ಬೆಂಗಳೂರು:ಕೊರೊನಾ ವಾರಿಯರ್ಸ್ ಆಗಿ ಮುಂಚೂಣಿಯಲ್ಲಿರುವ ಪೊಲೀಸರಿಗೆ ಸೋಂಕು ಕಾಣಿಸಿಕೊಂಡ ಹಿನ್ನೆಲೆ ನಗರ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದೆ. ಹೀಗಾಗಿ ಇನ್ಮುಂದೆ ನಗರದ ಕಂಟೇನ್ಮೆಂಟ್ ಏರಿಯಾಗಳಲ್ಲಿ ಕಾರ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿಗೆ ಹೊಸ ರೀತಿಯ ಪಿಪಿಇ ಕಿಟ್ ನೀಡಲು ನಿರ್ಧರಿಸಿದೆ.
ವೈದ್ಯಕೀಯ ಸಿಬ್ಬಂದಿಗೆ ನೀಡಲಾಗುವ ಪಿಪಿಇ ಸಮವಸ್ತ್ರವನ್ನು ಕೊರೊನಾ ನಿಯಂತ್ರಿತ ಪ್ರದೇಶಗಳಲ್ಲಿ ಕೆಲಸ ಮಾಡುವ ಪೊಲೀಸರಿಗೆ ಈವರೆಗೆ ನೀಡಲಾಗುತ್ತಿತ್ತು. ಇದನ್ನು ಧರಿಸಿ ಬಿಸಿಲಿನಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಸಾಕಷ್ಟು ರೀತಿಯ ಸಮಸ್ಯೆಗಳನ್ನು ಉಂಟಾಗಿರುವುದನ್ನು ಅರಿತ ಪೊಲೀಸ್ ಇಲಾಖೆ, ಸಿಬ್ಬಂದಿಯ ಆರೋಗ್ಯ ಸುರಕ್ಷತೆ ದೃಷ್ಟಿಯಿಂದ ಹೊಸ ಮಾದರಿಯ ಪಿಪಿಇ ಕಿಟ್ ನೀಡಲು ವ್ಯವಸ್ಥೆ ಮಾಡಿಕೊಂಡಿದೆ.
ಕೊರೊನಾ ಪೊಲೀಸ್ ವಾರಿಯರ್ಸ್ಗೆ ಬಂತು ಹೊಸ ಪಿಪಿಇ ಕಿಟ್ ಹಳೆ ಪಿಪಿಇ ಕಿಟ್ನಲ್ಲಿ ಆಗುತ್ತಿದ್ದ ಸಮಸ್ಯೆಗಳೇನು ?
ಪಿಪಿಇ ಕಿಟ್ ಧರಿಸಿ ಫೀಲ್ಡ್ನಲ್ಲಿ ಕೆಲಸ ಮಾಡುವ ಪೊಲೀಸರಿಗೆ ಸಾಕಷ್ಟು ಸಮಸ್ಯೆ ಉಂಟಾಗುತ್ತಿದ್ದವು. ಹಿರಿಯ ಅಧಿಕಾರಿಗಳ ಬಳಿ ಈ ಕುರಿತು ಹೇಳಿಕೊಂಡಿದ್ದರು. ಹಾಲಿ ಕಿಟ್ಗಳು ಪಾಸ್ಟಿಕ್ ಬೆಸ್ಟ್ ಮೀಟಿರಿಯಲ್ಗಳು ಹಾಗೂ ಪಾಲಿತಿನ್ನಿಂದ ಕೂಡಿರುವುದರಿಂದ ಒಳಾಂಗಣದಲ್ಲಿ ಬಳಸಲು ಸೂಕ್ತವಾಗಿದೆ. ಇದನ್ನು ಧರಿಸಿದರೆ ಒಳಗೆ ಗಾಳಿ ಪ್ರವೇಶ ಕಷ್ಟ. ತಂಪಾದ ಪ್ರದೇಶಗಳಲ್ಲಿ ಬಳಕೆಗೆ ಯೋಗ್ಯವಾಗಿದೆ. ಹೊರಗೆ ಕೆಲಸ ಮಾಡುವ ಪೊಲೀಸರು ಪಿಪಿಇ ಕಿಟ್ ಧರಿಸುತ್ತಿದ್ದರಿಂದ ಒಳಗೆ ಗಾಳಿ ಪ್ರವೇಶಿಸದೆ ಉಸಿರಾಟಕ್ಕೂ ತೊಂದರೆಯಾಗುತ್ತಿತ್ತು. ಹೆಚ್ಚು ಸೆಖೆ, ಇದರಿಂದ ಒಂದು ರೀತಿಯಲ್ಲಿ ಕೆಟ್ಟವಾಸನೆ ಸೇರಿದಂತೆ ಅನೇಕ ತರಹ ಸಮಸ್ಯೆಗಳನ್ನು ಅನುಭವಿಸುತ್ತಿದ್ದರು. ಇದೀಗ ಕೊಡಮಾಡುವ ಹೊಸ ಪಿಪಿಸಿ ಕಿಟ್ ಪೊಲೀಸರಿಗೆ ಹೆಚ್ಚು ಸಹಾಯವಾಗಲಿದೆ.
ಏನಿದು ಹೊಸ ಪಿಪಿಇ ಕಿಟ್ ?
ಪೊಲೀಸರಿಗೆ ನೀಡಲಾಗುತ್ತಿರುವ ಹೊಸ ಯುನಿಫಾರ್ಮ್ ಬಳಕೆಗೆ ಯೋಗ್ಯವಾಗಿದೆ. ಟನ್ ಬೇಸ್ಡ್ ಮಟಿರಿಯಲ್ನಿಂದ ಕೂಡಿದ್ದು, ಉಸಿರಾಡಲು ಗಾಳಿ ಬರುವ ಹಾಗೆ ವಿನ್ಯಾಸ ಮಾಡಲಾಗಿದೆ. ಬಿಸಿಲು ಹಾಗೂ ಮಳೆಯನ್ನು ತಡೆಯುವ ಸಾಮರ್ಥ್ಯವಿದೆ. ಪ್ರಮುಖವಾಗಿ ಖಾಕಿ ಬಣ್ಣದಿಂದ ಕೂಡಿರುವ ಯೂನಿಫಾರ್ಮ್ ಮೇಲೆ ಪೊಲೀಸ್ ಎಂದು ಬರೆಯಲಾಗಿದೆ.
ಕೊರೊನಾ ವೈರಸ್ ನಿಯಂತ್ರಣ ಪ್ರದೇಶ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಪೊಲೀಸರಿಗೆ ಪ್ರಾಯೋಗಿಕವಾಗಿ ಹೊಸ ಪಿಪಿಇ ಕಿಟ್ ನೀಡಲಾಗುತ್ತಿದೆ. ಒಮ್ಮೆ ಇದು ಸಕಸ್ಸ್ ಆದರೆ ಎಲ್ಲಾ ಪೊಲೀಸ್ ಸಿಬ್ಬಂದಿಗೂ ನೀಡುವ ಚಿಂತನೆ ಮಾಡಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಒಂದು ಪಿಪಿಇ ಕಿಟ್ ಸುಮಾರು 800ರಿಂದ 1000 ರೂ. ಖರ್ಚಾಗಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.