ಬೆಂಗಳೂರು:ನಗರದಲ್ಲಿಕೊರೊನಾ ತೀವ್ರತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಸೋಂಕಿತರು ಗುಣಮುಖರಾಗಲು ಹೆಲ್ತ್ ಇನ್ಶುರೆನ್ಸ್ ಮಾಡಿಸಿಕೊಂಡು ಇದನ್ನು ನಂಬಿ ಆಸ್ಪತ್ರೆಗೆ ದಾಖಲಾಗುವ ಆಗುವ ಮುನ್ನ ಎಚ್ಚರವಹಿಸಬೇಕಾಗುತ್ತದೆ.
ಹಣ ಬಿಡುಗಡೆ ಮಾಡದ ಇನ್ಶೂರೆನ್ಸ್ ಕಂಪನಿ ವಿರುದ್ಧ ಸೋಂಕಿತ ಯುವಕನ ಆಕ್ರೋಶ ಅನಾರೋಗ್ಯದ ಸಂದರ್ಭದಲ್ಲಿ ನೆರವಾಗಲೆಂದು ಪ್ರತಿ ವರ್ಷ ಸಾವಿರಾರು ರೂಪಾಯಿ ಕಟ್ಟಿದ್ರೂ ಹೆಲ್ತ್ ಇನ್ಶುರೆನ್ಸ್ ಕಂಪನಿಯೊಂದು ಆರೋಗ್ಯ ವಿಮೆ ಇದ್ರೂ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಕೊರೊನಾ ಸೋಂಕಿತರೊಬ್ಬರು ವಿಡಿಯೋ ಮಾಡಿ ದಾಖಲೆ ಸಮೇತ ಆರೋಪಿಸಿದ್ದಾರೆ.
ಆರೋಗ್ಯ ವಿಮಾ ಕಂಪನಿಗಳು ಕೇಂದ್ರ ಸರ್ಕಾರದ ಆದೇಶವನ್ನೇ ಗಾಳಿಗೆ ತೂರುತ್ತಿವೆ. ಹೆಲ್ತ್ ಇನ್ಶುರೆನ್ಸ್ ಇದ್ರೂ ವಿಮಾ ಕಂಪನಿಗಳು ಹಣ ನೀಡುತ್ತಿಲ್ಲ. ಈ ಮೊದಲೇ ಕೇಂದ್ರ ಸರ್ಕಾರ ಕೊರೊನಾ ರೋಗಿಯ ಚಿಕಿತ್ಸೆಗೂ ಹೆಲ್ತ್ ಇನ್ಶುರೆನ್ಸ್ ಸಿಗಲಿದೆ ಅಂತಾ ಸ್ಪಷ್ಟಪಡಿಸಿತ್ತು. ಹೀಗಿದ್ರೂ ಕೂಡ ವಿಮಾ ಕಂಪನಿಗಳು ಕೊರೊನಾ ರೋಗಿಗಳಿಗೆ ಹೆಲ್ತ್ ಇನ್ಶುರೆನ್ಸ್ ಬಿಡುಗಡೆ ಮಾಡ್ತಿಲ್ಲ ಎಂದು ಇವರು ಆರೋಪಿಸಿದ್ದಾರೆ.
ಆಸ್ಪತ್ರೆಯಿಂದ ಎರಡು ಬಾರಿ ಲೆಟರ್ ಕಳಿಸಿದ್ರೂ ಇನ್ಶುರೆನ್ಸ್ ಕಂಪನಿ ರಿಜೆಕ್ಟ್ ಮಾಡಿದೆ. ಸೀರಿಯಸ್ ಆದ್ರೆ ಮಾತ್ರ ಇನ್ಶುರೆನ್ಸ್ ಬಿಡುಗಡೆ ಮಾಡಲಾಗುತ್ತದೆ. ಮೈಲ್ಡ್ ಸಿಂಪ್ಟಮ್ಸ್ ಇದೆ ಅಂತಾ ವಿಮೆ ನೀಡಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಒಂದು ದಿನ ಆಸ್ಪತ್ರೆಯಲ್ಲಿ ಅಡ್ಮಿಟ್ ಆದ್ರೆ ಇನ್ಶುರೆನ್ಸ್ ನೀಡ್ಬೇಕು ಅಂತ ಕಾನೂನು ಇದೆ. ಹೀಗಿದ್ರೂ ಹೆಲ್ತ್ ಇನ್ಶುರೆನ್ಸ್ ಕಂಪನಿಗಳು ವಿಮೆ ನೀಡಲು ನಿರಾಕರಿಸ್ತಿವೆ. ಸ್ಟಾರ್ ಹೆಲ್ತ್ ಇನ್ಶುರೆನ್ಸ್ಗೆ ಪ್ರತಿ ವರ್ಷ ಈ ಯುವಕ 5,350 ರೂಪಾಯಿ ಪಾವತಿಸಿದ್ದಾರೆ. ವಿಮೆಗಾಗಿ ಆಸ್ಪತ್ರೆಯಿಂದ ಎರಡು ಬಾರಿ ಕಳಿಸಿದ್ರೂ ಮೈಲ್ಡ್ ಸಿಂಪ್ಟಮ್ಸ್ ಎಂಬ ನೆಪವೊಡ್ಡಿ ವಿಮೆ ನಿರಾಕರಿಸಲಾಗಿದೆ. ಈ ಇನ್ಶುರೆನ್ಸ್ ಕಂಪನಿ ವಿರುದ್ಧ ಕೊರೊನಾ ರೋಗಿ ಆಕ್ರೋಶ ವ್ಯಕ್ತಪಡಿಸಿದ್ದು, ಶಿಸ್ತುಕ್ರಮ ಜರುಗಿಸುವಂತೆ ಸೋಂಕಿತ ಯುವಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.