ಬೆಂಗಳೂರು: ಕೊರೊನಾ ಸಾಂಕ್ರಾಮಿಕ ತಗ್ಗಿದಂತಾಗುತ್ತಿದ್ದಂತೆ ಜನ ಭಯ ಬದಿಗಿಟ್ಟು ಎಂದಿನಂತೆ ಸಹಜ ಜೀವನ ನಡೆಸುತ್ತಿದ್ದಾರೆ. ಆದರೆ, ಸಿಲಿಕಾನ್ ಸಿಟಿಯ ಸಸ್ಯಕಾಶಿ ಎಂದೇ ಪ್ರಸಿದ್ಧಿ ಪಡೆದ ಲಾಲ್ಬಾಗ್ ಮೇಲಿನ ಕೊರೊನಾ ಕರಿಛಾಯೆ ಸರಿದಂತೆ ಕಾಣುತ್ತಿಲ್ಲ. ಹೂವುಗಳಿಂದಲೇ ಲಕ್ಷಾಂತರ ಜನರನ್ನು ರಂಜಿಸುತ್ತಿದ್ದ ಫಲಪುಷ್ಪ ಪದರ್ಶನಕ್ಕೂ ಕುತ್ತು ಎದುರಾಗಿದೆ.
ಕೊರೊನಾ ಎಫೆಕ್ಟ್: ಗಣರಾಜ್ಯೋತ್ಸವದಂದು ಲಾಲ್ಬಾಗ್ ಫಲಪುಷ್ಪ ಪ್ರದರ್ಶನ ರದ್ದು..!
ಸಿಲಿಕಾನ್ ಸಿಟಿಯ ಸಸ್ಯಕಾಶಿ ಎಂದೇ ಪ್ರಸಿದ್ಧಿ ಪಡೆದ ಲಾಲ್ಬಾಗ್ ಮೇಲಿನ ಕೊರೊನಾ ಕರಿಛಾಯೆ ಸರಿದಂತೆ ಕಾಣುತ್ತಿಲ್ಲ. ಈ ಬಾರಿ ಗಣರಾಜ್ಯೋತ್ಸವ ದಿನದೊಂದು ಲಾಲ್ಬಾಗ್ ನಲ್ಲಿ ಫಲ-ಪುಷ್ಪ ಪ್ರದರ್ಶನ ರದ್ದುಗೊಳಿಸಲಾಗಿದೆ.
ಕಳೆದ ಹಲವು ದಿನಗಳಿಂದ ಗಣರಾಜ್ಯೋತ್ಸವ ಪ್ರಯುಕ್ತ ಲಾಲ್‌ಬಾಗ್‌ನಲ್ಲಿ ಫ್ಲವರ್ ಶೋ ಮಾಡಬೇಕಾ ಬೇಡವಾ ಎಂಬುದರ ಬಗ್ಗೆ ಗೊಂದಲಗಳಿದ್ದವು. ಇದೀಗ ಕೊನೆಗೂ ಈ ಗೊಂದಲಕ್ಕೆ ತೆರೆ ಬಿದ್ದಿದ್ದು, ಈ ಬಾರಿಯ ಫಲ ಪುಷ್ಪ ಪ್ರದರ್ಶನ ರದ್ದುಗೊಳಿಸಲಾಗಿದೆ.
ಗಣರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವದಂದು ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸುವುದು ಶತಮಾನಗಳಿಂದಲೂ ನಡೆದುಕೊಂಡು ಬಂದಿದೆ. ಆದರೆ, ಕೊರೊನಾ ಅಟ್ಟಹಾಸಕ್ಕೆ ಐತಿಹಾಸಿಕ ಫಲಪುಷ್ಪ ಪ್ರದರ್ಶನವೇ ಮಾಯಾವಾಗಿ ಬಿಟ್ಟಿದೆ. ಈ ಹಿಂದೆ ಕೊರೊನಾ ಕಾರಣದಿಂದಾಗಿ ಆಗಸ್ಟ್‌ನ ಫಲ ಪುಷ್ಪ ಪ್ರದರ್ಶನ ಕೂಡ ರದ್ದುಗೊಳಿಸಲಾಗಿತ್ತು. ಇದಾದ ನಂತರ ಈ ವರ್ಷದ ಮೊದಲ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಬಿಬಿಎಂಪಿಯಿಂದ ಅನುಮತಿ ನೀಡದೇ ಇರುವ ಕಾರಣ ರದ್ದು ಮಾಡಲಾಗಿದೆ.