ಬೆಂಗಳೂರು:ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆಸ್ಟಿನ್ ಟೌನ್ನಲ್ಲಿ ಮೂವರಿಗೆ ಸೋಂಕು ತಗುಲಿದೆ.
ಪ್ರಾಥಮಿಕ ಸಂಪರ್ಕದಲ್ಲಿದ್ದವರಿಗೆ ಕೊರೊನಾ ಪಾಸಿಟಿವ್: ಸಿಲಿಕಾನ್ ಸಿಟಿಯಲ್ಲಿ ಆತಂಕ
ಬೆಂಗಳೂರಿನ ನಗರದ ಆಸ್ಟಿನ್ ಟೌನ್ನ ನಿವಾಸಿಗೆ ಕೊರೊನಾ ಕೇಸ್ ದೃಢಪಟ್ಟಿತ್ತು. ಇದೀಗ ಸೋಂಕಿತನ ಪ್ರಾಥಮಿಕ ಸಂಪರ್ಕದಲ್ಲಿದ್ದ ಮೂವರಿಗೆ ಸೋಂಕು ಹರಡಿಕೊಂಡಿರುವುದು ದೃಢವಾಗಿದೆ.
ಮೇ. 22ರಂದು ನಗರದ ಆಸ್ಟಿನ್ ಟೌನ್ನ ನಿವಾಸಿಗೆ ಕೊರೊನಾ ಕೇಸ್ ದೃಢಪಟ್ಟಿತ್ತು. ಇದೀಗ ಸೋಂಕಿತನ ಪ್ರಾಥಮಿಕ ಸಂಪರ್ಕದಲ್ಲಿದ್ದ ಮೂವರಿಗೆ ಸೋಂಕು ಪತ್ತೆಯಾಗಿದೆ. ಇತ್ತ ಆರ್ಟಿ ನಗರದಲ್ಲಿ ಒಂದು ಕೇಸ್ ಪತ್ತೆಯಾಗಿದ್ದು, ಜೈಪುರದಿಂದ ಬಂದಿದ್ದ ವ್ಯಕ್ತಿಗೆ ಪಾಸಿಟಿವ್ ಬಂದಿದೆ.
ಪಾದರಾಯನಪುರದಲ್ಲಿ ಮತ್ತೊಂದು ಪಾಸಿಟಿವ್ ಕೇಸ್ ಬಂದಿದ್ದು, ಕ್ವಾರಂಟೈನ್ನಲ್ಲಿದ್ದವರಿಗೆ ಸೋಂಕು ಪತ್ತೆಯಾಗಿದೆ. ಒಟ್ಟು 7 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ ಎರಡು ಪ್ರಕರಣಗಳಿಗೆ ಸೋಂಕು ತಗುಲಿದ ಬಗ್ಗೆ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಸದ್ಯ ಈ ಬಗ್ಗೆ ಮಧ್ಯಾಹ್ನದ ಹೆಲ್ತ್ ಬುಲೆಟಿನ್ನಲ್ಲಿ ಇಲಾಖೆ ತಿಳಿಸಲಿದೆ.