ಬೆಂಗಳೂರು:ಕೊರೊನಾ ಮಹಿಳಾ ರೋಗಿಗಳು ಆಸ್ಪತ್ರೆಯಲ್ಲಿ ಡ್ಯಾನ್ಸ್ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬೆಂಗಳೂರು: ಆತ್ಮಸ್ಥೈರ್ಯಕ್ಕಾಗಿ ಕೊರೊನಾ ಸೋಂಕಿತರಿಂದ ಭರ್ಜರಿ ಡ್ಯಾನ್ಸ್ - ವಿಡಿಯೋ ವೈರಲ್ - ಬೆಂಗಳೂರು ಕೊರೊನಾ ಲೇಟೆಸ್ಟ್ ನ್ಯೂಸ್
ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಕೊರೊನಾ ಸೋಂಕಿತರು ಡ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆತ್ಮಸ್ಥೈರ್ಯಕ್ಕಾಗಿ ಡ್ಯಾನ್ಸ್ ಮಾಡಿದ ಸೋಂಕಿತರು
ಕೊರೊನಾ ಬಂದ ತಕ್ಷಣ ಕೆಲವರು ಹೆದರಿ ಪ್ರಾಣವನ್ನೇ ಕಳೆದುಕೊಳ್ಳುತ್ತಾರೆ. ಆದರೆ ಇಂತಹ ಸಂದರ್ಭದಲ್ಲಿ ಧೈರ್ಯದಿಂದ ಇದ್ದು, ನಮಗೆ ಸೋಂಕು ತಗುಲಿದೆ ಎಂಬುದನ್ನು ಮರೆತು ಖುಷಿಯಿಂದ ಸಮಯ ಕಳೆಯಬೇಕೆಂದು ಆಸ್ಪತ್ರೆಯಲ್ಲಿ ಡ್ಯಾನ್ಸ್ ಮಾಡುವ ಮೂಲಕ ರೋಗಿಗಳು ಆತ್ಮಸ್ಥೈರ್ಯ ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗ್ತಿದೆ.
ಸದ್ಯ ಡ್ಯಾನ್ಸ್ ಮಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಆರೋಗ್ಯಾಧಿಕಾರಿಗಳು ಈ ಘಟನೆ ಯಾವ ಆಸ್ಪತ್ರೆಯಲ್ಲಿ ನಡೆದಿದೆ ಎಂಬುದರ ಕುರಿತಂತೆ ಪರಿಶೀಲನೆ ನಡೆಸುತ್ತಿದ್ದಾರೆ.
Last Updated : Jul 9, 2020, 1:22 PM IST