ಬೆಂಗಳೂರು:ಪಾದರಾಯನಪುರ ಪಾಲಿಕೆ ಸದಸ್ಯರಿಗೆ ಕೊರೊನಾ ಪಾಸಿಟಿವ್ ಎಂದು ತಿಳಿದ ಬಳಿಕ ಆರೋಗ್ಯಾಧಿಕಾರಿಗಳ ಒತ್ತಾಯದ ಮೇರೆಗೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದಾರೆ ಕಾರ್ಪೊರೇಟರ್ ಇಮ್ರಾನ್ ಪಾಷಾ. ಆದರೆ ಈತ ಚಿಕಿತ್ಸೆಗೆ ತೆರಳುವ ವೇಳೆ ನೂರಾರು ಜನರನ್ನು ಸೇರಿಸಿ ರೋಡ್ ಶೋ ನಡೆಸಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಕೊರೊನಾ ಬಂದರೂ ಕಾರ್ಪೊರೇಟರ್ ರೋಡ್ ಶೋ... ನೆಟ್ಟಿಗರಿಂದ ತರಾಟೆ - Padarayanapura Policy Member
ಕೊರೊನಾ ಸಾಂಕ್ರಾಮಿಕ ವೈರಸ್ ಅಂತ ಗೊತ್ತಿದ್ರು, ನೂರಾರು ಜನರನ್ನು ಸೇರಿಸಿ ರೋಡ್ ಶೋ ಮಾಡುವ ಮೂಲಕ ಏನೋ ಸಾಧಿಸಿದವರಂತೆ ವರ್ತಿಸಿದ ಪಾದರಾಯನಪುರ ಕಾರ್ಪೊರೇಟರ್ ಇಮ್ರಾನ್ ಪಾಷಾ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಕೊರೊನಾ ಸಾಂಕ್ರಾಮಿಕ ವೈರಸ್ ಅಂತ ಗೊತ್ತಿದ್ದರೂ ಸಹ ನೂರಾರು ಜನರನ್ನು ಸೇರಿಸಿ ರೋಡ್ ಶೋ ಮಾಡುವ ಮೂಲಕ ಏನೋ ಸಾಧಿಸಿದವರಂತೆ ವರ್ತಿಸಿದ್ದಾರೆ. ಅಲ್ಲದೇ ಆ ವಿಡಿಯೋವನ್ನು ಫೇಸ್ಬುಕ್ನಲ್ಲೂ ಅಪ್ಲೋಡ್ ಮಾಡಿದ್ದಾರೆ. ಇದೀಗ ವಿಡಿಯೋ ನೋಡಿರುವ ನೆಟ್ಟಿಗರು ಕಾರ್ಪೊರೇಟರ್ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸದ್ಯ ಪಾದರಾಯನಪುರ ಕಂಟೈನ್ಮೆಂಟ್ ಝೋನ್ ಆಗಿದೆ. ಇಂತಹ ಸಂದರ್ಭದಲ್ಲೂ ಅಷ್ಟು ಜನರನ್ನು ಸೇರಿಸುವ ಅವಶ್ಯಕತೆ ಏನಿತ್ತು. ಜನಪ್ರತಿನಿಧಿಗಳೇ ಈ ರೀತಿ ವರ್ತಿಸಿದ್ರೆ ಜನಸಾಮಾನ್ಯರ ಕತೆ ಏನು ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಅರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಹಕರಿಸದೆ ಗಂಟೆಗಟ್ಟಲೆ ರಸ್ತೆಯಲ್ಲಿ ಕೊರೊನಾ ಯೋಧರನ್ನ ಕಾಯಿಸೋದು ಎಷ್ಟು ಸರಿ ಎಂಬುದು ಜನರ ಪ್ರಶ್ನೆಯಾಗಿದೆ.