೆ ಹಲವರು ಈಗಾಗಲೇ ಹಣ ಸಂದಾಯ ಮಾಡಿದ್ದು, ಬಾಕಿ ಉಳಿದ ಕೆಲವರು ಕೂಡ ಸಂದಾಯ ಮಾಡುತ್ತಿದ್ದಾರೆ.
ತಾವು ನೀಡುವ ಪರಿಹಾರ ಮೊತ್ತದ ಚೆಕ್ಅನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ಗೆ ಹಸ್ತಾಂತರ ಮಾಡುತ್ತಿದ್ದಾರೆ. ಎಲ್ಲರಿಂದ ಚೆಕ್ ಸ್ವೀಕರಿಸಿದ ನಂತರ ಡಿಕೆಶಿ ಇದನ್ನ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯಗೆ ಹಸ್ತಾಂತರಿಸಲಿದ್ದಾರೆ. ಈ ಹಸ್ತಾಂತರ ಸಂದರ್ಭ ತಮ್ಮ ಕೈಲಾದ ಮೊತ್ತದ ಸಹಾಯಧನದ ಚೆಕ್ ಕೂಡ ಸಿದ್ದರಾಮಯ್ಯಗೆ ನೀಡಲಿದ್ದಾರೆ.