ಬೆಂಗಳೂರು: ಕೊರೊನಾ ಸಾಂಕ್ರಾಮಿಕ ರೋಗ ಹರಡುವಿಕೆ, ವಿಶ್ವಾದ್ಯಂತ ಕೋಟ್ಯಂತರ ಜನರ ಬದುಕನ್ನು ನಾನಾ ರೀತಿಗಳಲ್ಲಿ ಪ್ರಭಾವಿಸಿದೆ. ಕೋವಿಡ್ 19ರ ಕುರಿತ ಎಚ್ಚರಿಕೆ ಸಂದೇಶಗಳು, ಹಾಗೂ ವೈರಸ್‍ನ ಹರಡುವಿಕೆ ಸಂಬಂಧ ಮಾಧ್ಯಮಗಳ ವರದಿಯಿಂದ ಜನರಲ್ಲಿ ಭೀತಿ, ಹೆದರಿಕೆ, ತಲ್ಲಣ, ಅರ್ಥವಾಗುವಂತದ್ದೇ.
ಯಾವುದೇ ಒಂದು ರೋಗದ ಕುರಿತ ಭೀತಿ ಹಾಗೂ, ತಲ್ಲಣ ಹೆಚ್ಚಿನದಾಗಿದ್ದು, ವಯಸ್ಕರು ಹಾಗೂ ಮಕ್ಕಳಿಬ್ಬರಲ್ಲೂ ಬಲವಾದ ತುಮುಲ-ಭಾವಣಗಳಿಗೆ ಇದು ಕಾರಣವಾಗಬಲ್ಲದು.
ಒತ್ತಡದಾಯಕ ಸನ್ನಿವೇಶವೊಂದಕ್ಕೆ ಪ್ರತಿಯೊಬ್ಬರೂ ಬೇರೆ ಬೇರೆ ತೆರನಾಗಿ ಪ್ರತಿಕ್ರಿಯಿಸಬಹುದು. ಒಬ್ಬರ ಹಿನ್ನೆಲೆ, ಅವರನ್ನು ಇತರರಿಂದ ಪ್ರತ್ಯೇಕಿಸುವ ಮನಸ್ಥಿತಿ, ಅವರು ವಾಸಿಸುವ ಸ್ಥಳ ಹಾಗೂ ಸಮುದಾಯಗಳು ಅವರು ಈ ಸಾಂಕ್ರಾಮಿಕ ರೋಗಕ್ಕೆ ಪ್ರತಿಕ್ರಿಯಿಸುವ ರೀತಿಯನ್ನು ನಿರ್ಧರಿಸುತ್ತದೆ.
ಮಾನಸಿಕ ಆರೋಗ್ಯ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ಹಲವಾರು ಹೆಸರಾಂತ ಸಮಾತಜ್ಞರು, ಸಂಶೋಧಕರು, ಇಂತಹ ಒತ್ತಡದ ಸನ್ನಿವೇಶದಲ್ಲಿ ಅತಂಕ ಮತ್ತು ಒತ್ತಡವನ್ನು ನಿರ್ವಹಿಸುವ ಬಗ್ಗೆ ತಮ್ಮ ಪರಿಣತ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಜಾಗತಿಕ ಮಾನಸಿಕ ಆರೋಗ್ಯ ತಜ್ಞ ಕ್ರಿಸ್ ಉಂಡರ್‍ಹಿಲ್ ಅವರು ಈ ಒತ್ತಡ ಹಾಗೂ ಆತಂಕ ನಿವಾರಣೆಗೆ ಮನೆಯಿಂದಲೇ ಕೆಲಸ ನಿರ್ವಹಿಸುತ್ತಿರುವವರಿಗೆ (ವರ್ಕ್ ಫ್ರಂ ಹೋಂ) "ದಿನಕ್ಕೊಂದು ಚೌಕಟ್ಟು" ಒಳ್ಳೆಯ ಪ್ರಯತ್ನ.
ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?
ಈ ಸವಾಲು ಎದುರಾಗುವ ದಿನಗಳ ಮೊದಲು ನೀವು ಹೇಗಿದ್ದಿರೋ ಇರುವ ಹಾಗೆ ಇದ್ದು ಬಿಡಿ. ಬೆಳಗ್ಗೆ ಎದ್ದು ಬಿಡಿ, ಶೇವ್ ಮಾಡಿ, ಸ್ನಾನ ಮಾಡಿ, ತಿಂಡಿ ತಿನ್ನಿ...ಹೀಗೆ," ಎಂದು ವಿವರಿಸುತ್ತಾರೆ ಅವರು.
"ದಿನಾಲೂ ಕೆಲಸಕ್ಕಾಗಿ ಒಂದು ಅವಧಿಯನ್ನು ನಿಗದಿ ಪಡಿಸಿ. ಕೆಲಸದ ನಡುವೆ ಸಣ್ಣ-ಸಣ್ಣ ಅವಧಿಯ ವಿರಾಮ ತೆಗೆದುಕೊಳ್ಳಿ," ಎಂಬ ಸಲಹೆ ನೀಡುತ್ತಾರೆ ಅವರು.
ಇತರ ಚಟುವಟಿಕೆಗಳಾದ ಅಡುಗೆ, ಮನೆ ಕೆಲಸಗಳು, ಸಂಗೀತ ಆಲಿಸುವುದು, ಮತ್ತಿತರ ಚಟುವಟಿಕೆಗಳನ್ನು ಕೂಡಾ ಕೆಲಸದ ಏಕಾತಾನತೆಯಿಂದ ತಪ್ಪಿಸಿಕೊಳ್ಳಲು ಉಂಡರ್‍ಹಿಲ್ ಸಲಹೆ ನೀಡುತ್ತಾರೆ. "ಸುದ್ದಿಯಿಂದ ವಿಮುಖವಾಗುವುದು ಕೂಡಾ ಈ ಅವಧಿಯಲ್ಲಿ ತಲ್ಲಣದ ಭಾವನೆ ಹೆಚ್ಚಿಸಬಹುದು," ಎಂದು ಅವರು ಎಚ್ಚರಿಕೆ ನೀಡುತ್ತಾರೆ.
ಆತಂಕದಲ್ಲಿರುವ ಸ್ನೇಹಿತರಿಗೆ ಹಾಗೂ ಕುಟುಂಬ ಸದಸ್ಯರಿಗೆ ಹೇಗೆ ನೆರವಾಗುವುದು?
ಕ್ರೈಸಿಸ್ ಟೆಕ್ಟ್‍ಲೈನ್ ಸಂಸ್ಥೆಯ ಸಹ ಸಂಸ್ಥಾಪಕ ಹಾಗೂ ಮುಖ್ಯ ದತ್ತಾಂಶ ವಿಜ್ಞಾನಿ ಬಾಬ್ ಫಿಲ್ಬಿನ್ ಪ್ರಕಾರ ಇಂತಹ ಅನಿಶ್ಚಿತ ವಿಶ್ವವ್ಯಾಪ್ತಿ ಬಿಕ್ಕಟ್ಟು ಎಲ್ಲರ ಮೇಲೂ ಅತೀವ ಒತ್ತಡ ಉಂಟು ಮಾಡಬಹುದಾಗಿದೆ ಹಾಗೂ ನಾನಾ ಭಾವನೆಗಳನ್ನು ಉಂಟು ಮಾಡಬಹುದ್ದಾಗಿದೆ. "ಹೀಗೆ ಅನಿಶ್ವಿತತೆ, ತಲ್ಲಣಗಳನ್ನು ಎದುರಿಸುತ್ತಿರುವವರು ದಿನ, ವಾರ, ಹಾಗೂ ವರ್ಷದಂತಹ ಶಬ್ದಗಳನ್ನು ಬಳಸುವುದರ ಮೂಲಕ ತಮಗೆ ತಾವೇ ಒಂದು ಅವಧಿಯನ್ನು ನಿಗದಿಪಡಿಸಿಕೊಳ್ಳುತ್ತಾರೆ ಹಾಗೂ ತಮ್ಮನ್ನು ತಾವೇ ಸಂತೈಸಿಕೊಳ್ಳುತ್ತಾರೆ. ಈ ಬಿಕ್ಕಟ್ಟು ಸುದೀರ್ಘವಾಗಲಿಕ್ಕಿಲ್ಲ ಎನ್ನುವುದನ್ನು ಅವರು ತಮಗೆ ತಾವೇ ಹೇಳಿಕೊಳ್ಳುತ್ತಾರೆ," ಎನ್ನುತ್ತಾರೆ ಅವರು.
"ಅಂತಹ ಭಾವನೆಗಳಿಂದ ತೊಳಲಾಡುತ್ತಿರುವವರಿಗೆ ನಾವು ಅವರ ತೆರನಾಗಿಯೇ ಯೋಚಿಸುತ್ತಿರುವವರು ಹಲವಾರು ಜನರಿದ್ದಾರೆ ಎಂದು ನಾವು ಮನವರಿಕೆ ಮಾಡಿಕೊಡಬೇಕಿದೆ. ತಲ್ಲಣಗಳನ್ನು ಸಾಮಾನ್ಯೀಕರಣಗೊಳಿಸಿ, ಒಬ್ಬರನ್ನು ಸಾಮಾನ್ಯರಂತೆ ಯೋಚಿಸುತ್ತಿರುವವಂತೆ ಮನವೊಲಿಸಬೇಕು. ಅವರೊಬ್ಬರೇ ಆ ತೆರನಾಗಿ ಯೋಚಿಸುತ್ತಿಲ್ಲ ಎಂಬುವುದನ್ನು ನಂಬಿಕೆ ಹುಟ್ಟುವಂತೆ ಮಾಡುವುದು ಅವರ ಆತಂಕವನ್ನು ದೂರ ಮಾಡುತ್ತದೆ," ಎನ್ನುತ್ತಾರೆ ಅವರು.