ಕರ್ನಾಟಕ

karnataka

ETV Bharat / state

ಕೊರೊನಾ ಭೀತಿ: ತಾತ್ಕಾಲಿಕವಾಗಿ ಹೈಕೋರ್ಟ್ ಫಿಸಿಕಲ್ ಕಲಾಪ ರದ್ದು

ವಕೀಲರು ಹಾಗೂ ಕೋರ್ಟ್ ಸಿಬ್ಬಂದಿಯ ಸುರಕ್ಷತೆ ದೃಷ್ಟಿಯಿಂದ ಹೈಕೋರ್ಟ್​ನ ಪ್ರಧಾನ ಪೀಠದಲ್ಲಿ ಫಿಸಿಕಲ್ (ಮುಕ್ತ ನ್ಯಾಯಾಲಯ) ಕಲಾಪಗಳನ್ನು ರದ್ದು ಪಡಿಸಲಾಗಿದೆ.

High Court
High Court

By

Published : Jun 30, 2020, 8:44 PM IST

ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿರುವ ಹಿನ್ನೆಲೆ ವಕೀಲರು ಹಾಗೂ ಕೋರ್ಟ್ ಸಿಬ್ಬಂದಿಯ ಸುರಕ್ಷತೆ ದೃಷ್ಟಿಯಿಂದ ಹೈಕೋರ್ಟ್​ನ ಬೆಂಗಳೂರು ಪ್ರಧಾನ ಪೀಠದಲ್ಲಿ ಫಿಸಿಕಲ್ (ಮುಕ್ತ ನ್ಯಾಯಾಲಯ) ಕಲಾಪಗಳನ್ನು ರದ್ದು ಮಾಡಲಾಗಿದೆ.

ಮುಖ್ಯ‌ ನ್ಯಾಯಮೂರ್ತಿ ಎ.ಎಸ್.‌ಓಕ ಅವರ ಸೂಚನೆ ಮೇರೆಗೆ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬಾದಾಮಿಕರ್ ಇಂದು ನೋಟಿಸ್ ಪ್ರಕಟಿಸಿದ್ದಾರೆ‌. ಮುಂದಿನ ಆದೇಶದವರೆಗೆ ಫಿಸಿಕಲ್ ಕಲಾಪ ರದ್ದುಪಡಿಸಿರುವ ಹೈಕೋರ್ಟ್, ತುರ್ತು ಪ್ರಕರಣಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ‌ ಮಾತ್ರವೇ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದೆ.

ಆದರೆ ಧಾರವಾಡ ಹಾಗೂ ಕಲಬುರಗಿ ನ್ಯಾಯ ಪೀಠಗಳು ಈ ಹಿಂದೆ ಪ್ರಕಟಿಸಿರುವ ವೇಳಾಪಟ್ಟಿಯಂತೆ ಕಾರ್ಯನಿರ್ವಹಣೆ ಮಾಡಲಿವೆ ಎಂದು ನೋಟಿಸ್​​ನಲ್ಲಿ ತಿಳಿಸಲಾಗಿದೆ.

ಕೊರೊನಾ ನಿಯಂತ್ರಿಸಲು ಲಾಕ್​​ಡೌನ್ ಘೋಷಿಸಿದ ಬಳಿಕ ಸಾರ್ವಜನಿಕರಿಗೆ ಉಂಟಾದ ಸಮಸ್ಯೆಗಳ ಕುರಿತು ಸಲ್ಲಿಕೆಯಾಗಿರುವ ವಿವಿಧ‌ ಪಿಐಎಲ್​​ಗಳನ್ನು ಇನ್ನು ಮುಂದೆ ಮುಖ್ಯ ನ್ಯಾಯಮೂರ್ತಿ ಎ‌‌.ಎಸ್.ಓಕ ಮತ್ತು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಲಿದೆ ಎಂದು ತಿಳಿಸಲಾಗಿದೆ.

ABOUT THE AUTHOR

...view details