ಬೆಂಗಳೂರು:ದೇಶದಲ್ಲಿ ಲಾಕ್ಡೌನ್ ಜಾರಿಯಲ್ಲಿದೆ. ಹೀಗಾಗಿ ಕರೆಂಟ್, ನೀರಿನ ಬಿಲ್ ಕಟ್ಟದಿದ್ರೂ ಪರ್ವಾಗಿಲ್ಲ ಅಂದ್ಕೊಂಡಿದ್ರೆ ನಿಮ್ಮ ಊಹೆ ತಪ್ಪು. ಪ್ರತಿ ತಿಂಗಳಂತೆ ಈ ತಿಂಗಳೂ ಕೂಡ ಗ್ರಾಹಕರು ವಿದ್ಯುತ್ ಬಿಲ್ ಪಾವತಿ ಮಾಡಲೇಬೇಕು. ಲಾಕ್ಡೌನ್ ಹಿನ್ನೆಲೆ ಮೂರು ತಿಂಗಳ ಕಾಲ ಕೆಲವು ಇಎಂಐ ಪಾವತಿಗೆ ಮಾತ್ರ ವಿನಾಯಿತಿ ನೀಡಲಾಗಿದೆ. ಆದ್ರೆ ನೀರು ಮತ್ತು ಕರೆಂಟ್ ಬಿಲ್ ಕಟ್ಟಲೇಬೇಕಿದೆ ಅಂತ ರಾಜ್ಯ ಇಂಧನ ಇಲಾಖೆ ಮನವಿ ಮಾಡಿದೆ.
ಲಾಕ್ಡೌನ್ ಇದ್ರೂ ನೀರು, ಕರೆಂಟ್ ಬಿಲ್ ಕಟ್ಟಲೇಬೇಕು!
ಲಾಕ್ಡೌನ್ ಇದೇ ಅಂತಾ ಕರೆಂಟ್, ನೀರಿನ ಬಿಲ್ ಕಟ್ಟಂಗಿಲ್ಲ ಅಂದ್ಕೋಬೇಡಿ. ಪ್ರತಿ ತಿಂಗಳಂತೆ ಈ ತಿಂಗಳೂ ಕೂಡ ಗ್ರಾಹಕರು ವಿದ್ಯುತ್ ಬಿಲ್ ಪಾವತಿ ಮಾಡಲೇಬೇಕು.
ಕೊರೊನಾ: ಲಾಕ್ಡೌನ್ ಆಗಿದ್ರೂ ನೀರು, ಕರೆಂಟ್ ಬಿಲ್ ಕಟ್ಟಲೇಬೇಕು
ಬಿಲ್ ಪಾವತಿ ವಿನಾಯಿತಿ ಬಗ್ಗೆ ಕೇಂದ್ರ ಇಂಧನ ಸಚಿವಾಲಯದಿಂದ ರಾಜ್ಯ ಸರ್ಕಾರ ಹಾಗೂ ವಿದ್ಯುತ್ ಸರಬರಾಜು ಕಂಪನಿಗಳಿಗೆ ಯಾವುದೇ ನಿರ್ದೇಶನ ಬಂದಿಲ್ಲ. ಹೀಗಾಗಿ ಆನ್ಲೈನ್ ಮೂಲಕ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಗ್ರಾಹಕರಿಗೆ ಇಂಧನ ಇಲಾಖೆ ಸ್ಪಷ್ಟಪಡಿಸಿದೆ. ಇದಲ್ಲದೆ ಹಳೇ ಬಿಲ್ ಪಾವತಿಗೆ ಜಲ ಮಂಡಳಿ ಅವಕಾಶ ನೀಡಿದೆ.
ಆನ್ಲೈನ್ ಮೂಲಕ ಪಾವತಿಗೆ ಕಷ್ಟವಾದಲ್ಲಿ ಸ್ಥಳೀಯ ವಿದ್ಯುತ್ ಸರಬರಾಜು ಕಂಪನಿಗಳ ಉಪ ವಿಭಾಗಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸುವಂತೆ ತಿಳಿಸಲಾಗಿದೆ.